ಪುತ್ತೂರು: ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯ ಸಿಗುವಂತಾಗಲು ಭಾರತ್ ಕಟ್ಟಡ ಕಾರ್ಮಿಕ ಸಂಘವು ಅವಿರತ ಶ್ರಮದ ಫಲವಾಗಿ ಕಟ್ಟಡ ಕಾರ್ಮಿಕರಿಗೆ ಸಿಗುವ ಪೆನ್ಷನ್, ಆರೋಗ್ಯ, ಶೈಕ್ಷಣಿಕ ಸಹಾಯದ ಮೊತ್ತದಲ್ಲಿ ಸ್ವಲ್ಪ ಮಟ್ಟಿನ ಯಶಸ್ವಿ ಕಂಡಿದೆ ಎಂದು ಭಾರತ್ ಕಟ್ಟಡ ಕಾರ್ಮಿಕ ಸಂಘದ ಗೌರವಧ್ಯಕ್ಷ ಯು.ಲೋಕೇಶ್ ಹೆಗ್ಡೆಯವರು ಹೇಳಿದರು.
ಜ.3ರಂದು ಸಂಘದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ಕಟ್ಟಡ ಕಾರ್ಮಿಕ ನೋರ್ವ ಕೆಲಸ ಮಾಡುವ ಸಂದರ್ಭದಲ್ಲಿ ಮರಣ ಗೊಂಡರೆ ಸಿಗುವ ಮೊತ್ತವು ರೂ೫ ಲಕ್ಷದವರೆಗೆ ಏರಿಕೆಯಾಗಿದೆ. ಹೀಗೆ ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ಗಳು ದೊರಕುತ್ತದೆ. ಆದ್ದರಿಂದ ಸದಸ್ಯರಾಗದೆ ಇನ್ನು ಹೊರಗೆ ಉಳಿದಿರುವವರನ್ನು ನೋಂದಾವಣೆ ಮಾಡಿಸಿ ಸೌಲಭ್ಯ ವಂಚಿತರಿಗೂ ಈ ಎಲ್ಲಾ ಸೌಲಭ್ಯ ಸಿಗುವಂತೆ ತಾವೆಲ್ಲರೂ ಪ್ರಯತ್ನಿಸ ಬೇಕೆಂದು ವಿನಿಂತಿಸುತಿದ್ದೇನೆ ಎಂದರು. ಸಂಘದ ಅಧ್ಯಕ್ಷ ಪೌಲ್ ಡಿಸೋಜರು ಪ್ರಾಸ್ತವಿಕವಾಗಿ ಮಾತನಾಡಿ ಸರಕಾರದ ಸವಲತ್ತು ಬಾರದ ಬಗ್ಗೆ ಈಗಾಗಲೇ ಸಂಘದ ವತಿಯಿಂದ ಅಧಿಕಾರಿಗಳೊಂದಿಗೆ ಮಾತನಾಡಿದ ಬಗ್ಗೆ ವಿವರಿಸಿದರು. ಇನಾಸ್ ವೇಗಸ್ ವಂದಿಸಿದರು.