HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ತೀವ್ರ ಗಾಯಗೊಂಡು ನರಕಯಾತನೆ ಪಡುತ್ತಿರುವ ಹಸು – ವಿಎಚ್‌ಪಿಯಿಂದ ಅಪಘಾತಕ್ಕೀಡಾದ ದನದ ರಕ್ಷಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ರಸ್ತೆಯ ಬದಿಯಲ್ಲಿ ಬಿದ್ದಿದ್ದ ದನಗಳಿಗೆ ಚಿಕಿತ್ಸೆ ಕೊಡಿಸಿ, ಅವುಗಳನ್ನು ರಕ್ಷಿಸುವ ಕೆಲಸವನ್ನು ಸೋಮವಾರ ಉಪ್ಪಿನಂಗಡಿಯ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗ ದಳದ ಘಟಕಗಳು ಮಾಡಿವೆ.

ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿ ೭೫ರ ಬದಿ ಸೋಮವಾರ ಬೆಳಗ್ಗೆ ದನವೊಂದು ಏಳಲಾರದ ಸ್ಥಿತಿಯಲ್ಲಿ ಇರುವುದು ಕಂಡು ಬಂದಿತ್ತು. ಇದರ ತಲೆ, ಕೊಂಬಿಗೆ ತೀವ್ರ ಗಾಯಗಳಾಗಿತ್ತಲ್ಲದೆ, ಕೈಯೊಂದು ತುಂಡಾಗಿತ್ತು. ಅಲ್ಲೇ ಸಮೀಪದ ಚರಂಡಿಯಲ್ಲಿ ಪೊದೆಗಳ ನಡುವೆ ಮತ್ತೊಂದು ದನವು ಗಾಯಗೊಂಡು ನಿಂತಿತ್ತು. ಇದನ್ನು ಕಂಡು ಕೂಡಲೇ ಕಾರ್ಯಪ್ರವೃತರಾದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಉಪ್ಪಿನಂಗಡಿ ಘಟಕದ ಕಾರ್ಯಕರ್ತರು, ರಸ್ತೆ ಬದಿಯಲ್ಲಿ ಏಳಲಾರದ ಸ್ಥಿತಿಯಲ್ಲಿ ಬಿದ್ದಿದ್ದ ದನವನ್ನು ಹಿಡಿದು ಉಪ್ಪಿನಂಗಡಿಯ ಪಶು ಚಿಕಿತ್ಸಾಲಯಕ್ಕೆ ತಂದು ಚಿಕಿತ್ಸೆ ಕೊಡಿಸಿದರು. ಬಳಿಕ ಇದರ ವಾರೀಸುದಾರರನ್ನು ಪತ್ತೆ ಮಾಡಿ ಅವರ ಸುಪರ್ದಿಗೆ ಇದನ್ನು ಒಪ್ಪಿಸಿದರು. ಆದರೆ ಅಲ್ಲೇ ಚರಂಡಿಯಲ್ಲಿ ಗಾಯಗೊಂಡು ನಿಂತಿದ್ದ ಮತ್ತೊಂದು ದನವು ಇವರು ಎಷ್ಟು ಪ್ರಯತ್ನ ಪಟ್ಟರೂ ಹಿಡಿಯಲು ಸಿಕ್ಕದೆ ಭಯದಿಂದ ಅತ್ತಿಂದಿತ್ತ ಓಡಲು ಆರಂಭಿಸಿತ್ತು. ಅದನ್ನು ಅಲ್ಲಿಯೇ ಬಿಟ್ಟು ತೆರಳಿದ ಅವರು ಬಳಿಕ ವೈದ್ಯರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ದನವನ್ನು ಹಿಡಿದು ಅದಕ್ಕೆ ಚಿಕಿತ್ಸೆ ಕೊಡಿಸಿದರು. ಇದಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಇದರ ವಾರೀಸುದಾರರ ಪತ್ತೆಯಾಗಿಲ್ಲ. ಇದು ಸ್ವಲ್ಪ ಸಾವರಿಸಿಕೊಂಡು ಮತ್ತೆ ಇಲ್ಲಿಂದ ಹೋಗಬಹುದು ಎಂದು ವೈದ್ಯರು ಖಚಿತ ಪಡಿಸಿದ ಬಳಿಕ ಆ ದನವನ್ನು ಅಲ್ಲಿಯೇ ಬಿಡಲಾಯಿತು. ರಾತ್ರಿ ಸಮಯದಲ್ಲಿ ಹೆದ್ದಾರಿಯಲ್ಲಿ ಲಾರಿಯೊಂದು ಈ ದನಗಳಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ದನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ನಾಗೇಶ್ ಪ್ರಭು, ಸಂಚಾಲಕ ಚಿದಾನಂದ ಪಂಚೇರು, ಸಹ ಸಂಚಾಲಕ ರವಿನಂದನ್ ನಟ್ಟಿಬೈಲು, ಗೋ ರಕ್ಷಾ ಪ್ರಮುಖ್ ಸುಜೀತ್ ಬೊಳ್ಳಾವು, ಪ್ರಮುಖರಾದ ರವಿ ಇಳಂತಿಲ, ಹೇಮಚಂದ್ರ ಶೆಟ್ಟಿ ಮತ್ತಿತ್ತರರು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.