ಪುತ್ತೂರು: ಕ್ಯಾಂಪ್ಕೋ ನಿರ್ದೇಶಕರಾಗಿ ಆಯ್ಕೆಗೊಂಡ ಕೆದಿಲ ಗ್ರಾಮದ ಕೃಷಿಕ ಇಂಜಿನಿಯರ್ ರಾಘವೇಂದ್ರ ಭಟ್ ಅವರನ್ನು ಬೀಟಿಗೆ ಮುಹಿದ್ದೀನ್ ಜುಮಾ ಮಸೀದಿಯ ವತಿಯಿಂದ ಜ.3ರಂದು ಸನ್ಮಾನಿಸಲಾಯಿತು.
ಮಸೀದಿಯ ಸದರ್ ಉಸ್ತಾದ್ ಉಮರ್ ಮುಸ್ಲಿಯಾರ್ ಅವರು ಮಾತನಾಡಿ ಕೃಷಿಕರ ಮತ್ತು ನಮ್ಮ ಸಮಸ್ಯೆಗೆ ತಕ್ಷಣ ಸ್ಪಂಧಿಸುವ ಗುಣ ಇರುವ ರಾಘವೇಂದ್ರ ಭಟ್ ಅವರು ಕೃಷಿಕರ ಹೆಮ್ಮೆಯ ಸಂಸ್ಥೆಯ ನಿರ್ದೇಶಕರಾಗಿರುವುದು ನಮಗೆ ಹೆಮ್ಮೆ ಎಂದರು. ಸನ್ಮಾನ ಸ್ವೀಕರಿಸಿದ ರಾಘವೇಂದ್ರ ಭಟ್ ಅವರು ಮಾತನಾಡಿ ಕೃಷಿಕರ ಕಷ್ಟಗಳಿಗೆ ಸದಾಸ ಸ್ಪಂಧಿಸುತ್ತೇವೆ. ಕ್ಯಾಂಪ್ಕೋಗೆ ಅಡಿಕೆ ಹಾಕುವುದರಿಂದ ಡಯಾಲಿಸಿಸ್, ಆಂಜಿಯೋಪ್ಲಾಸ್ಟಿ, ತೆರೆದ ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ, ಅಪಘಾತದಿಂದ ಮೃತಪಟ್ಟರೆ, ಕೃಷಿ ಚಟುವಟಿಕೆ ವೇಳೆ ಅಪಘಾತಗೊಂಡರೆ ಅವರಿಗೆ ಕ್ಯಾಂಪ್ಕೋ ಆರ್ಥಿಕ ನೆರವು ನೀಡುತ್ತದೆ. ಇದನ್ನು ಸದುಪಯೋಗ ಮಾಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಬೀಟಿಗೆ ಇದರ ಅಧ್ಯಕ್ಷ ಸುಲೈಮಾನ್ ಬೀಟಿಗೆ, ಕಾರ್ಯದರ್ಶಿ ಹಮೀದ್ ಕುಕ್ಕಾಜೆ, ಜೊತೆಕಾರ್ಯದರ್ಶಿ ಅಹಮ್ಮದ್ ಕರೀಂ ಬೀಟಿಗೆ, ಕಾರ್ಯಕಾರಿ ಸಮಿತಿ ಹಮೀದ್ ಮುದ್ರಾಜೆ, ಸುಲೈಮಾನ್ ಬಡೆಕ್ಕಿಲ, ಉಮ್ಮರ್ ಶಾಫಿ ಬೀಟಿಗೆ, ಅಬ್ಬಾgಸ್ ಬಡೆಕ್ಕಿಲ, ರಝಾಕ್ ಬೀಟಿಗೆ, ಶರೀಪ್ ಬೀಟಿಗೆ, ಉಮರ್ ಬೀಟಿಗೆ, ಮುಸ್ತಫಾ ಬೀಟಿಗೆ ಉಪಸ್ಥಿತರಿದ್ದರು.