- ಸಂಸ್ಕಾರಯುತ ಜೀವನ ಇಂದಿನ ಅಗತ್ಯ: ಶ್ರೀ ನಾಗೇಶ್
ಬೆಟ್ಟಂಪಾಡಿ: ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ಸಂಸ್ಕಾರಯುತ ಜೀವನ ಅಗತ್ಯ ಎಂದು ಕರಾವಳಿ ಪ್ರಾದೇಶಿಕ ಕಛೇರಿ ಉಡುಪಿ ಇಲ್ಲಿನ ಜನಜಾಗೃತಿ ಯೋಜನಾಧಿಕಾರಿ ನಾಗೇಶ್ ಎನ್ ಪಿ ಹೇಳಿದರು. ಅಲ್ಲದೇ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಸಮುದಾಯ ಪಣತೊಡಬೇಕು ಎಂದು ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ‘ಮಾದಕವಸ್ತು ವಿರೋಧಿ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ರವರು ಮಾತನಾಡಿ ಯುವಜನತೆ ದಾರಿ ತಪ್ಪುವ ಹಲವಾರು ವಿಧಾನಗಳನ್ನು ವಿವರಿಸಿ ದುಶ್ಚಟಗಳಿಂದ ದೂರವಿರುವುದರಿಂದ ಪ್ರಾಮುಖ್ಯತೆಯ ಬಗ್ಗೆ ಹೇಳಿದರು. ವಿದ್ಯಾರ್ಥಿಗಳು ಆಯೋಜಿಸಿದಂತಹ ಈ ಅಭಿಯಾನವು ಇನ್ನಷ್ಟು ಜಾಗೃತಿ ಕ್ರಾರ್ಯಕ್ರಮಗಳನ್ನು ನಡೆಸಲು ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವರದರಾಜ ಚಂದ್ರಗಿರಿಯವರು ವಹಿಸಿ ಮಾತನಾಡಿದ ಅವರು ಎನ್ಎಸ್ಎಸ್ ಘಟಕಗಳು ಆಯೋಜಿಸಿದ ಈ ಅಭಿಯಾನವು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು ಮಾದಕ ದ್ರವ್ಯ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು, ಉಪನ್ಯಾಸಕ ವೃಂದದವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಅನಾನುಕೂಲವಾದ ವಿದ್ಯಾರ್ಥಿಗಳು ಗೂಗಲ್-ಮೀಟ್ ಆನ್ಲೈನ್ ವೇದಿಕೆ ಮುಖಾಂತರ ಮನೆಯಲ್ಲಿದ್ದಕೊಂಡು ಕಾರ್ಯಕ್ರಮ ವೀಕ್ಷಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರಿಪ್ರಸಾದ್ ಎಸ್ ಸ್ವಾಗತಿಸಿದರು. ಯುವ ರೆಡ್ಕ್ರಾಸ್ ಘಟಕದ ಸಂಯೋಜಕರಾದ ಡಾ. ದೇವರಾಜ ಆರ್ ಇವರು ಧನ್ಯವಾದ ಸಮರ್ಪಿಸಿದರು. ಎನ್ಎಸ್ಎಸ್ ಸ್ವಯಂಸೇವಕಿ ಚೈತ್ರಾ ಬಿ ಕಾರ್ಯಕ್ರಮ ನಿರೂಪಿಸಿದರು.