HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿಯಲ್ಲಿ ದಿನಾರ್ ಗೋಲ್ಡ್ – ಡೈಮಂಡ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಮತ್ತು ಸುಳ್ಯದಲ್ಲಿ ಆಭರಣ ಉದ್ಯಮದಲ್ಲಿ ವಿಶ್ವಾಸಾರ್ಹ ಸೇವೆಯೊಂದಿಗೆ ಜನರ ಪ್ರೀತಿ ಗಳಿಸಿದ ಪ್ರಸಿದ್ಧ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್ಸ್ ಆದ ದಿನಾರ್ ಗೋಲ್ಡ್ – ಡೈಮಂಡ್ಸ್ ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣ ಬಳಿ ಜ. 4ರಂದು ಶುಭಾರಂಭಗೊಂಡಿತು. ದಿನಾರ್ ಗೋಲ್ಡ್ ಡೈಮಂಡ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಎ.ಪಿ ಅಬ್ದುಲ್ ಸಮದ್ ಮಳಿಗೆಯನ್ನು ಉದ್ಘಾಟಿಸಿದರು.

ಗೋಲ್ಡ್ ವಿಭಾಗವನ್ನು ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀಗಳಾದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸ್.ಬಿ. ದಾರಿಮಿ ಉಪ್ಪಿನಂಗಡಿ ಸಹಿತ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದರು.

ಮಳಿಗೆಯಲ್ಲಿ ಮಕ್ಕಳಿಗಾಗಿ ತಯಾರಿಸಿದ ಲಿಟ್ಲ್ ಸ್ಟಾರ್ ಕಲೆಕ್ಷನ್ ಗಳು, ಪ್ರಪಂಚದಲ್ಲೇ ಪ್ರಸಿದ್ಧ ಪಡೆದಿರುವ ನಿಯಾ ಡೈಮಂಡ್ಸ್, ಅಂತರಾಷ್ಟ್ರೀಯ ಗುಣಮಟ್ಟದ ಡಿಸೈನ್‌ಗಳ ಆಭರಣಗಳು, ಅತ್ಯಾಧುನಿಕ ಶೈಲಿಯಲ್ಲಿ ನೂತನ ಡಿಸೈನರ್ ಗಳು ನಿರ್ಮಿಸಿದ ಆಂಟಿಕ್, ಕೊಲ್ಕತ್ತಾ, ಸಿಂಗಾಪುರ್, ರಾಜ್ ಕೋಟ್,ಬಂಗಾಳಿ ಡಿಸೈನ್, ಇನ್ನಿತರ ಶೈಲಿಯ ಸ್ಪೆಷಲ್ ಆಭರಣಗಳು ಮತ್ತು ಪಾರಂಪರಿಕ ಶೈಲಿಯ ಆಭರಣ, ಮಂಗಳಸೂತ್ರದ ಮಾಂಗಲ್ಯ ಸರಗಳು ಮತ್ತು ಕರಿಮಣಿ ಸರಗಳು ವಿನೂತನ ಮಾದರಿಯಲ್ಲಿ ದೊರೆಯುತ್ತದೆ ಎಂದು ಪಾಲುದಾರರು ತಿಳಿಸಿದ್ದಾರೆ. ಅಲ್ಲದೆ ಚಿನ್ನಾಭರಣಗಳ ಪರಿಶುದ್ಧತೆಯನ್ನು ತಿಳಿಯಲು ಜರ್ಮನ್ ನಿರ್ಮಿತ ಕ್ಯಾರಟ್ ಚೆಕ್ಕಿಂಗ್ ಮೆಶಿನ್ ಮತ್ತು ಫೈಯರ್ ಟೆಸ್ಟಿಂಗ್ ಸೌಲಭ್ಯಗಳು ಸಂಸ್ಥೆಯಲ್ಲಿ ಇದೆ ಎಂದು ಮಾಲಕರು ತಿಳಿಸಿದ್ದಾರೆ.


ದಿನಾರ್ ಗೋಲ್ಡ್ ಉಪ್ಪಿನಂಗಡಿ ಮಳಿಗೆ ಪ್ರಾರಂಭೋತ್ಸದ ಪ್ರಯುಕ್ತ ಆಗಮಿಸಿದ ಗ್ರಾಹಕರಿಗೆ ವಿಶೇಷ ರೀತಿಯ ಬಹುಮಾನ ಗೆಲ್ಲುವ ಯೋಜನೆಯೊಂದಿಗೆ ಪ್ರತೀ ಗಂಟೆಗೆ ಅದೃಷ್ಟ ಕೂಪನ್ ಗೆಲ್ಲುವ ಅವಕಾಶವಿದೆ. ಇದರಲ್ಲಿ ವಿಜೇತರಾದವರಿಗೆ ಫ್ರಿಡ್ಜ್ ,ವಾಶಿಂಗ್ ಮೆಶಿನ್, ಮಿಕ್ಸಿ,ಹಾಗೂ ಇನ್ನಿತರ ಬಹುಮಾನಗಳು ನೀಡಲಾಗುವುದು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.