HomePage_Banner
HomePage_Banner
HomePage_Banner
HomePage_Banner

ಕೆದಂಬಾಡಿ ಗ್ರಾಪಂ ಚುನಾವಣೆ: 2ನೇ ವಾರ್ಡ್‌ನ ಮತ ಎಣಿಕೆಯಲ್ಲಿ ಲೋಪ, ಆರೋಪ | ಚಲಾವಣೆಗಿಂತ ಹೆಚ್ಚು ಮತಗಳನ್ನು ಪಡೆದುಕೊಂಡ ಅಭ್ಯರ್ಥಿಗಳು: ಅಭ್ಯರ್ಥಿಯಿಂದ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 2 ನೇ ವಾರ್ಡ್‌ನ ಮತ ಎಣಿಕೆಯಲ್ಲಿ ಲೋಪ ಕಂಡು ಬಂದಿದ್ದು ಒಟ್ಟು ಚಲಾವಣೆಯಾದ ಮತಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದುಕೊಂಡ ಮತಗಳು ಜಾಸ್ತಿಯಾಗಿರುವ ವಿಷಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ತಡೆಹಿಡಿದು ಪುನಃ ಮತ ಎಣಿಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಈ ವಾರ್ಡ್‌ನ ಪರಾಜಿತ ಅಭ್ಯರ್ಥಿ ರೇಖಾ ಆರ್.ಕೆಯವರು ತಾಲೂಕು ಚುನಾವಣಾ ಅಧಿಕಾರಿಯವರಿಗೆ ದೂರು ನೀಡಿದ್ದಾರೆ.

ಚುನಾವಣೆಯಲ್ಲಿ ೨ ನೇ ವಾರ್ಡ್‌ನಿಂದ ಒಟ್ಟು 707 ಮತಗಳು ಚಲಾವಣೆಯಾಗಿರುತ್ತದೆ. ಆದರೆ ಎಣಿಕೆ ಸಂದರ್ಭದಲ್ಲಿ ೩ ಅಂಚೆ ಮತಗಳು ಲಭ್ಯವಾಗಿದ್ದು ಇದರಿಂದ ಒಟ್ಟು ೭೧೦ ಮತಪತ್ರಗಳಾಗಿದ್ದು ಇದರಲ್ಲಿ ೧೧ ಮತ ಪತ್ರಗಳು ಅಸಿಂಧುಗೊಂಡಿರುತ್ತದೆ. ಸಿಂಧುವಾಗಿರುವ ಒಟ್ಟು ಮತ ಪತ್ರಗಳ ಸಂಖ್ಯೆ ೬೯೯ ಆಗಿರುತ್ತದೆ. ಒಂದು ಮತ ಪತ್ರದಲ್ಲಿ ೪ ಜನ ಅಭ್ಯರ್ಥಿಗಳಿದ್ದು ಓರ್ವನಿಗೆ ೨ ಮತಗಳನ್ನು ಚಲಾಯಿಸಬಹುದಾಗಿದೆ. ಹೀಗಿರುವಲ್ಲಿ ಒಟ್ಟು ೧೩೯೮ ಮತಗಳು ಎಣಿಕೆಯಾಗಿರುತ್ತದೆ. ಆದರೆ ಘೋಷಿತ ಫಲಿತಾಂಶದಲ್ಲಿ ಒಟ್ಟು ೪ ಜನ ಅಭ್ಯರ್ಥಿಗಳಿಗೆ ಕ್ರಮವಾಗಿ ಅಸ್ಮಾ ೪೨೩, ಕವಿತಾ ೪೦೯, ರೇಖಾ ಆರ್.ಕೆ ೪೧೭, ಸುಜಾತ ೪೩೩ ಆಗಿದ್ದು ಒಟ್ಟು ೧೬೮೨ ಮತಗಳು ಎಣಿಕೆಯಾಗಿರುತ್ತದೆ. ಮತ ಎಣಿಕೆಯಲ್ಲಿ ೨೮೪ ಮತಗಳು ಹೆಚ್ಚುವರಿಯಾಗಿ ಎಣಿಕೆಯಾಗಿರುತ್ತದೆ. ಆದ್ದರಿಂದ ಚುನಾವಣಾ ಎಣಿಕೆ ಕಾರ್ಯದ ಬಗ್ಗೆ ಲೋಪವಿದ್ದು ಚುನಾವಣೆ ಮತ ಎಣಿಕೆಯಲ್ಲಿ ಸಂಶಯ ಮೂಡುತ್ತಿದೆ. ಆದ್ದರಿಂದ ಈ ಕೂಡಲೇ ಘೋಷಿತ ಫಲಿತಾಂಶವನ್ನು ತಡೆ ಹಿಡಿದು ಪುನಃ ಮತ ಎಣಿಕೆಗೆ ನಿಯಮಾನುಸಾರದಂತೆ ಕ್ರಮ ಕೈಗೊಳ್ಳಬೇಕು ಎಂದು ರೇಖಾ ಆರ್.ಕೆಯವರು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.

  • ಚಲಾವಣೆಯಾದ ಒಟ್ಟು ಮತಪತ್ರಗಳು 707
  • ಅಂಚೆ ಮತಪತ್ರಗಳು  3
  • ಒಟ್ಟು ಮತಪತ್ರಗಳು 710
  • ಅಸಿಂಧು ಮತಪತ್ರಗಳು 11
  • ಸಿಂಧು ಮತಪತ್ರಗಳು 699

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.