ಪುತ್ತೂರು: ಕೊಳ್ತಿಗೆ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ಸು ಸೌಕರ್ಯ ಒದಗಿಸುವಂತೆ ಕೊಳ್ತಿಗೆ ಗ್ರಾಮದ ನಾಗರೀಕರು ಪುತ್ತೂರು ಕೆಎಸ್ಆರ್ಟಿಸಿ ಡಿಫೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಪುತ್ತೂರಿನಿಂದ ೮.೧೫ ಕ್ಕೆ ಹೊರಟು ಅಮ್ಚಿನಡ್ಕ ಮಾರ್ಗವಾಗಿ ಪೆರ್ಲಂಪಾಡಿ ಹೋಗುತ್ತಿದ್ದ ಬಸ್ಸು ಸ್ಥಗಿತಗೊಂಡಿತ್ತು. ಇದನ್ನು ಮತ್ತೆ ಆರಂಭಿಸಲು ಮನವಿಯಲ್ಲಿ ವಿನಂತಿಸಲಾಗಿದೆ. ಇದಲ್ಲದೆ ೧೨ ಗಂಟೆಗೆ ಪುತ್ತೂರಿನಿಂದ ಪೆರ್ಲಂಪಾಡಿ ಬೆಳ್ಳಾರೆ ತಲುಪುವ ಬಸ್ಸು ಕೂಡ ಸ್ಥಗಿತವಾಗಿದೆ. ಇದನ್ನು ಮತ್ತೆ ಆರಂಭಿಸಬೇಕು, ೩.೧೫ ಗಂಟೆಗೆ ಪುತ್ತೂರಿನಿಂದ ಹೊರಟು ಪೆರ್ಲಂಪಾಡಿಯಾಗಿ ಸಂಚರಿಸುತ್ತಿದ್ದ ಬಸ್ಸು ಸ್ಥಗಿತವಾಗಿದೆ ಇದನ್ನು ಮತ್ತೆ ಆರಂಭಿಸಬೇಕು ಇದಲ್ಲದೆ ಸಂಜೆ ೪ ಗಂಟೆಗೆ ಪುತ್ತೂರಿನಿಂದ ಪೆರ್ಲಂಪಾಡಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸನ್ನು ಕೂಡ ಮತ್ತೆ ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕೊಳ್ತಿಗೆ ಗ್ರಾಪಂ ಸದಸ್ಯರುಗಳಾದ ವಸಂತ ಕುಮಾರ್ ರೈ ದುಗ್ಗಳ, ಪ್ರಮೋದ್ ಕೆ.ಎಸ್, ಬಾಲಕೃಷ್ಣ ಕೆಮ್ಮಾರ, ಕೊಳ್ತಿಗೆ ಸಿಎ ಬ್ಯಾಂಕ್ನ ಮಾಜಿ ನಿರ್ದೇಶಕ ಯಶೋದರ ಗೌಡ ಪಾಂಬಾರು ಉಪಸ್ಥಿತರಿದ್ದರು.