HomePage_Banner
HomePage_Banner
HomePage_Banner
HomePage_Banner
Breaking News

ವಿಟ್ಲ ಎಸ್ ಡಿ ಪಿ ಐ ಕಚೇರಿಗೆ ಬೆಂಕಿ  ಹಚ್ಚಿದ ಪ್ರಕರಣ | ಕಾರ್ಯಕರ್ತರಿಂದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ವಿಟ್ಲ: ರಾಜ್ಯ ಹಾಗೂ ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಯನ್ನು ಸಹಿಸಲಾಗದ ತಂಡದಿಂದ ಈ ಕೃತ್ಯ ನಡೆದಿದೆ.‌ ಇದರ ಹಿಂದೆ ಸಂಘಪರಿವಾರ ಬಿಜೆಪಿ ವಿವಿಧ ಷಡ್ಯಂತ್ರವನ್ನು ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ಕೃತ್ಯ ಎಸೆಗಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ ಹೇಳಿದರು.

ಅವರು  ವಿಟ್ಲ ಎಸ್ ಡಿ ಪಿ ಐ ಕಚೇರಿಗೆ ಬೆಂಕಿ  ಹಚ್ಚಿದ ಕಿಡಿಗೇಡಿಗಳ ಕೃತ್ಯವನ್ನು   ಖಂಡಿಸಿ ವಿಟ್ಲ ವಲಯ ಎಸ್ ಡಿ ಪಿ ಐ ವತಿಯಿಂದ ಜ.೪ರಂದು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ  ಶಾಕೀರ್ ಅಳಕೆಮಜಲ  ಮಾತನಾಡಿ ಈ ಕೃತ್ಯದ ಹಿಂದೆ ಸಂಘಪರಿವಾರ ಬಿಜೆಪಿ ಇರುವುದು ಖಚಿತವಿದೆ. ಪಕ್ಷವನ್ನು ದಮನಿಸಲು ಬೆಂಕಿ ಅಥವಾ ಬೇರೇನು ನಡೆಸಿದರೂ ಎಸ್ ಡಿ ಪಿ ಐ ಜಗ್ಗುವುದಿಲ್ಲ. ಬಿಜೆಪಿಯ ಕೆಲವು ನಾಯಕರ ಪ್ರಚೋದಕಾರಿ ಹೇಳಿಕೆಗಳಿಂದ ಇಂತಹ ಕೃತ್ಯಗಳು ನಡೆಯುತ್ತಿದೆ ಎಂದರು.

ಸಂಘಪರಿವಾರ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರು ವಿಟ್ಲ ಪೊಲೀಸ್ ಠಾಣೆಗೆ ರ್ಯಾಲಿ ನಡೆಸಲು ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಬಂದ ವಿಟ್ಲ ಪೊಲೀಸರು ಪ್ರತಿಭಟನೆ ಹಿಂತೆಗೆಯುವಂತೆ ಮನವಿ ಮಾಡಿದರು.  ಬಂಟ್ವಾಳ ಸಂಚಾರಿ ಠಾಣಾ ಎಸ್.ಐ ರಾಜೇಶ್ ಕೆ.ವಿ ರವರು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ತಕ್ಷಣವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. 24 ಗಂಟೆಯೊಳಗಡೆ ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದರು.

ವಿಟ್ಲ ವಲಯ ಸಮಿತಿ ಅಧ್ಯಕ್ಷ ರಹೀಂ ಕಂಬಳಬೆಟ್ಟು, ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ, ಅಝೀಜ್ ಕಡಂಬು ರಹೀಂ ವಿಟ್ಲ, ರಫೀಕ್ ಪೊನ್ನೋಟ್ಟು, ವಿಟ್ಲ ಪಡ್ನೂರು ಗ್ರಾ.ಪಂ ಸದಸ್ಯ ಮೆಹಮ್ಮೂದ್ ಮೊದಲಾದವರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.