HomePage_Banner
HomePage_Banner
HomePage_Banner
HomePage_Banner

ಕುಂಬ್ರ ಮರ್ಕಝುಲ್ ಹುದಾ ಪದವಿ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ | ಅನಿವಾಸಿ ಕನ್ನಡಿಗರ ನಿಸ್ವಾರ್ಥ ಸೇವೆಯೇ ಸಂಸ್ಥೆಯ ಬೆನ್ನೆಲುಬು- ಉಜಿರೆ ತಂಙಳ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕುಂಬ್ರ : ಸಂಘ ಸಂಸ್ಥೆಗಳ ಮೂಲಕ ನಾವು ಮಾಡುವ ಜನಸೇವೆಗಳು ದೈವ ಸಂಪ್ರೀತಿಯನ್ನು ಬಯಸಿಕೊಂಡು ಮಾತ್ರವಾಗಿರಬೇಕೇ ಹೊರತು ಅದರಲ್ಲಿ ಸ್ವಾರ್ಥ ಹಿತಾಸಕ್ತಿಗಳು ಇರಬಾರದು ಎಂದು ಸಯ್ಯದ್ ಇಸ್ಮಾಯಿಲ್ ತಂಙಳ್ ಮದನಿ ಅಲ್ ಹಾದಿ ಉಜಿರೆ ಹೇಳಿದರು.

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧೀನದಲ್ಲಿರುವ ಪದವಿ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಅನಿವಾಸಿ ಕನ್ನಡಿಗರ ಸಂಗಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮರ್ಕಝುಲ್ ಹುದಾ ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರೀಯ ಸಮಿತಿಗಳ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳಲಿರುವ ಪದವಿ ಕಾಲೇಜಿನ ಕಟ್ಟಡದ ಮತ್ತು ಸಂಸ್ಥೆಯ ಮುಖ್ಯ ದ್ವಾರದ ನೀಲ ನಕ್ಷೆಯನ್ನು ಈ ಸಂದರ್ಭದಲ್ಲಿ ತಂಙಳ್‌ರವರು ಅನಾವರಣ ಗೊಳಿಸಿದರು. ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಮಾಜಿ ಗೌರವಾಧ್ಯಕ್ಷ ಹಾಜಿ ಅನ್ವರ್ ಹುಸೇನ್ ಗೂಡಿನಬಳಿ ಉದ್ಘಾಟಿಸಿದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಮಾತನಾಡಿ ಈ ಸಂಸ್ಥೆಯನ್ನು ಈ ಮಟ್ಟದಲ್ಲಿ ಬೆಳೆಸಲು ಇದರ ಹಿಂದೆ ಹಗಲಿರುಳು ಕಾರ್ಯಾಚರಣೆ ಮಾಡಿದ ಹಲವರ ಪರಿಶ್ರಮವಿದೆ ಸಂಸ್ಥೆಯ ಬೆಳವಣಿಗೆಗೆ ಪ್ರತಿಯೋರ್ವರೂ ಕೈಜೋಡಿಸಬೇಕು ಎಂದು ಹೇಳಿದರು. ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ನೌಶಾದ್ ಪೋಳ್ಯ, ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ಶಕೂರ್ ಮನಿಲಾ, ಉಪಾಧ್ಯಕ್ಷ ಇಬ್ರಾಹಿಮ್ ಹಾಜಿ ಬ್ರೈಟ್ ವಿಟ್ಲ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಹಾಜಿ ಕಿನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರ ಸಮಿತಿ ಉಪಾಧ್ಯಕ್ಷ ಹಂಝ ಹಾಜಿ ಸಾಲ್ಮರ, ಕೋಶಾಧಿಕಾರಿ ಅಹ್ಮದ್ ಬಶೀರ್ ಹಾಜಿ ಕುಂಬ್ರ, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಕೋಶಾಧಿಕಾರಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಸುಳ್ಯ, ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಮಾಜಿ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ದುಬೈ ಸಮಿತಿ ಕಾರ್ಯದರ್ಶಿ ಕಲಂದರ್ ಕಬಕ, ಶಾರ್ಜಾ ಸಮಿತಿ ಕಾರ್ಯದರ್ಶಿ ಕರೀಮ್ ಮುಸ್ಲಿಯಾರ್ ಉರುವಾಲು, ಕೇಂದ್ರ ಸಮಿತಿ ಸಂಚಾಲಕ ಶಾಕಿರ್ ಹಾಜಿ ಮಿತ್ತೂರು, ಒಮಾನ್ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷ ಉಮರ್ ಸಖಾಫಿ ಅಳಿಕೆಮಜಲ್, ಪ್ರಧಾನ ವ್ಯವಸ್ಥಾಪಕ ಬಿ.ಕೆ ಅಬ್ದುಲ್ ರಶೀದ್ ಸಂಪ್ಯ, ದಮಾಂ ಸಮಿತಿ ಕಾರ್ಯದರ್ಶಿ ಅಶ್ರಫ್ ಜಾಲ್ಸೂರ್, ಬುರೈದ ಸಮಿತಿ ಕಾರ್ಯದರ್ಶಿ ಬಶೀರ್ ಕನ್ಯಾನ, ದುಬೈ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಬುಸ್ತಾನಿ ಪರ್ಲಡ್ಕ, ಅಬುದಾಬಿ ಸಮಿತಿ ಮಾಜಿ ಅಧ್ಯಕ್ಷ ಮುಹಮ್ಮದ್ ಕುಂಞಿ ಈಶ್ವರಮಂಗಲ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ಕಾರ್ಯದರ್ಶಿ ಹಕೀಮ್ ತುರ್ಕಳಿಕೆ, ಶರೀಅತ್ ಕಾಲೇಜು ಉಪ ಪ್ರಾಂಶುಪಾಲ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಪದವಿ ಕಾಲೇಜು ಪ್ರಾಂಶುಪಾಲ ಮನ್ಸೂರ್ ಅಲಿ ಕಡಬ, ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ನಾಯಕರಾದ ಯೂಸುಫ್ ಹಾಜಿ ಒಕ್ಕತ್ತೂರು, ಮುಹಮ್ಮದ್ ಅಲಿ ಉಪ್ಪಿನಂಗಡಿ, ಯೂಸುಫ್ ಚೆನ್ನಾವರ, ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ತಿಂಗಳಾಡಿ, ಅಜ್ಮಾನ್ ಸಮಿತಿ ಗೌರವಾಧ್ಯಕ್ಷ ಅಬೂಬಕ್ಕರ್ ಮದನಿ ಕೆಮ್ಮಾರ, ಮರ್ಕಝ್ ಮತ್ತು ಕೆಸಿಎಫ್ ಯುಎಇ ನಾಯಕರಾದ ಹಮೀದ್ ಮುಸ್ಲಿಯಾರ್ ಕುಪ್ಪಟ್ಟಿ, ಮಜೀದ್ ಹಾಜಿ ಉಚ್ಚಿಲ, ಸಲೀಮ್ ಸಖಾಫಿ ಮೈದಾನಿಮೂಲೆ, ಕಾಸಿಮ್ ಮದನಿ ತೆಕ್ಕಾರ್, ಅಬ್ಬಾಸ್ ಪಾಣಾಜೆ, ಇಬ್ರಾಹಿಮ್ ಬಪ್ಪಳಿಗೆ, ಅಬ್ದುಲ್ ರಝಾಕ್ ಕುಡ್ತಮೊಗರು, ಅಶ್ರಫ್ ಮುಕ್ರಂಪಾಡಿ, ಬದ್ರುದ್ದೀನ್ ಆರ್ಲಪದವು, ಶಿಹಾಬ್ ಆರ್ಲಪದವು, ಅಝರುದ್ದೀನ್ ಇರ್ದೆ, ಸ್ವಾಲಿಹ್ ಉಳ್ಳಾಲ, ಕೇಂದ್ರ ಸಮಿತಿ ಪದಾಧಿಕಾರಿಗಳಾದ ಕಾಸಿಮ್ ಹಾಜಿ ಮಿತ್ತೂರು, ಬದ್ರುದ್ದೀನ್ ಹಾಜಿ ಅಳಿಕೆಮಜಲು, ಕರೀಮ್ ಹಾಜಿ ಚೆನ್ನಾವರ, ಯೂಸುಫ್ ಮೈದಾನಿಮೂಲೆ, ಮುಂತಾದವರು ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನೀ ಕಾಮಿಲ್ ಸ್ವಾಗತಿಸಿದರು. ಮರ್ಕಝುಲ್ ಹುದಾ ಯುಎಇ ಆರ್ಗನೈಝರ್ ಸಿದ್ದೀಕ್ ಹಾಜಿ ಪುತ್ತೂರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.