ಪುತ್ತೂರು: ಸರಕಾರ 8 ರಿಂದ 12ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ನಡೆಯುವ ಕಲೋತ್ಸವ 2020ರಲ್ಲಿ ಹಿರೇಬಂಡಾಡಿ ಸ. ಪ್ರೌಢಶಾಲೆಯಿಂದ 10ನೇ ತರಗತಿಯ ವಿದ್ಯಾರ್ಥಿನಿ ಫಾತಿಮತ್ ಸಿಹಾನ ಪೇಯಿಂಟಿಗ್ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಅತ್ಯುತ್ತಮ ಕಲಾಕೃತಿಯಾಗಿ DISTRICT TOPPERS ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
10ನೇ ತರಗತಿಯ ವಿದ್ಯಾರ್ಥಿಗಳಾದ ಶೈಲೇಶ್ ಮತ್ತು ಫಾತಿಮತ್ ಸಿಹಾನಳ ಕಲಾಕೃತಿಯ ಕೊರೋನಾ ಪ್ರಯುಕ್ತ ಶಾಲಾ ಮಟ್ಟದಲ್ಲಿ ಆನ್ಲೈನ್ ಮೂಲಕ ಕಲಾಕೃತಿಯ ರಚಿಸಿದ ವಿಡಿಯೋವನ್ನು vidyavahini.karnataka.gov.in ಲಿಂಕ್ ಗೆ ಅಪ್ ಲೋಡ್ ಮಾಡಿಲಾಗಿತ್ತು. ಜಿಲ್ಲಾಮಟ್ಟದ ತೀರ್ಪುಗಾರರು ೨ಆಯಾಮದ ಪೇಯಿಂಟಿಗ್ ಸ್ಪರ್ಧೆಯಲ್ಲಿ ಫಾತಿಮತ್ ಸಿಹಾನ ಆಯ್ಕೆಯಾಗಿದ್ದಾರೆ.