ಕಡಬ: ಇಲ್ಲಿನ ತಾಲೂಕು ಕಛೇರಿಯ ಭೂಮಿ ಕೇಂದ್ರದಲ್ಲಿ ಜನವರಿ 8ರ ವರೆಗೆ ಪಹಣಿ(ಆರ್ಟಿಸಿ)ಗಳ ಡಿಜಿಟಲ್ ಸಹಿ ಪ್ರಕ್ರಿಯೆ ನಡೆಯಲಿದ್ದು ಭೂಮಿ ಕೇಂದ್ರದ ಎಲ್ಲ ಕೆಲಸಗಳು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಈ ಬಗ್ಗೆ ಸಹಕರಿಸಿ ಆರ್.ಟಿ.ಸಿಗಳನ್ನು ಆನ್ಲೈನ್ ಸೆಂಟರ್ಗಳಲ್ಲಿ ಪಡೆದುಕೊಳ್ಳಬಹುದು ಎಂದು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.