ಪುತ್ತೂರು: ಉಜಿರೆಯಲ್ಲಿ ಮತ ಎಣಿಕೆ ಸಂದರ್ಭ ಪಾಕಿಸ್ತಾನದ ಪರ ಘೋಷಣೆ ಮಾಡಿದ ನೈಜ ಆರೋಪಿಗಳನ್ನು ಬಂಧಿಸಿ ಮತ್ತು ಅಮಾಯಕರನ್ನು ಬಿಡುಗಡೆಗೊಳಿಸಿ ಅವರ ಕೇಸುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪುತ್ತೂರು ವಿಧಾನಸಭಾ ಸಮಿತಿ ಎಸ್ ಡಿ ಪಿ ಐ ವತಿಯಿಂದ ಜ.೪ ರಂದು ಪುತ್ತೂರು ಮಿನಿ ವಿಧಾನ ಸೌಧದ ಬಳಿಯ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಪ್ರತಿಭಟನೆ ನಡೆಯಿತು. ನೈಜ ಆರೋಪಿಗಳನ್ನು ಬಂಧಿಸುವಂತೆ ರಾಜ್ಯಾದ್ಯಂತ ಎಸ್ ಡಿ ಪಿ ಪಿ ಐ ವತಿಯಿಂದ ಈಗಾಗಲೆ ಪ್ರತಿಭಟನೆ ನಡೆಯುತ್ತಿದ್ದು. ಪುತ್ತೂರಿಲ್ಲೂ ಪ್ರತಿಭಟನೆ ನಡೆಯಿತು.
ಎಸ್ ಡಿ ಪಿ ಐ ಪುತ್ತೂರು ನಗರ ಕಾರ್ಯದರ್ಶಿ ಬಶೀರ್ ಕೂರ್ನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಡಿ ಪಿ ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಸವಣೂರು ಗ್ರಾ.ಪಂ ಸದಸ್ಯ ರಫೀಕ್ ಎಮ್ ಎ ಮತ್ತು ತಾಲೂಕು ಸಮಿತಿ ಸದಸ್ಯ ಶಾಕೀರ್ ಅಳಕೆಮಜಲು ಭಾಷಣ ಮಾಡಿದರು. ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಸದಸ್ಯ ಹಮೀದ್ ಸಾಲ್ಮರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಉಪಾಧ್ಯಕ್ಷ ಸಾಗರ್ ಇಬ್ರಾಹಿಂ , ಅಶ್ರಫ್ ಬಾವು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.