ಪುತ್ತೂರು: ಕಡಬ ತಾಲೂಕಿನ ಆಲಂಕಾರು ಮುಖ್ಯ ರಸ್ತೆಯಲ್ಲಿ ಶ್ರೀ ದುರ್ಗಾ ಟವರ್ಸ್ ನ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಜ.6ರಂದು ಬೆಳಗ್ಗೆ 9.26ಕ್ಕೆ ಜರಗಲಿದೆ. ಶ್ರೀ ಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನೂತನ ಕಟ್ಟಡದ ಉದ್ಘಾಟನೆ ಹಾಗೂ ಆಶಿರ್ವಚನ ನೀಡಲಿದ್ದಾರೆ. ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ರುಕ್ಮ ನಾಯ್ಕ್ ಎ, ಆಲಂಕಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ ಎಂ, ಪರಾರಿಗುತ್ತು ಯಜಮಾನರಾದ ಜನಾರ್ದನ ರೈ, ಮನವಳಿಕೆ ಗುತ್ತು ಯಜಮಾನ ರಮಾನಾಥ ರೈ ಎಂ, ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್ ಎಸ್ ಭಾಗವಹಿಸಲಿದ್ದಾರೆ ಎಂದು ಶ್ರೀ ದುರ್ಗಾ ಟವರ್ಸ್ ನ ಮಾಲಕ ರಾಧಾಕೃಷ್ಣ ರೈ ಪರಾರಿಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.