ಪುತ್ತೂರು: ಎಸ್ಸೆಸ್ಸೆಪ್ ಮಂಗಳಪದವು ಸೆಕ್ಟರ್ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಕ್ಟರ್ ಅಧ್ಯಕ್ಷ ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ ಅಧ್ಯಕ್ಷತೆಯಲ್ಲಿ ಮಂಗಳಪದವು ಮದ್ರಸ ಹಾಲ್ನಲ್ಲಿ ಜ.2ರಂದು ನಡೆಯಿತು. ಮಂಗಳಪದವು ಬಿಲಾಲ್ ಜುಮ್ಮಾ ಮಸ್ಜಿದ್ ಖತೀಬರಾದ ಅಬ್ದುಸ್ಸಲಾಂ ಅಮ್ಜದಿ ಉಸ್ತಾದರು ದುಆಃ ನೇತೃತ್ವ ವಹಿಸಿದರು. ಎಸ್.ವೈ.ಎಸ್ ಮಂಗಳಪದವು ಬ್ರಾಂಚ್ ಅಧ್ಯಕ್ಷ ಅಬ್ದುಲ್ ರಝಾಕ್ ಸಖಾಫಿಯವರು ಸಭೆಯನ್ನು ಉದ್ಘಾಟಿಸಿದರು. ಸೆಕ್ಟರ್ ಪ್ರ.ಕಾರ್ಯದರ್ಶಿ ಇಬ್ರಾಹಿಂ ಕೋಡಪದವುರವರು ವರದಿ ಮಂಡಿಸಿದರು. ಸೆಕ್ಟರ್ ಕೋಶಾಧಿಕಾರಿಯಾದ ರಫೀಕ್ ಮುಈನಿ ಅಲ್ ಅಹ್ಸನಿ ಯವರು ಲೆಕ್ಕ ಪತ್ರ ಮಂಡಿಸಿದರು. ಸೆಕ್ಟರ್ ಎಸ್.ಒ (ಸೆಲೆಕ್ಷನ್ ಆಫಿಸರ್)ಆಗಿ ಆಗಮಿಸಿದ್ದ ಎಂ.ಐ.ಎಂ ಅಶ್ರಫ್ ಸಖಾಫಿ ಕನ್ಯಾನ ಸಂಘಟನೆ ವಿಷಯದ ಕುರಿತು ಮಾತನಾಡಿದರು.
ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಫೀಕ್ ಮುಈನಿ ಅಲ್ ಅಹ್ಸನಿ, ಬಾರೆಬೆಟ್ಟು, ಪ್ರ.ಕಾರ್ಯದರ್ಶಿಯಾಗಿ ಇಬ್ರಾಹಿಂ ಕೋಡಪದವು, ಕೋಶಾಧಿಕಾರಿಯಾಗಿ ಶೌಕತ್ ಅಲಿ ಖಾನ್ ನೆಲ್ಲಿಗುಡ್ಡೆ, ಉಪಾಧ್ಯಕ್ಷರುಗಳಾಗಿ ಉಮರ್ ಅಮ್ಜದಿ ಕುಕ್ಕಿಲ, ಅಬ್ದುರಶೀದ್ ಸಖಾಫಿ ಕೊಡಂಗೆ, ಕಾರ್ಯದರ್ಶಿಗಳಾಗಿ ಇಯಾಸ್ ಕೋಡಪದವು, ಬಾತಿಷ ತಾಳಿತ್ತನೂಜಿ, ಬಾತಿಷ್ ಒಕ್ಕೆತ್ತೂರ್, ಮನ್ಸೂರ್ ಮಂಗಳಪದವು, ಅಶ್ರಫ್ ಪೆಲ್ತಡ್ಕ, ಅಬ್ದುಲ್ ರಹೀಂ ನೆಲ್ಲಿಗುಡ್ಡೆ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅರ್ಶದ್ ಮಂಗಳಪದವು, ಅರ್ಶದ್ ಸಖಾಫಿ ಒಕ್ಕೆತ್ತೂರ್, ಇರ್ಫಾನ್ ಒಕ್ಕೆತ್ತೂರ್, ಮಸ್ಊದ್ ಹಿಮಮಿ ಕೊಡಂಗೆ, ಆಸಿಫ್ ಹಾಫಿಲ್, ಸಮದ್ ಕೋಡಪದವು, ಫಯಾಝ್ ತಾಳಿತ್ತನೂಜಿ, ಸಿನಾನ್ ಬಾರೆಬೆಟ್ಟು, ಹುಸೈನ್ ಸಅದಿ ಕುಕ್ಕಿಲ, ಮುಹಮ್ಮದ್ ಆಶಿಕ್ ಕುಕ್ಕಿಲ, ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ, ರಫೀಕ್ ಮುಸ್ಲಿಯಾರ್ ನೆಲ್ಲಿಗುಡ್ಡೆ ಆಯ್ಕೆಯಾದರು. ಎಸ್ಸೆಸ್ಸೆಫ್ ಡಿವಿಷನ್ ಕೌನ್ಸಿಲರ್ಸ್ಗಳಾಗಿ 11 ಮಂದಿಯನ್ನು ನೇಮಿಸಲಾಯಿತು. ನಿಕಟಪೂರ್ವ ಅಧ್ಯಕ್ಷರಿಂದ ನೂತನ ಸಮಿತಿಯ ಪದಾಧಿಕಾರಿಗಳಿಗೆ ಸಂಘಟನಾ ಧ್ವಜ ಹಸ್ತಾಂತರಿಸಲಾಯಿತು.
ಇತಿಚೀಗೆ ಮರಣ ಹೊಂದಿದ ಎಸ್.ವೈ.ಎಸ್ ಕೋಡಪದವು ಬ್ರಾಂಚ್ ನಾಯಕ ಫಾರೂಕ್ ಹೆಚ್.ಪಿ ಯವರ ತಾಯಿ ಝೈನಾಬಿ ಯವರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುಆಃ ಮಾಡಲಾಯಿತು.
ಎಸ್.ವೈ.ಎಸ್ ಮಂಗಳಪದವು ಬ್ರಾಂಚ್ ನಾಯಕರಾದ ಇಸ್ಮಾಯಿಲ್ ಮಾಸ್ಟರ್, ಅಝೀಝ್ ಮದನಿ, ಮಂಗಳಪದವು ಬಿಲಾಲ್ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿಯ ಸುಲೈಮಾನ್, ಖಾದರ್ ಖಲೀಫ, ಅಬ್ದುಲ್ ರಹಿಮಾನ್, ರಝಾಕ್, ಮಜೀದ್, ಡಿವಿಷನ್ ವೀಕ್ಷಕರಾದ ಅಬ್ದುಲ್ ಕಾದರ್ ಕೊಡಂಗಾಯಿ, ಅಝೀಝ್ ಮದನಿ ಕನ್ಯಾನ, ಎಂ.ಐ.ಎಂ ಅಶ್ರಫ್ ಸಖಾಫಿ ಕನ್ಯಾನ, ಹಸನ್ ಸಅದಿ ಕುಕ್ಕಿಲ ಹಾಗೂ ಅಬ್ದುಲ್ ರಝಾಕ್ ಪೆಲ್ತಡ್ಕ ಮುಂತಾದವರು ಉಪಸ್ಥಿತರಿದ್ದರು.ನೂತನ ಅಧ್ಯಕ್ಷರಾದ ರಫೀಕ್ ಮುಈನಿ ಅಲ್ ಅಹ್ಸನಿ ವಂದಿಸಿದರು.