ಪುತ್ತೂರು: ಪ್ರಶಸ್ತಿ ಪುರಸ್ಕೃತ ಕೃಷಿಕರಾಗಿರುವ ಕರ್ನೂರು ಸತೀಶ್ ರೈ ಹಿತ್ಲುಮೂಲೆಯವರ `ಶಿಬಿರ’ ಕೃಷಿ ತೋಟಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ತಾಲೂಕಿನ ಕುಂಬ್ಲೆ ಹಾಗೂ ನೆಟ್ಟಣಿಗೆಯ ಒಕ್ಕೂಟದ ಸದಸ್ಯರು ಅಧ್ಯಯನ ಪ್ರವಾಸ ಏರ್ಪಡಿಸಿದ್ದರು. ಕೃಷಿತೋಟಕ್ಕೆ ಭೇಟಿ ನೀಡಿದ ಒಕ್ಕೂಟದ ಸದಸ್ಯರುಗಳು ಗೇರು ಕೃಷಿ ಮತ್ತು ವೀಳ್ಯದೆಲೆ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದಲ್ಲದೆ ಇವರ ಕೃಷಿತೋಟದಲ್ಲಿದ್ದ ವಿವಿಧ ಜಾತಿಯ ಹಲವು, ಮಾವು, ಅಡಿಕೆ ಇತ್ಯಾದಿ ಕೃಷಿಯ ಬಗ್ಗೆ ಮಾಹಿತಿ ತಿಳಿದುಕೊಂಡರು.
ಪ್ರವಾಸ ತಂಡದಲ್ಲಿ ಕಾಸರಗೋಡು ತಾಲೂಕಿನ ಕೃಷಿ ಅಧಿಕಾರಿ ಸದಾಶಿವ, ಸೇವಾ ಪ್ರತಿನಿಧಿಗಳಾದ ಸುಮತಿ ಕಿನ್ನಿಂಗಾರು, ಗಿರಿಜ ಕಾಯರ್ಪದವು, ಅರುಣ ಕುಂಬ್ಲೆ, ಸಂದ್ಯಾ ಕುಂಬ್ಲೆ ಹಾಗೂ ಒಕ್ಕೂಟದ ಹಲವು ಮಂಧಿ ಸದಸ್ಯರು ಭಾಗವಹಿಸಿದ್ದರು. ಅರಿಯಡ್ಕ ವಲಯದ ಸೇವಾ ಪ್ರತಿನಿಧಿಗಳಾದ ಸುಂದರ್ ಜಿ ಮತ್ತು ಉಷಾ ಕುಮಾರಿ ಬಿ ಸಹಕರಿಸಿದ್ದರು. ಕೃಷಿಕ ಸತೀಶ್ ರೈ ಹಿತ್ಲುಮೂಲೆ ಮಾಹಿತಿ ನೀಡಿದರು. ಜಯಂತಿ ಸತೀಶ್ ರೈ, ಭವಾನಿ ಬಿ.ರೈ, ಪುಷ್ಪಾವತಿ, ಅನ್ನಪೂರ್ಣ, ಅನೂಪ್ ರೈ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.