HomePage_Banner
HomePage_Banner
HomePage_Banner
HomePage_Banner

ಧೀಶಕ್ತಿ ಮಹಿಳಾ ಯಕ್ಷಬಳಗ, ತೆಂಕಿಲ- ಸಪ್ತಮ ವರ್ಷದ ಸಂಭ್ರಮಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಸಪ್ತಮ ವರ್ಷದ ಸಂಭ್ರಮಾಚರಣೆಯು ಜ.3ರಂದು ನ್ಯಾಯವಾದಿ ಕೆ ಆರ್ ಆಚಾರ್ಯರವರ ತೆಂಕಿಲ ಸ್ವಗೃಹದಲ್ಲಿ ನಡೆಯಿತು.

ಭಾಗವತ ಡಾ| ಸತೀಶ್ ಪುಣ್ಚಿತ್ತಾಯರು ಕಾರ್ಯಕ್ರಮ ಉದ್ಘಾಟಿಸಿದರು. ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇವರಿಂದ, “ಕದಂಬ ಕೌಶಿಕೆ”, ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ, ಡಾ| ಸತೀಶ್ ಪುಣ್ಚಿತ್ತಾಯ, ಕು| ಅಂಶಿಕಾ ಪ್ರಸಾದ್, ನಾರಾಯಣ ಶರ್ಮ, ಶ್ರೀಶ ನಾರಾಯಣ ಕೋಳಾರಿ ಮತ್ತು ಮುಮ್ಮೇಳದಲ್ಲಿ, ವರ್ಷ ಕೆ.ಟಿ,ಅಭಿಜ್ಞಾ ರಾವ್ ದಾಳಿಂಬ, ನಯನಾ ಕಲ್ಲೂರಾಯ, ವೈಷ್ಣವೀ.ಜೆ.ರಾವ್, ಧನ್ವಿ ಜೆ ರೈ,ಅನನ್ಯಾ, ಅವನಿ ಬೆಳ್ಳಾರೆ, ಆಪ್ತ ಚಂದ್ರಮತಿ ಮುಳಿಯ, ಅನುಪಮ.ಟಿ, ಧಾತ್ರಿ ಆರ್ ರೈ, ವಿಖ್ಯಾತಿ ಬೆಜ್ಜಂಗಳ ಭಾಗವಹಿಸಿದರು.

ಈ ಸಂದರ್ಭದಲ್ಲಿ, ಯಕ್ಷಗುರು ಗೋವಿಂದ ನಾಯಕ್ ಪಾಲೆಚ್ಚಾರು ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಯಕ್ಷಗಾನ ಕಲಾವಿದ ಹರೀಶ್ ಬಳಂತಿಮೊಗರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಡಾ| ರಾಜೇಶ್ ಬೆಜ್ಜಂಗಳರವರು ಸನ್ಮಾನಿತರನ್ನು ಪರಿಚಯಿಸಿದರು. ಸಂಘದ ಸಂಚಾಲಕಿ ಪದ್ಮಾ ಆಚಾರ್ಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಯುವ ಅರ್ಥದಾರಿ ವಿದ್ವಾನ್ ವಿನಾಯಕ ಗಾಳಿಮನೆ, ಯಕ್ಷಾರಾಧನ ಮತ್ತು ನಾಟ್ಯಾರಾಧನ ಕಲಾಕೇಂದ್ರ, ಉರ್ವ ಇದರ ನಿರ್ದೇಶಕರಾದ ವಿದುಷಿ ಸುಮಂಗಲಾ ರತ್ನಾಕರ್ ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮದ ಬಳಿಕ “ಭಕ್ತ ಮಯೂರಧ್ವಜ” ತಾಳಮದ್ದಳೆ ನಡೆಯಿತು.ಹಿಮ್ಮೇಳದಲ್ಲಿ, ಭಾಗವತರಾಗಿ ಕಾವ್ಯಶ್ರೀ ಆಜೇರು, ಅಮೃತಾ ಅಡಿಗ, ಚೆಂಡೆ , ಮದ್ದಳೆಯಲ್ಲಿ ಕೌಶಿಕ್ ರಾವ್ ಪುತ್ತಿಗೆ, ಸತ್ಯನಾರಾಯಣ ಅಡಿಗ, ಪಿ.ಜಿ.ಜಗನ್ನಿವಾಸ ರಾವ್ , ಲಕ್ಷ್ಮೀಶ ಶಗ್ರಿತ್ತಾಯ ಮತ್ತು ಮುಮ್ಮೇಳದಲ್ಲಿ, ಹರೀಶ್ ಬಳಂತಿಮೊಗರು ( ಶ್ರೀಕೃಷ್ಣ), ವಿದ್ವಾನ್ ವಿನಾಯಕ ಗಾಳಿಮನೆ (ತಾಮ್ರಧ್ವಜ ),
ಪದ್ಮಾ ಆಚಾರ್ಯ (ಮಯೂರಧ್ವಜ ), ವಿದುಷಿ ಸುಮಂಗಲಾ ರತ್ನಾಕರ್ (ಅರ್ಜುನ), ಜಯಲಕ್ಷ್ಮಿ ವಿ ಭಟ್ (ನಾರದ), ಪ್ರೇಮಾ ಕಿಶೋರ್ (ಕುಮುದ್ವತಿ), ಶ್ರೀವಿದ್ಯಾ ಜೆ ರಾವ್ (ನಕುಲ ಧ್ವಜ), ಜಯಲಕ್ಷ್ಮಿ ಶಗ್ರಿತ್ತಾಯ (ಅಶ್ವಪಾಲಕ) ,ಮಲ್ಲಿಕಾ ರೈ, ಗುಂಡ್ಯಡ್ಕ ಭಾಗವಹಿಸಿದ್ದರು. ಗೀತಾ ಕೊಂಕೋಡಿಯವರು ಕಾರ್ಯಕ್ರಮ ನಿರೂಪಿಸಿದರು. ಶುಭಾ ಆಚಾರ್ಯ, ವಿನಯ ಕೇಕುಣ್ಣಾಯ, ಸ್ವಪ್ನಾ ಉದಯ್, ಪ್ರೇಮಾ ನೂರಿತ್ತಾಯ, ಮಮತಾ ಪ್ರಕಾಶ್, ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.