HomePage_Banner
HomePage_Banner
HomePage_Banner
HomePage_Banner

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪುತ್ತೂರು ಘಟಕದ ಚತುರ್ಥ ವಾರ್ಷಿಕ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿದೆ-ಬೂಡಿಯಾರು ಸಂಜೀವ ರೈ

ಪುತ್ತೂರು: ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕವು ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಾ ಬಂದಿದೆ ಎಂದು ಮಂಗಳೂರು ಜಾಗತಿಕ ಬಂಟ ಪ್ರತಿಷ್ಠಾನದ ಯೋಜನಾ ನಿರ್ದೇಶಕರಾದ ಡಾ.ಬೂಡಿಯಾರು ಸಂಜೀವ ರೈಯವರು ಹೇಳಿದರು.

ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕುರಿಯ-ಪುತ್ತೂರು ಇದರ ಆಶ್ರಯದಲ್ಲಿ ಜ.೪ ರಂದು ಸಂಜೆ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕುರಿಯ-ಪುತ್ತೂರು ಇಲ್ಲಿನ ಸಾಂಸ್ಕೃತಿಕ ವೇದಿಕೆಯಲ್ಲಿ ಜರಹಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಪುತ್ತೂರು ಘಟಕದ ಚತುರ್ಥ ವಾರ್ಷಿಕ ಸಮಾರಂಭವವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಈ ಸಂಸ್ಥೆ ಮತ್ತಷ್ಟು ಉತ್ತರೋತ್ತರ ಅಭಿವೃದ್ಧಿ ಹೊಂದಲಿ. ಸರ್ವರ ಪ್ರೋತ್ಸಾಹ ಹಾಗೂ ಸಹಕಾರದಿಂದ ಇಂದು ನಡೆಯುವ ಈ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ಮೂಡಿ ಬರಲಿ ಎಂದು ಹೇಳಿ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರೂ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪುತ್ತೂರು ಘಟಕದ ಗೌರವಾಧ್ಯಕ್ಷರೂ ಆಗಿರುವ ಕೆ.ಸೀತಾರಾಮ ರೈ ಸವಣೂರುರವರು ಮಾತನಾಡಿ, ಪಟ್ಲ ಸತೀಶ್ ಶೆಟ್ಟಿಯವರು ಭಾಗವಹಿಸುವ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಶ್ರೇಷ್ಟ ಸಂಸ್ಕೃತಿ ಹಾಗೂ ಸಂಸ್ಕಾರದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಕರ್ತವ್ಯ ನಿರ್ವಹಿಸುತ್ತಿದೆ ಮಾತ್ರವಲ್ಲದೆ ಅದರ ಶ್ರೇಯೋಭಿವೃದ್ಧಿಗೂ ಶ್ರಮಿಸುತ್ತಿದೆ. ಈ ಟ್ರಸ್ಟ್ ಎಲ್ಲರಿಗೂ ಸಕಲ ಸೌಲಭ್ಯಗಳನ್ನು ನೀಡುವ ಮೂಲಕ ಮನೆಮಾತಾಗಿದೆ ಎಂದರು.
ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತಾಧಿಕಾರಿ ಹರೀಶ್ ಪಿ.ರವರು ಸಂದರ್ಭೋಚಿತವಾಗಿ ಮಾತನಾಡಿದರು. ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ ರಾವ್ ಕೊಡ್ಲಾರು, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ರವೀಂದ್ರನಾಥ ರೈ ಕೆ.ಎಸ್ ಬಳ್ಳಮಜಲುಗುತ್ತು ಹಾಗೂ ಸತೀಶ್ ರೈ ಡಿಂಬ್ರಿಗುತ್ತುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಶಿವರಾಂ ಆಳ್ವ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪುತ್ತೂರು ಘಟಕದ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಡಾ.ಅಶೋಕ್ ಪಡಿವಾಳ್ ಹಾಗೂ ಶ್ರೀಮತಿ ಪದ್ಮಾ ಕೆ.ಆರ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಕೆ.ಸಿ, ಕಾರ್ಯದರ್ಶಿ ತಾರಾನಾಥ ಸವಣೂರು, ಕೋಶಾಧಿಕಾರಿ ಎ.ಜಗಜೀವನ್ ರೈ ಚಿಲ್ಮೆತ್ತಾರು, ಸಂಘಟನಾ ಕಾರ್ಯದರ್ಶಿ ಸುಧೀರ್ ಕುಮಾರ್ ಕೆ.ಎಸ್, ಸಮಿತಿ ಸದಸ್ಯರುಗಳಾದ ಎಂ.ಗಂಗಾಧರ್ ರೈ, ರಾಕೇಶ್ ರೈ ಕೆಡೆಂಜಿ, ಬಿ.ವಿಷ್ಣು ರಾವ್, ಎಂ.ಆರ್ ಜಯಕುಮಾರ್ ರೈ ಮಿತ್ರಂಪಾಡಿ, ಗೌರವ ಸಲಹೆಗಾರರಾದ ಕೆ.ಎಚ್ ದಾಸಪ್ಪ ರೈ, ಎಚ್.ಪ್ರವೀಣ್ ಭಂಡಾರಿ, ಇರಾ ಬಾವಬೀಡು, ಚಂದ್ರಹಾಸ ರೈ ತುಂಬೆಕೋಡಿ, ಟ್ರಸ್ಟಿಗಳಾದ ಅರಿಯಡ್ಕ ಚಿಕ್ಕಪ್ಪ ನಾ?ಕ್, ಡಿಂಬ್ರಿಗುತ್ತು ಜಯರಾಮ ರೈ ಮಿತ್ರಂಪಾಡಿ, ಅಜೀವ ಸದಸ್ಯರಾದ ದೇರ್ಲ ಕರುಣಾಕರ್ ರೈ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಮಿತ್ರಂಪಾಡಿ ಪುರಂದರ ರೈ, ಇಳಂತಾಜೆ ಸಂತೋಷ್ ರೈ, ವೆಂಕಟ್ರಮಣ ಭಟ್ ದೇರ್ಕಜೆ, ಡಾ|ಯನ್ ಯದುಕುಮಾರ್, ವಿಠಲ ಶೆಟ್ಟಿ ಕೊಡ್ಲಾರು, ಸತೀಶ್ ರೈ ಡಿಂಬ್ರಿಗುತ್ತು, ಗಣೇಶ್ ರೈ ಡಿಂಬ್ರಿಗುತ್ತು, ಸನತ್ ಕುಮಾರ್ ರೈ ದೇರ್ಲ, ಸೂರ್ಯನಾಥ ಆಳ್ವ ಮಿತ್ತಳಿಕೆ ಸಹಿತ ಅನೇಕರು ಆಗಮಿಸಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪುತ್ತೂರು ಘಟಕದ ಅಧ್ಯಕ್ಷ ನೊಣಾಲು ಜೈರಾಜ್ ಭಂಡಾರಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಉದಯ ವೆಂಕಟೇಶ್ ವಂದಿಸಿದರು. ಪ್ರಧಾನ ಸಂಚಾಲಕ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕರಾದ ಪ್ರಶಾಂತ್ ರೈ ಮುಂಡಾಳಗುತ್ತುರವರು ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಗಂಟೆ ಎಂಟರಿಂದ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.

ರಂಜಿಸಿದ ಯಕ್ಷಗಾನ ಬಯಲಾಟ `ನೂತನ ಪ್ರಸಂಗ’..
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ, ಹಳೆಯಂಗಡಿಯ ಕಲಾವಿದರಿಂದ ಪೌರಾಣಿಕ ಪುಣ್ಯ ಕಥಾನಕ ನೂತನ ಪ್ರಸಂಗವು ಜರಗಿದ್ದು, ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಪ್ರಫುಲ್ಲಚಂದ್ರ ನೆಲ್ಯಾಡಿ, ಚೆಂಡೆ-ಮದ್ದಲೆಯಲ್ಲಿ ಪದ್ಮನಾಭ ಉಪಾಧ್ಯ, ಗುರುಪ್ರಸಾದ್ ಬೋಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಸಂಗೀತ ಪೂರ್ಣೇಶ್ ಆಚಾರ್‍ಯ, ಹಾಸ್ಯದಲ್ಲಿ ಹಾಸ್ಯರತ್ನ ಉಜಿರೆ ನಾರಾಯಣ, ಸಂದೇಶ್ ಮಂದಾರ, ಸ್ತ್ರೀ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮಾರ್ನಾಡ್, ರಾಜೇಶ್ ಶೆಟ್ಟಿ, ಯೋಗೀಶ್ ಕಡಬ, ವಿಶ್ವಾಸ್ ಕಾವೂರ್, ಪಾತ್ರಧಾರಿಗಳಾಗಿ ರಾಧಾಕೃಷ್ಣ ನಾವಡ ಮಧೂರ್, ಸಂತೋಷ್ ಕುಮಾರ್ ಮಾನ್ಯ, ಸತೀಶ್ ನೈನಾಡು, ಮೋಹನ ಬೆಳ್ಳಿಪ್ಪಾಡಿ, ರಮೇಶ್ ಪಟ್ರಮೆ, ಹರಿರಾಜ್ ಕಿನ್ನಿಗೋಳಿ, ದಿವಾಕರ ಕಣಿಯೂರು, ದಿವಾಣ ಶಿವಶಂಕರ್ ಭಟ್, ರಾಕೇಶ್ ರೈ ಅಡ್ಕ, ಮಾಧವ ಕೊಳತ್ತಮಜಲ್, ಮನೀಷ್ ಪಾಟಾಳಿ, ಲೋಕೇಶ್ ಮಚ್ಚೂರು, ರೋಹಿತ್ ಮಳಲಿ, ಲಕ್ಷ್ಮಣ, ಮಧುರಾಜ್, ಭುವನ್‌ರವರು ಭಾಗವಹಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕ್ರಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇದರ ಸಂಚಾಲಕರಾದ ಪಟ್ಲ ಸತೀಶ್ ಶೆಟ್ಟಿರವರು ಮಾತನಾಡಿ, ನಾಡಿನಾದ್ಯಂತ ನಮ್ಮ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯು ಸಮಾಜದಲ್ಲಿನ ಅಶಕ್ತ ಕಲಾವಿದರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ನೀಡುತ್ತಾ ಬಂದಿದೆ. ಪ್ರಸ್ತುತ ಈ ಸಂಸ್ಥೆಯು ನಾಲ್ಕನೇ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರನ್ನು ಹಾಗೂ ನಮ್ಮ ಸಂಸ್ಥೆಯನ್ನು ಪ್ರೋತ್ಸಾಹಿಸಿ ಬೆಳೆಸುವಂತಾಗಲಿ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.