HomePage_Banner
HomePage_Banner
HomePage_Banner
HomePage_Banner

ಕುಟ್ರುಪಾಡಿ : ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯವರಿಗೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸದಿದ್ದರೆ ಕಡಬ ಪೋಲಿಸ್ ಠಾಣೆಯ ಎದುರು ಜ.7ರಂದು ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕುಟ್ರುಪಾಡಿ : ಇಲ್ಲಿನ ಬಲ್ಯ ಸಂಪಡ್ಕದ ಸರಕಾರಿ ಜಾಗದಲ್ಲಿ ಪಂಚಾಯತ್ ಕ್ರಿಯಾ ಯೋಜನೆಯನ್ವಯ ರಸ್ತೆ ಅಭಿವೃದ್ದಿಗೆ ಸ್ಥಳ ಪರಿಶೀಲನೆಗೆಂದು ತೆರಳಿದ್ದ ಕುಟ್ರುಪಾಡಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರ ವಿರುದ್ದ ಐವರ ತಂಡ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿ ಐವರು ಆರೋಪಿಗಳು ಪರಾರಿಯಾಗಿದ್ದು ಅವರನ್ನು ಬಂಧಿಸದಿದ್ದಲ್ಲಿ ಕಡಬ ಠಾಣೆ ಮುಂಭಾಗ ಪ್ರತಿಭಟನೆ ಮಾಡುವುದಾಗಿ ದೇರಾಜೆ ಸಂಪಡ್ಕ ಕಾಲನಿ ಮುಂದಾಳು ಚಂದಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.
ಚುನಾವಣಾ ಬಹಿಷ್ಕಾರ ಮಾಡಿದ ವೇಳೆ ಗ್ರಾ.ಪಂ ನಿರ್ಣಯದಂತೆ ರಸ್ತೆಯ ಬೇಲಿ ತೆರವಿಗೆ ಬಂದಿದ್ದರು. ಅಧಿಕಾರಿಗಳ ಕರ್ತವ್ಯಕ್ಕೆ ತಡೆಯೊಡ್ಡಿ ಹಲ್ಲೆಗೆ ಮುಂದಾಗಿರುವುದು ಸರಿಯಲ್ಲ.ಪಿಡಿಒ ವಿಡಿಯೋ ಸಹಿತ ದೂರು ದಾಖಲಿಸಿದ್ದು, ಘಟನೆಗೆ ಸಂಬಂಧಿಸಿ ಐವರ ವಿರುದ್ದ ಜ.೨ರಂದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಅಧಿಕಾರಿಗೆ ಅಡ್ಡಿಪಡಿಸಿದ ವ್ಯಕ್ತಿಗಳನ್ನೆ ಬಂಧಿಸಲು ಆಗದಿರುವುದು ಪ್ರಶ್ನಾತೀತವಾಗಿದೆ. ವ್ಯಕ್ತಿಗಳನ್ನು ಜ.7 ರ ಒಳಗೆ ಬಂಧಿಸದಿದ್ದಲ್ಲಿ ಕಾಲನಿ ನಿವಾಸಿಗಳು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಠಾಣೆ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಅವರು ತಿಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.