ಕಡಬ: ಕುಟ್ರುಪಾಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಯ ಗ್ರಾಮದ ಸಂಪಡ್ಕ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿಲ್ಪೈಡ್ ಲಾರೆನ್ಸ್ ರೋಡ್ರಿಗಸ್ ಅವರ ನೇತೃತ್ವದಲ್ಲಿ ಪೋಲಿಸ್ ಬಂದೋಬಸ್ತ್ ನಲ್ಲಿ ರಸ್ತೆ ನಿರ್ಮಿಸಲಾಯಿತು. ಈ ರಸ್ತೆ ನಿರ್ಮಾಣದ ವಿಚಾರದಲ್ಲಿ ಜ.2 ರಂದು ಅಲ್ಲಿನ ನಿವಾಸಿಗಳಾದ ಐದು ಮಂದಿ ಪಿಡಿಒ ಹಾಗೂ ಪಂಚಾಯತ್ ಸಿಬ್ಬಂದಿ ಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದ್ದು ಆರೋಪಿಗಳು ಈಗಾಗಲೇ ತಲೆಮರೆಸಿಕೊಂಡಿದ್ದಾರೆ.ಸಂಪಡ್ಕ ಕಾಲೋನಿಗೆ ರಸ್ತೆ ಸಂಪರ್ಕ ಕ್ಕಾಗಿ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಮಾಡಲಾಗಿತ್ತಾದರೂ ಬಳಿಕ ಪಿಡಿಒ ಭರವಸೆ ನೀಡಿ ಕಾಲೋನಿ ನಿವಾಸಿಗಳು ಚುನಾವಣೆ ಯಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಿಡಿಒ ಅವರು ರಸ್ತೆ ನಿರ್ಮಾಣ ಮಾಡಿಸುತ್ತಿದ್ದಾರೆ. ಕಡಬ ಪೋಲಿಸ್ ಉಪ ನಿರೀಕ್ಷಕ ರುಕ್ಮನಾಯ್ಕ ಸಂಪ್ಯ ಎಸ್.ಐ.ಉದಯ ರವಿ ಹಾಗೂ ಸಿಬ್ಬಂದಿ ಗಳು, ಕುಟ್ರುಪಾಡಿ ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.