ಪುತ್ತೂರು : ಜನವರಿ ತಿಂಗಳ ಪ್ರತಿ ಗುರುವಾರ ಪೂರ್ವಾಹ್ನ 10ರಿಂದ ಅಪರಾಹ್ನ 5ರವರೆಗೆ 110/33/11ಕೆ.ವಿ ಪುತ್ತೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಓಲ್ಡ್, ರಾಮಕುಂಜ ಮತ್ತು ವಾಟರ್ ಸಫ್ಲೈ ಫೀಡರ್ಗಳಿಂದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.