ಉಪ್ಪಿನಂಗಡಿ: ಇಲ್ಲಿನ ರಾಜನ್ ದೈವ ಶ್ರೀ ಕಲ್ಕುಡ ಮತ್ತು ಪರಿವಾರ ದೈವಗಳ ಮಾಜಿ ಆಡಳಿತದಾರರಾಗಿದ್ದ ಬೊಳ್ಳಾವು ವಿಠಲ ಶೆಟ್ಟಿ (70) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
47 ವರ್ಷಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳದ ಉಪ್ಪಿನಂಗಡಿ ವಲಯದ ಮೇಲ್ವಿಚಾರಕರಾಗಿದ್ದ ಅವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಿಕಟವರ್ತಿ ಯಾಗಿದ್ದರು. ಅಲ್ಲದೇ, ಕೊಡಂಗೆ ಬದಿಮಾಡದ ಶ್ರೀ ಕಲ್ಕುಡ ಹಾಗೂ ಪರಿವಾರ ದೈವಗಳ ಕ್ಷೇತ್ರದ ಜೀರ್ಣೋದ್ಧಾರ ದ ರೂವಾರಿಯಾಗಿದ್ದರು. ಮೃತರು ಪತ್ನಿ ಸುಮತಿ ಶೆಟ್ಟಿ, ಮಕ್ಕಳಾದ ಹರಿಪ್ರಸಾದ್ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಹಾಗೂ ಶಿವ ಪ್ರಸಾದ್ ಶೆಟ್ಟಿಯನ್ನು ಅಗಲಿದ್ದಾರೆ.