ಕಾವು: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅರಿಯಡ್ಕ ಗ್ರಾ.ಪಂನ ಸದಸ್ಯರಾಗಿ ಚುನಾಯಿತರಾದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಲೋಕೇಶ್ ಚಾಕೋಟೆ ಮತ್ತು ಹೇಮಾವತಿ ಚಾಕೋಟೆಯವರಿಗೆ ಜ.೬ರಂದು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ನೂತನ ಸದಸ್ಯರುಗಳಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಫ, ಸ್ಮರಣಿಕೆ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಮಂಜುನಾಥ ರೈ ಸಾಂತ್ಯ, ಶಿವಪ್ರಸಾದ್ ಕೊಚ್ಚಿ, ಮೋಹನಾಂಗಿ, ಚಂದ್ರಶೇಖರ ಗೌಡ ನೂಜಿಬೈಲು, ರಾಮಣ್ಣ ಗೌಡ ಕುದ್ರೋಳಿ, ಲೋಹೀತ್ ಅಮ್ಚಿನಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ರವರು ಉಪಸ್ಥಿತರಿದ್ದರು