ಉಪ್ಪಿನಂಗಡಿ : ರಾಷ್ಟ್ರಮಟ್ಟದ ಇನ್ಸೆಫ್ ಅವಾರ್ಡ್ನ ಅಂತಿಮ ಹಂತಕ್ಕೆ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಎಸ್. ಎ. ದೀಕ್ಷಿತಾ ಜೈನ್ ಅವರ “Synthesis of Bio Super Glue From Okra Mucilage” ಎನ್ನುವ ವಿಜ್ಞಾನ ಮಾದರಿಯು ಆಯ್ಕೆಗೊಂಡಿರುತ್ತದೆ. ರಾಷ್ಟ್ರಮಟ್ಟಕ್ಕೆ ಕರ್ನಾಟಕ ರಾಜ್ಯದಿಂದ ಆಯ್ಕೆಗೊಂಡ ಎರಡು ವಿಜ್ಞಾನ ಮಾದರಿಗಳಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿಯ ವಿಜ್ಞಾನ ಮಾದರಿಯು ಒಂದಾಗಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ. ಎಸ್. ಎ. ದೀಕ್ಷಿತಾ ಜೈನ್ ಇವರು ಉಪ್ಪಿನಂಗಡಿಯ ನಿವಾಸಿಗಳಾದ ಎಸ್. ಎ. ಅನಂತ್ರಾಜ್ ಜೈನ್ ಮತ್ತು ಜಿ. ಪಿ. ವಂದನ ಜೈನ್ ದಂಪತಿಯ ಪುತ್ರಿ.
ರಾಷ್ಟ್ರಮಟ್ಟದ ಇನ್ಸೆಫ್ ಅವಾರ್ಡ್ನ ಮೊದಲ ಮತ್ತು ಎರಡನೇ ಹಂತಕ್ಕೆ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಆರು ವಿವಿಧ ವಿಜ್ಞಾನ ಮಾದರಿಗಳು ಆಯ್ಕೆಯಾಗಿದ್ದು ಅದರಲ್ಲಿ ಒಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಈ ಯೋಜನೆಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿಯಾಗಿರುವ ಶ್ರೀಮತಿ ಜ್ಯೋತಿಕಿರಣ್ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.