ಪುತ್ತೂರು: ವಿಟ್ಲ ಪೇಟೆಯಲ್ಲಿರುವ ಎಸ್ಡಿಪಿಐ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಹಿಂದೂ ಸಂಘಟನೆಯ ಮತ್ತು ಪರಿವಾರದ ಹಿಂದೂ ಕಾರ್ಯಕರ್ತರ ಮೇಲೆ ಆರೋಪ ಹೊರಿಸುವುದನ್ನು ಪುತ್ತೂರು ಬಿಜೆಪಿ ಯುವ ಮೋರ್ಛಾ ಗ್ರಾಮಾಂತರ ಮಂಡಲ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ರತನ್ ರೈ ಕುಂಬ್ರರವರು ಈ ಪ್ರಕರಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಆರೋಪ ಹೊರಿಸುತ್ತಿರುವುದು ಸರಿಯಲ್ಲ, ಈ ಕೃತ್ಯದ ಹಿಂದಿರುವ ಷಡ್ಯಂತ್ರವನ್ನು ಮತ್ತು ಸತ್ಯಾಂಶವನ್ನು ಬಯಲಿಗೆಳೆದು ಆರೋಪಿಗಳನ್ನು ಈ ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಛಾ ಆಗ್ರಹಿಸಿದೆ.