- ಶೃದ್ಧಾ ಭಕ್ತಿಯ ದೈನಂದಿನ ಕರ್ಮ ಚಟುವಟಿಕೆಗಳೇ ನಿಜವಾದ ಧರ್ಮ-ಸುಬ್ಬಪ್ಪ ಕೈಕಂಬ
ಉಪ್ಪಿನಂಗಡಿ: ಶೃದ್ಧಾ ಭಕ್ತಿಯ ದೈನಂದಿನ ಕರ್ಮ ಚಟುವಟಿಕೆಗಳೇ ನಿಜವಾದ ಧರ್ಮ ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ ಹೇಳಿದರು.
ಅವರು ಜ. ೬ರಂದು ಉಪ್ಪಿನಂಗಡಿ ರೋಟರಿ ಕ್ಲಬ್ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸ ವರುಷ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕ ಮುಖಂಡರು ಸಾಮಾಜಿಕ ಸೌಹಾರ್ಧವನ್ನು ಇನ್ನಷ್ಟು ಬಲಪಡಿಸಲು ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಸಹಕಾರಿಗಳಾಗಬೇಕು ಎಂದರು.
ಉಪ್ಪಿನಂಗಡಿ ದೀನರ ಕನ್ಯಾಮಾತೆ ಚರ್ಚ್ ಧರ್ಮಗುರು ಅಬೆಲ್ ಲೋಬೋ ಸಂದರ್ಭೋಚಿತವಾಗಿ ಮಾತನಾಡಿ ಕ್ರಿಸ್ತ ದೇವನ ಜನ್ಮ ವೃತ್ತಾಂತ ಹಾಗೂ ತತ್ವಗಳನ್ನು ವಿವರಿಸಿದರು.
ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ದರ್ಬೆ ಮಾತನಾಡಿ ರೋಟರಿ ಸಂಸ್ಥೆ ಪ್ರತೀ ವರ್ಷ ಸರ್ವಧರ್ಮದ ಸಂದೇಶಗಳನ್ನು ಸಮಾಜಕ್ಕೆ ಅರ್ಪಿಸಿ ಸಮೂದಾಯದ ಸೌಹಾರ್ದ ಜೀವನಕ್ಕೆ ಪ್ರೋತ್ಸಹಿಸುತ್ತಿದೆ ಎಂದರು.
ರೋಟರಿ ಪಿ.ಹೆಚ್.ಎಫ್. ವಲಯ ಸೇನಾನಿ ಜೇರೊಮಿಯಸ್ ಪಾಯಸ್ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷರಾದ ಚಂದಪ್ಪ ಮೂಲ್ಯ, ದಿವಾಕರ ಆಚಾರ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗೆ ಸನ್ಮಾನ:
ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಂದ ಉತ್ತೀರ್ಣರಾದ ರೆನೆಟೆ ವೆರೋನಿಕ ಫೆರ್ನಾಡಿಸ್ ಇವರನ್ನು ಸನ್ಮಾನಿಸಲಾಯಿತು. ಘಟಕದ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಯುನಿಕ್, ನವೀನ್ ಬ್ರಾಗ್ಸ್, ಕಾರ್ಯದರ್ಶಿ ಜಗದೀಶ್ ನಾಯಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.