ಪುತ್ತೂರು: ಮರ್ಕಝುಲ್ ಹುದಾ ವಿಮೆನ್ಸ್ ಕಾಲೇಜ್ ಕುಂಬ್ರ ಇದರ ಪದವಿ ಪೂರ್ವ ಹಾಗೂ ಶರೀಅತ್ ವಿದ್ಯಾರ್ಥಿನಿಯರ ಸಹಯೋಗದಲ್ಲಿ ಸಂಸ್ಥೆಯಲ್ಲಿ ಕುಕ್ಕಿಂಗ್ ಸ್ಪರ್ಧೆ ನಡೆಯಿತು. ವಿತ್ ಪ್ಯಾರ್ ಮತ್ತು ವಿದೌಟ್ ಪ್ಯಾರ್ ಎಂಬ ಎರಡು ಬಗೆಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪದವಿ ಪೂರ್ವ ವಿಭಾಗದಿಂದ ೫ ಹಾಗೂ ಶರೀಅತ್ ವಿಭಾಗದಿಂದ ೩ ತಂಡಗಳು ಪಾಲ್ಗೊಂಡಿದ್ದವು.
ಪದವಿ ಪೂರ್ವ ವಿಭಾಗಕ್ಕೆ ನಡೆದ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ನುಸ್ರಾ, ಆಯಿಶತ್ ರಶಾ, ಆಯಿಶತ್ ರುಮಿ, ಆಯಿಶತ್ ಅಲ್ಫೀನರವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದ್ವಿತೀಯ ಕಲಾ ವಿಭಾಗದ ಫಾತಿಮತ್ ಮುಹಸೀನ, ಫಾತಿಮತ್ ಮುಹ್ಸೀನ ಎನ್, ಮಾಜಿದ ಕೆ.ಎಂ, ಫಾತಿಮತ್ ನಾಸಿಫ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ದ್ವಿತೀಯ ವಾಣಿಜ್ಯ ವಿಭಾಗದ ಆಯಿಶತ್ ಫರ್ಹಾನ್, ಸಫಾ.ಬಿ, ನಫೀಸತುಲ್ ಮಿಸ್ರಿಯಾ, ಫಾತಿಮತ್ ಸಫೀಕ, ಫಾತಿಮತ್ ರಫಾ ತೃತೀಯ ಸ್ಥಾನ ಪಡೆದುಕೊಂಡರು.
ಸಮಾಧಾನಕರ ಪ್ರಶಸ್ತಿ ಪಡೆದ ತಂಡಗಳಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ಅತೂಫ, ಪ್ರಥಮ ವಾಣಿಜ್ಯ ವಿಭಾಗದ ಬಿ. ಎಚ್ ಹನ್ನ, ಆಯಿಶತ್ ನೌಶಿಯ, ಫಾತಿಮತ್ ಸನಾ, ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ಝಹ್ರ, ಪ್ರಥಮ ವಾಣಿಜ್ಯ ವಿಭಾಗದ ಆಯಿಶತ್ ಸಲೀಸ, ನಬೀಸತ್ ಮಿಸ್ರಿಯಾ, ಸನಾ, ಹುಮೃಮ ಭಾಗವಹಿಸಿದ್ದರು.
ಶರೀಅತ್ ವಿಭಾಗದಿಂದ ಪ್ರಥಮ ಸ್ಥಾನವನ್ನು ಆಯಿಶತ್ ಸುಹೈನ (ದ್ವಿತೀಯ ಶರೀ) ಆಯಿಶತ್ ಶಬೀಬ ಬೀವಿ, ಫಾತಿಮತ್ ಫರ್ಹಾನ, ಮನ್ಸೂರ ಬಿ.ಎಂ, ಆಯಿಶತ್ ನೌಶೀನ, ದ್ವಿತೀಯ ಸ್ಥಾನವನ್ನು ಅಸ್ಲಹಾ ಫರ್ಹಾನ(ತೃತೀಯ ಶರೀಅತ್) ಅಸ್ರೀನಾ, ಸಫ್ರೀನಾ, ಸಲ್ಮಾಬಿ, ಝೀನತ್, ಕೈರುನ್ನಿಸಾ ಪಡೆದುಕೊಂಡರು. ತೃತೀಯ ಸ್ಥಾನವನ್ನು ಆಯಿಶಾ ಅರಫ (ಪ್ರಥಮ ಶರೀಅತ್) ಝುಹೈರ, ಶಿಫಾನ, ನುಶ್ರ, ಜುಮೈರ ಸಫ್ನಾಸ್, ಶಿಫಾ, ತಸ್ರೀಫ, ಸಫ್ನಾಝ್, ಮಿನಾಝ್ ಸುಲ್ತಾನ, ರಾಬಿಯ ಪಡೆದುಕೊಂಡರು.
ಮರ್ಕಝ್ ಕೇಂದ್ರ ಸಮಿತಿ ಸದಸ್ಯ ಹಂಝ ಹಾಜಿ ಮಂಗಳೂರು, ಸೌದಿ ಅರೇಬಿಯಾ ನ್ಯಾಶನಲ್ ಸಮಿತಿ ಮಾಜಿ ಗೌರವಾಧ್ಯಕ್ಷ ಅನ್ವರ್ ಹುಸೈನ್ ಗೂಡಿನಬಳಿ, ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಳ್ಯ, ಮುಹಮ್ಮದ್ ಅಲಿ ಜುಬೈಲ್, ಯುಎಇ ಸಮಿತಿಯ ರಝಾಕ್ ಬುಸ್ತಾನಿ, ಖಲಂದರ್ ಕಬಕ, ವಿದೇಶ ಪ್ರತಿನಿಧಿಗಳಾದ ಹಕೀಂ, ಆಸಿಫ್, ಅಬ್ದುಲ್ ಕರೀಂ ಮುಸ್ಲಿಯಾರ್, ಅಬ್ದುಲ್ ಹಮೀದ್, ಶಿಹಾಬುದ್ದೀನ್ ಮುಂತಾದವರು ತೀರ್ಪುಗಾರರಾಗಿ ಸಹಕರಿಸಿದರು. ಪದವಿ ವಿಭಾಗದ ಪ್ರಾಂಶುಪಾಲೆ ಸಂಧ್ಯಾ ಹಾಗೂ ಉಪನ್ಯಾಸಕಿಯರು ಕಾರ್ಯಕ್ರಮ ನಿರ್ವಹಿಸಿದರು.