ಪುತ್ತೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಪುತ್ತೂರು ಇದರ ವತಿಯಿಂದ ಜ 4ರಂದು ಸವಣೂರಿನ ಮುಖ್ಯ ಪೇಟೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 64ನೇ ವರ್ಷದ ಪರಿನಿಬ್ಬಾಣ ದಿನಾಚರಣೆ ಹಾಗೂ ಮಹಾನಾಯಕ ಧಾರಾವಾಹಿಯ ಪ್ಲೆಕ್ಸ್ ಅನಾವರಣ ಕಾರ್ಯಕ್ರಮ ತಾಲೂಕು ಸಂಚಾಲಕರಾದ ಗಣೇಶ್ ಗುರಿಯಾನ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪ್ಲೆಕ್ಸ್ ಅನಾವರಣವನ್ನು ದಸಂಸ ಸಂಸ್ಥಾಪಕ ಸದಸ್ಯರು ರಾಜ್ಯ ಸಂಘಟನಾ ಸಂಚಾಲಕರಾದ ಎಂ ದೇವದಾಸ್ ಮಂಗಳೂರು ಅನಾವರಣ ಮಾಡಿ ಮಾತನಾಡಿದ ಅವರು ದಲಿತ ಸಮುದಾಯ ಇವತ್ತು ಸಮಾಜಿಕ ಶೈಕ್ಷಣಿಕ ಅರ್ಥಿಕವಾಗಿ ಏನಾದರೂ ಸಾಧನೆ ಮಾಡಿದರೆ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಕಾರಣ ಕೇಂದ್ರದಲ್ಲಿ ಪ್ರತಿಯೊಬ್ಬರಿಗೂ 15 ಲಕ್ಷ ನೀಡುತ್ತೆನೆ ಎಂದು ಅಶ್ವಾಸನೆ ನೀಡಿ ಅಧಿಕಾರ ಬಂದ ನರೇಂದ್ರ ಮೋದಿ ಇಲ್ಲಿಯವರೆಗೆ ಯಾರ ಖಾತೆಗೂ ಜಮೆ ಮಾಡಿದ ಉದಾಹರಣೆಗೆ ಇಲ್ಲ .ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯಾವರಿಗೆ ಮಾರಟ ಮಾಡಿದ್ದು ಬಿಟ್ಟರೆ ಬೇರೆ ಯಾವ ಸಾಧನೆ ಮಾಡಿಲ್ಲ ಎಂದರು.
ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಪ್ಪು ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕರಾದ ರಘು .ಕೆ ಎಕ್ಕಾರ್ ಮಾತನಾಡಿ ಬಾಬಾ ಸಾಹೇಬರಿಗೆ ಶಿಕ್ಷಣ ಹಾಗೂ ಅವರ ಸಾಧನೆ ಶ್ರಮವಹಿಸಿದ ಅವರ ತಂದೆ ತಾಯಿ ಹಾಗೂ ಗುರುಗಳನ್ನು ಸಹ ನಾವು ಸ್ಮರಿಸುವುದ ಬಹಳ ಮುಖ್ಯ ಎಂದರು. ಬೆಳ್ತಂಗಡಿಯ ಉಜಿರೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿರುವ ಘಟನೆ ಅದೊಂದು ದೇಶ ದ್ರೋಹದ ಘಟನೆಯಾಗಿದ್ದು ಅದು ಯಾರೇ ಮಾಡಿದ್ದರು ಅದನ್ನು ಸಹಿಸಲು ಸಾದ್ಯವಿಲ್ಲ ಪೊಲೀಸರು ನೈಜ ಆರೋಪಿಯನ್ನು ಕೋಡಲೇ ಬಂಧಿಸಬೇಕು ರಾಜಕೀಯ ಒತ್ತಡಕ್ಕೆ ಮಣಿದು ಇಡಿ ಘಟನೆಯನ್ನು ಮುಸ್ಲಿಂ ಸಮುದಾಯದ ತಲೆಗೆ ಹಾಕುವ ಕೃತ್ಯ ನಡೆಯಬಾರದು ಎಂದರು.
ಮಾರ್ಗದರ್ಶಕ ಹಾಗೂ ಹೋರಾಟಗರಾದ ಆನಂದ್ ಮಿತ್ತಬೈಲ್ ಮಾತನಾಡಿ ಸಂಘಪರಿವಾರದ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಹತ್ತಿಕ್ಕವ ಕಾರ್ಯವಾಗುತ್ತಿದ್ದು ಇಂತಹ ಕೆಲಸವನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನಹರಿಸಬೇಕು ನೀವು ಮನುವಾದವನ್ನು ತರಲು ಪ್ರಯತ್ನಿಸಿದ್ದರೆ ಇನ್ನೂ ಕೋರಂಗಾವ್ ಘಟನೆ ನಡಯಬಹುದು ಎಂದು ಎಚ್ಚರಿಸಿದ್ದರು. ಯಾವ ರಾಮನಿಂದ ಯಾವ ಕೃಷ್ಣನಿಂದ ದಲಿತರು ಸ್ವಾಭಿಮಾನಿಗಳಗಲ್ಲಿಲ ಬದಲಿಗೆ ಬಾಬಾಸಾಹೇಬರ ಸಂವಿಧಾನದಿಂದ ದಲಿತರು ಸ್ವಾಭಿಮಾನಿಗಳಾದ್ದರು ,ಇವತ್ತು ಹಣ ಮಾಡಲು, ಹೆಸರು ಮಾಡಲು, ದಂದೆ ಮಾಡಲು ಕೆಲವರು ಅಂಬೇಡ್ಕರ್ ಹೆಸರಿನಲ್ಲಿ ಸಂಘಟನೆ ಮಾಡುತ್ತಿದ್ದು ನೀವು ಹಣ ,ಹೆಸರು, ದಂದೆ ಮಾಡುವುದಿದ್ದರೆ ಬಿಜೆಪಿ ಅಥವಾ ಸಂಘಪರಿವಾರಕ್ಕೆ ಹೋಗಿ ಅದು ಬಿಟ್ಟು ಅಂಬೇಡ್ಕರ್ ಹೆಸರಿನಲ್ಲಿ ಸಂಘಟನೆ ಮಾಡಬೇಡಿ ಎಂದರು.
ಸಾವಿತ್ರಿ ಬಾಯಿಪುಲೆ ಅವರ ಭಾವಚಿತ್ರಕ್ಕೆ ಪುಪ್ಪು ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಸರೋಜಿನಿ ಸಾವಿತ್ರಿ ಬಾಯಿಪುಲೆ ಈ ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ,ಹೆಣ್ಣು ಮಕ್ಕಳ ಶಾಲೆಯನ್ನು ಪ್ರಾರಂಭಿಸಿದ ಅಕ್ಷರದ ಅವ್ವ , ಇವತ್ತು ಹೆಣ್ಣು ಮಕ್ಕಳ ಸಾಧನೆ ಮುನ್ನುಡಿ ಬರೆದ ಮಾತೆ ಸಾವಿತ್ರಿ ಬಾಯಿಪುಲೆ ಎಂದರು.ಅಧ್ಯಕ್ಷತೆ ವಹಿಸಿದ ತಾಲೂಕು ಸಂಚಾಲಕರಾದ ಗಣೇಶ್ ಗುರಿಯಾನ ಮಾತನಾಡಿ, ನಾವು ಪ್ರಜಾವಂತರಾಗಬೇಕಿದ್ದರೆ ಶಿಕ್ಷಣ ಬಹಳ ಮುಖ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ಪ್ರತಿಯೊಬ್ಬ ತಂದೆ ತಾಯಿಯ ಜವಾಬ್ದಾರಿ ಅದನ್ನು ಮಹಾನಾಯಕ ಧಾರಾವಾಹಿಯಲ್ಲಿ ಬರುವ ಭೀಮಾನ ತಂದೆ ತಾಯಿಯ ಪಾತ್ರವನ್ನು ನೋಡಿ ನಾವು ತಿಳಿದುಕೊಳ್ಳಬೇಕು,ಹಿಂದೂವಾಗಿ ಹುಟ್ಟಿ ಹಿಂದೂವಾಗಿ ಸಾಯಲಾರೆ ಎಂಬ ಬಾಬಾಸಾಹೇಬ್ ಅಂಬೇಡ್ಕರ್ ರವರ ಮಾತಿನಂತೆ ಅಸಮಾನತೆ ತುಂಬಿದ ಹಿಂದೂ ಧರ್ಮವನ್ನು ಬಿಟ್ಟು ಸಮಾನತೆ ಸಾರುವ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ನಾವು ನೈಜ ಅಂಬೇಡ್ಕರ್ ರವರ ಅನುಯಾಯಿಗಳು ಆಗುವ ಶಿಕ್ಷಣ ಸಂಘಟನೆಯ ಮೂಲಕ ಎಲ್ಲಾರನ್ನು ಒಟ್ಟು ಸೇರಿಸುವ ಕಾರ್ಯ ನಡೆಯಲಿ ಎಂದರು.
ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಎಂ .ಎ ರಪೀಕ್ ,ದಲಿತ್ ಸೇವಾ ಸಮಿತಿ ಸ್ಥಾಪಕ ಜಿಲ್ಲಾಧ್ಯಕ್ಷರಾದ ಶೇಷಪ್ಪ ಬೆದ್ರಕಾಡು, ಧರ್ಮಚಾರಿ ನಯನ್ ಕುಮಾರ್ ,ಸ್ಥಳೀಯ ವಿಚಾರವಾದಿ ಸುಂದರ ಪೂಜಾರಿ ,ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು,ಕಡಬ ತಾಲೂಕು ಸಂಚಾಲಕರಾದ ಉಮೇಶ್ ಕೋಡಿಂಬಾಳ,ಪುತ್ತೂರು ತಾಲೂಕು ಶಾಖೆ ಸಂಘಟನಾ ಸಂಚಾಲಕಿ ಸುಶೀಲ ಕೂಸಪ್ಪ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಮತ್ತು ಗೆದ್ದ ಕೆಲ ಸಮಿತಿಯ ಪದಾಧಿಕಾರಿಗಳಾದ ಬಾಬು ಎನ್ ಸವಣೂರು ,ನಾಗೇಶ್ ಕುರಿಯ,ಸುಶೀಲ ಮಿತ್ತಬೈಲ್ ,ಪ್ರೇಮ ರಾಮಂಕುಜ,ಸುಶೀಲ ತೋಟಂತಿಲ್ಲ. ಚೆನ್ನು ಮಾಂತೂರು,ಮೀನಾಕ್ಷಿ ಬಂಬಿಲ, ಇವರನ್ನು ಸಾಲು ಹಾಕಿ ಸನ್ಮಾನಿಸಲಾಯಿತು .
ಪುತ್ತೂರು ತಾಲೂಕು ಶಾಖೆಯ ವಿಶ್ವನಾಥ್ ಪುಣ್ಚಾತ್ತಾರ್,ಪ್ರಮೀಣ್ ಪಾಪೆಮಜಲ್, ಮಾಜಿ ವಿದ್ಯಾರ್ಥಿ ಘಟಕದ ಜಿಲ್ಲಾ ಸಂಚಾಲಕರಾದ ರಾಕೇಶ್ ಕುಂದರ್, ಮಾಧವ ದೇವಸ್ಯ, ದಲಿತ ಹೋರಾಟಗಾರ ಸುಂದರ ನಿಡ್ಪಳಿ,ದಲಿತ್ ಸೇವಾ ಸಮಿತಿಯ ಲಲಿತಾ ನಾಯ್ಕ,ಚಂದ್ರಶೇಖರ್ , ಕಡಬ ತಾಲೂಕು ಶಾಖೆಯ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮ ಸಮಿತಿ ಪದಾಧಿಕಾರಿಗಳು ಹ ಹಲವಾರು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಿದರು.
ಕುಮಾರಿ ನಮಿತಾ ತೋಟಂತಿಲ ಸ್ವಾಗತಿಸಿ, ಹರೀಶ್ ಅಂಕಜಾಲ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು .