ಪುತ್ತೂರು: ಸ್ನೇಹ ಸಂಗಮ ಆಟೊ ರಿಕ್ಷಾ ಚಾಲಕ ಮಾಲಕ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಎರಡನೇ ಕಾರ್ಯಕ್ರಮ ಬಡಗನ್ನೂರು ಗ್ರಾಮದ ಅನಿಲೆ ಅಂಗನವಾಡಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜ.೫ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಿತು. ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಮೊಟ್ಟೆತ್ತಡ್ಕ, ಸಂಘದ ಅಧ್ಯಕ್ಷ ಅರವಿಂದ ಪೆರಿಗೇರಿ, ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ, ಕಾರ್ಯದರ್ಶಿ ತಾರಾನಾಥ ಗೌಡ ಬನ್ನೂರು, ಉಪಾಧ್ಯಕ್ಷ ಉಮೇಶ್ ಚಂದ್ರ, ಸಂಘದ ಮಾಜಿ ಅಧ್ಯಕ್ಷ ಜಗನಾಥ್ ಕೊಯಿಲ, ಅಂಗನವಾಡಿ ಕಾರ್ಯಕರ್ತೆ ಗೋಪಮ್ಮ, ಸಹಾಯಕಿ ಬೇಬಿ, ಸಿರಿ ಸ್ತ್ರೀಶಕ್ತಿ ಗುಂಪು ಅನಿಲೆ, ಶ್ರೀನಿಧಿ ಸ್ತ್ರೀಶಕ್ತಿ ಗುಂಪು ಅನಿಲೆ ಮತ್ತು ಬಾಲವಿಕಾಸ ಸಮಿತಿ ಅನಿಲೆ ಇದರ ಸದಸ್ಯರು ಉಪಸ್ಥಿತರಿದ್ದರು.