HomePage_Banner
HomePage_Banner
HomePage_Banner
HomePage_Banner

ಮುಂಡೂರು ಗ್ರಾಮ ಪಂಚಾಯತ್‌ನಲ್ಲಿ ವಿಜಯೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಾರ್ಯಕರ್ತನ ಶ್ರಮ ಯಾವತ್ತೂ ವ್ಯರ್ಥವಾಗದು – ಅರುಣ್ ಪುತ್ತಿಲ

ಪುತ್ತೂರು: ಭಕ್ತರ ಬೇಡಿಕೆಗಳಿಗೆ ತಕ್ಕಂತೆ ಶಕ್ತಿಯನ್ನು ಭಗವಂತ ಅನುಗ್ರಹಿಸಿದ್ದಾರೆ. ಹಾಗಾಗಿ ಕಾರ್ಯಕರ್ತನ ಶ್ರಮ ಯಾವತ್ತೂ ವ್ಯರ್ಥವಾಗದು ಎಂದು ಪಕ್ಷದ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಮುಂಡೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಿಜೆಪಿ ಹಿರಿಯ ಮುಖಂಡರಾಗಿರುವ ಸದಾಶಿವ ಭಂಡಾರಿ, ಎಮ್ ಮೋಹನ್ ರೈ. ಹರೀನಾರಾಯಣ ಭಟ್ ದೀಪ ಬೆಳಗಿಸಿ ಮೆರವಣಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು. ಕಳೆದ ೧೫ ವರ್ಷಗಳಲ್ಲಿ ನಮ್ಮಲ್ಲಿ ಇರದ ಪಂಚಾಯತ್‌ನ ಆಡಳಿತವನ್ನು ಭಗವಂತ ಕೊಡುವ ಮೂಲಕ ನಮ್ಮೆಲ್ಲರ ಆಶಯಗಳಿಗೆ ಭಕ್ತರ ಬೇಡಿಕೆಗಳಿಗೆ ಶಕ್ತಿಯನ್ನು ಕೊಡುವ ಧರ್ಮಾಧಾರಿತ ರಾಜಕಾರಣ ಮುಂಡೂರು ಪಂಚಾಯತ್‌ನಲ್ಲಿ ಆಗಬೇಕೆಂಬಂತೆ ದೇವರು ಅನುಗ್ರಹ ಕೊಟ್ಟಿದ್ದಾರೆ. ಲಕಪ್ರಾಮಾಣಿಕ ಕಾರ್ಯಕರ್ತನ ಪರಿಶ್ರಮ ಯಾವತ್ತೂ ವ್ಯರ್ಥವಾಗದು ಎನ್ನೋದಕ್ಕೆ ಈ ಬಾರಿಯ ಚುನಾವಣೆ ಸಾಕ್ಷಿಯಾಗಿದೆ. ಈ ಕಾರ್ಯಕರ್ತರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ಪಂಚಾಯತ್ ಸದಸ್ಯರ ಮೇಲಿದೆ ಎಂದರು. ವಿಜೇತ ಅಭ್ಯರ್ಥಿಗಳ ಭವ್ಯ ಮೆರವಣಿಗೆ ನರಿಮೊಗರು. ಭಕ್ತಕೋಡಿ, ಸರ್ವೆ, ರೆಂಜಾಲಾಡಿ, ಮುಂಡೂರು, ಪಂಜಳ, ಉದಯಗಿರಿ ಮೂಲಕ ಸಾಗಿ ಶ್ರೀ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ ದಲ್ಲಿ ಸಮಾರೋಪ ಗೊಂಡಿತು. ನಾಸಿಕ್ ಬ್ಯಾಂಡ್. ಸುಡುಮದ್ದು. ಕಾರ್ಯಕರ್ತರ ಕುಣಿತ ಮೆರವಣಿಗೆಗೆ ಮತ್ತಷ್ಟು ಮೆರಗು ಹೆಚ್ಚಿಸಿತ್ತು. ನಂತರ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಸದಸ್ಯರಿಗೆ ಅಭಿನಂದನೆ ಮತ್ತು ಚುನಾವಣೆ ಯಲ್ಲಿ ದುಡಿದ ದೇವದುರ್ಲಬ ಕಾರ್ಯಕರ್ತರಿಗೆ ಅಭಿವಂದನೆ ಸಲ್ಲಿಸಲಾಯಿತು. ಈ ಅಭಿನಂದನಾ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಶಿವರಾಂಜನ್. ಚುನಾವಣಾ ಉಸ್ತುವಾರಿ ರಾಜೇಶ್ ಬನ್ನೂರು. ಎಮ್ ಮೋಹನ್ ರೈ. ಸದಾಶಿವ ಭಂಡಾರಿ. ಅಶೋಕ್ ಕುಮಾರ್ ಪುತ್ತಿಲರವರು ಮಾತನಾಡಿದರು. ಸುಮಾರು ೫೦೦ ಕ್ಕಿಂತ ಮಿಕ್ಕಿದ ಕಾರ್ಯಕತರು ಸಭೆಯಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.