ನೆಲ್ಯಾಡಿ: ಮುಂದಿನ 5 ವರ್ಷಗಳ ಅವಧಿಗೆ ಶಿರಾಡಿ ಗ್ರಾಮದ ಸಂಪ್ಯಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ, ಶಿರಾಡಿ ಗ್ರಾ.ಪಂ.ಸದಸ್ಯೆ ರಾಧಾ ತಂಗಪ್ಪನ್ ಹಾಗೂ ಉಪಾಧ್ಯಕ್ಷರಾಗಿ ಸವಿತಾ ಆನಂದ ಗೌಡ ಕೊರಕ್ಕಾಯರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ನಿರ್ದೇಶಕರಾದ ಪದ್ಮಾವತಿ ಅಮ್ಮಾಜೆ, ಶಾರದಾ ಬಾಗಿಲುಗದ್ದೆ, ಶಾರದಾ ರಾಗಿತ್ತಡ್ಡ ರೆಖ್ಯ, ಜಲಜಾಕ್ಷಿ ರೆಖ್ಯ, ಲೀಲಮ್ಮ ಸಂಪ್ಯಾಡಿ, ಅಮ್ಮಣ್ಣಿ ಸಂಪ್ಯಾಡಿ, ಜೋಲಿ ಸಂಪ್ಯಾಡಿ, ಶಾಲಿನಿ ಅಮ್ಮಾಜೆ, ಮನೋರಮಾ ಅಮ್ಮಾಜೆ ಸಭೆಯಲ್ಲಿ ಉಪಸ್ಥಿತರಿದ್ದರು. ಸಹಕಾರ ಇಲಾಖೆಯ ನಾಗೇಂದ್ರರವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಭವ್ಯ ರಾಗಿತ್ತಡ್ಡ ಸಹಕರಿಸಿದರು.