ಆಲಂಕಾರು: ಕಡಬ ತಾಲೂಕಿನ ಆಲಂಕಾರು ಮುಖ್ಯ ರಸ್ತೆಯಲ್ಲಿರುವ ಶ್ರೀದುರ್ಗಾ ಟವರ್ಸ್ ಜ. ೬ರಂದು ಶುಭಾರಂಭಗೊಂಡಿತು. ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ವೈಧಿಕ ಕಾರ್ಯಕ್ರಮದೊಂದಿಗೆ ಶುಭಾರಂಭಗೊಂಡಿತು. ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀದಾಮ ಮಾಣಿಲ ಟವರ್ಸ್ ಉದ್ಘಾಟನೆ ಮತ್ತು ಆಶೀರ್ವಚನ ನೀಡಿ ಆಲಂಕಾರಿನಲ್ಲಿ ದುರ್ಗಾ ಟವರ್ಸ್ ಎಂಬ ಕಟ್ಟಡ ತಾಯಿ ದುರ್ಗಾಮಾತೆಯ ಹೆಸರಿನಲ್ಲಿದ್ದು ಮನುಷ್ಯ ಹುಟ್ಟಿನಿಂದ ಸಾಯುವ ತನಕ ರಕ್ಷೆಯನ್ನು ನೀಡುವವರು ಯಾರೆಂದರೆ ಅದು ತಾಯಿ. ತಂದೆ, ತಾಯಿ, ಗುರು ಹಿರಿಯರ ಈ ಭೂಮಿಯ ಋಣವನ್ನು ಯಾರಿಂದಲೂ ತೀರಿಸಲು ಅಸಾಧ್ಯ. ಮನುಷ್ಯ ಉನ್ನತ ಸ್ಥಾನವನ್ನು ಏರಬೇಕಾದರೆ ದೈವೀಶಕ್ತಿಯ ಆನುಗ್ರಹ ಇರಬೇಕು.
ಮನೆಯಲ್ಲಿ ಮತ್ತು ಕುಟುಂಬದಲ್ಲಿ ಪೂಜೆ ಪುರಷ್ಕಾರ ನಡಯುವ ಸಂದರ್ಭದಲ್ಲಿ ತಮ್ಮ ತಮ್ಮ ಮಕ್ಕಳನ್ನು ಪೂಜೆ ಪುರಷ್ಕಾರಾದಿ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವ ಅಭ್ಯಾಸವನ್ನು ಹಿರಿಯರು ರೋಢಿಸಿಕೊಳ್ಳಬೇಕು. ಕೊರೋನ ಎನ್ನುವಂತಹ ಮಹಾಮಾರಿ ಉದ್ಯಮಿಗಳಿಗೆ ಆರ್ಥಿಕ ಸಂಕಷ್ಟ ತಂದಿದ್ದರೂ ತಮ್ಮ ತಮ್ಮ ಮನೋಸ್ಥೈರ್ಯದಿಂದ ಮುನ್ನಡೆಯುವಂತೆ ತಿಳಿಸಿ ಕೊರೋನಾ ಮಹಾಮಾರಿ ಬಂದದ್ದು ಮನುಷ್ಯನಲ್ಲಿರುವ ದುಶ್ಚಟ, ದುರ್ವ್ಯಶನ, ದುರ್ನಡತೆಯನ್ನು ದೂರಮಾಡಲು ಬಂದದ್ದು. ಆದ್ದರಿಂದ ಒಳ್ಳೆಯ ಗುಣ ಧರ್ಮವನ್ನು ರೂಢಿಸಿಕೊಳ್ಳಬೇಕು. ಜಾತಿ, ಮತ, ಪಂಥ ಬೇದಭಾವ ಬಿಟ್ಟು ಈ ಭೂಮಿ, ಮಣ್ಣು, ನೀರು, ಗಾಳಿ, ಪ್ರಕೃತಿ ಎಲ್ಲವೂ ದೇವರ ಅನುಗ್ರಹದಿಂದ ಇರುವಂತದ್ದು ಎಂದು ನಂಬಿ ನಾವೆಲ್ಲರೂ ದೇಶ ಹಾಗೂ ವಿಶ್ವದ ಬಗ್ಗೆ ಯೋಚನೆಯನ್ನು ಮಾಡಬೇಕೆಂದರು. ತಾಯಿ ದುರ್ಗಾ ಮಾತೆಯ ಹೆಸರಿನಲ್ಲಿರುವ ಈ ಟವರಿನಲ್ಲಿ ವ್ಯವಹಾರ ಮಾಡುವವರಿಗೆ ಆರ್ಥಿಕ ಸಂಪತ್ತು ಸಮೃದ್ಧಿಯಾಗಿ ಆಲಂಕಾರಿಗೆ ಕೀರ್ತಿ ಬರುವ ಕೆಲಸ ಕಾರ್ಯವಾಗಲಿ ಬಾಲ್ಯಾವಸ್ಥೆಯಲ್ಲಿರುವ ಈ ದುರ್ಗಾ ಟವರ್ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹೇಳಿ ಶುಭಹಾರೈಸಿದರು.
ಆಲಂಕಾರು ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ .ಎಂ ಮಾತನಾಡಿ ಆಲಂಕಾರಿನಲ್ಲಿ ರಾಧಾಕೃಷ್ಣ ರೈ ಪರಾರಿಗುತ್ತು ರವರ ಮಾಲಿಕತ್ವದ ಶ್ರೀದುರ್ಗಾಟವರ್ನಿಂದ ಜನರಿಗೆ ಬಹುಮುಖ ಸೇವೆ ದೊರಕುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ಮನವಳಿಕೆ ಗುತ್ತಿನ ಯಜಮಾನ ರಮಾನಾಥ ರೈ .ಎಂ ಮಾತನಾಡಿ ಗಗನ್ ಅರ್ತ್ಮೂವರ್ಸ್, ಆಲೋಬ್ಲಾಕ್ ನಿಂದ ಉತ್ತಮ ಪ್ರಾಮಾಣಿಕ ಸೇವೆ ನೀಡುತ್ತಿರುವ ರಾಧಾಕೃಷ್ಣ ರೈ ಯವರ ಮಾಲಕತ್ವದ ಶ್ರೀದುರ್ಗಾ ಟವರ್ ಅಭಿವೃದ್ಧಿಪಥದತ್ತ ಸಾಗಲೀ ಎಂದು ಹೇಳಿ ಶುಭಹಾರೈಸಿದರು.
ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್ .ಎಸ್ ಮಾತನಾಡಿ ಈ ಕಟ್ಟಡದ ಪ್ರತಿಯೊಬ್ಬ ಆಂಗಡಿಯವರು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಲೀ ಹಾಗೂ ಆಲಂಕಾರು ಮೆಸ್ಕಾಂ ವತಿಯಿಂದ ಉತ್ತಮ ಸೇವೆಯನ್ನು ನೀಡುವುದಾಗಿ ತಿಳಿಸಿದರು. ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕರಾದ ರುಕ್ಮ ನಾಯ್ಕ್ .ಎ ಉಪಸ್ಥಿತರಿದ್ದು ಶುಭಹಾರೈಸಿದರು. ಸಭೆಯಲ್ಲಿ ಕಟ್ಟಡದ ಇಂಜಿನಿಯರ್ ಆಕಾರ್ ಆಸೋಸಿಯೇಟ್ಸ್ನ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ದವಲಗಿರಿ ಕನ್ಸ್ಟ್ರಕ್ಸ್ನ್ನ ಮನೋಹರ, ಆಲಂಕಾರು ಕೊಂಡಾಡಿಕೊಪ್ಪದ ಜಗದೀಶ, ಎಲೆಕ್ಟ್ರಿಕಲ್ ಕೆಲಸ ಕಾರ್ಯ ನಿರ್ವಹಿಸಿದ ಪೃಥ್ವಿಟ್ರೇಡರ್ಸ್ನ ಮಾಲಕರಾದ ದಿವಾಕರ ರೈ ಯವರನ್ನು ಸಭೆಯಲ್ಲಿ ಗೌರವಿಸಲಾಯಿತು.
ಟವರ್ನ ಮಾಲಕರಾದ ರಾಧಾಕೃಷ್ಣ ರೈ ಮತ್ತು ಶ್ರೀಮತಿ ಪ್ರಮೀಳಾ ಪರಾರಿಗುತ್ತು ರವರು ಸ್ವಾಮೀಜಿಗೆ ಫಲಪುಷ್ಪ ಸಮರ್ಪಿಸಿ ನಂತರ ಮಾತನಾಡಿ ನಾವು ಜನರಿಗೆ ಗಗನ್ ಅರ್ಥ್ಮೂವರ್ಸ್ ಮತ್ತು ಆಲೋಬ್ಲಾಕ್ನಿಂದ ಉತ್ತಮ ಸೇವೆ ನೀಡುತ್ತಿದ್ದು, ಆಲಂಕಾರಿನ ಹೃದಯ ಭಾಗದಲ್ಲಿರುವ ಶ್ರೀದುರ್ಗಾ ಟವರ್ನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಕಟ್ಟಡದಲ್ಲಿ ಉದ್ದಿಮೆದಾರಿಗೆ ಬಾಡಿಗೆ ರೂಮ್ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗೆ ಅನುಕೂಲವಾಗುವಂತೆ ಮೂಲ ಭೂತಸೌಕರ್ಯವಿದ್ದು ಇದನ್ನು ಸಧುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿ 9980442256/9483512056 ನಂಬರಿಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ನಿಧೀಕ್ಷಾ ಮತ್ತು ಪ್ರೇಮಾ ಪ್ರಾರ್ಥಿಸಿ, ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿ, ದಿವಾಕರ್ ರೈ ಸ್ವಾಗತಿಸಿ, ಕಮಲಾಕ್ಷ ರೈ ಪರಾರಿಗುತ್ತು ಧನ್ಯವಾದ ಸಮರ್ಪಿಸಿ. ಮಾತೃಶ್ರೀ ಸುನಂದ ರೈ ಪರಾರಿಗುತ್ತು, ಸೋಮಶೇಖರ ಶೆಟ್ಟಿ ಮತ್ತು ಶ್ರೀಮತಿ ಕುಸುಮಲತಾ ಶೆಟ್ಟಿ ಮತ್ತು ಮಕ್ಕಳು ಅಳಕೆ ಮಜಲು, ರೇವತಿ ಕಮಲಾಕ್ಷ ರೈ ಮತ್ತು ಮಕ್ಕಳು ಪರಾರಿಗುತ್ತು, ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಅಳಕೆ ಮಜಲು, ಜಗದೀಶ್ ಆಳ್ವ ಮತ್ತು ಶ್ರೀಮತಿ ಪವಿತ್ರಾ ಜಗದೀಶ್ ಆಳ್ವ ಮತ್ತು ಮಕ್ಕಳು ಸುಜೀರ್ ಗುತ್ತು, ಗಗನ್ ರೈ, ಸೃಜನ್ ರೈ, ದೃಶನ್ ರೈ ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆ, ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮುಕ್ತೇಸರರಾದ ರಾಮಮೋಹನ್ ರೈ ಸುರುಳಿ, ರತ್ನಾಶ್ರೀ ಸೌಹಾರ್ಧ ಸಹಕಾರಿ ನಿಯಮಿತದ ಅಧ್ಯಕ್ಷ ರಾಧಾಕೃಷ್ಣ ಕೆ. ಎಸ್, ಆಲಂಕಾರು ಸಿ.ಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರೈ ಮನವಳಿಕೆ, ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಸೇಸಪ್ಪ ರೈ .ಕೆ, ವಿಶ್ರಾಂತ ಪ್ರಾಮಶುಪಾಲರಾದ ಕೊಣಾಲು ಗುತ್ತು ವಿಠಲ ರೈ, ಲಕ್ಷ್ಮೀಪ್ರಸನ್ನದ ಮಾಲಕರಾದ ತ್ರಿವಿಕ್ರಮ ಭಟ್, ಪುತ್ತೂರು ತಾಲೂಕು ಲ್ಯಾಂಪ್ ಸೋಸೈಟಿಯ ಅಧ್ಯಕ್ಷ ಪೂವಪ್ಪ ನಾಯ್ಕ ಶಾಂತಿಗುರಿ, ಬೈಲಗುತ್ತು ಮಾರಪ್ಪ ಶೆಟ್ಟಿ ಯವರು ಸೇರಿದಂತೆ ಟವರ್ನ ಮಾಲಕರಾದ ರಾಧಾಕೃಷ್ಣ ರೈ ಪರಾರಿಗುತ್ತು ರವರ ಹಿತೈಷಿಗಳು ಹಾಗೂ ಬಂಧುಮಿತ್ರರು ಆಗಮಿಸಿ ನೂತನ ಟವರಿಗೆ ಶುಭಹಾರೈಸಿದರು.