ಪುತ್ತೂರು : ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ಅಧ್ಯಕ್ಷ ಇತ್ತೀಚೆಗೆ ನಿಧನರಾದ ದರ್ಬೆ ಸಂಜೀವ ನಾಕ್ರವರ ಶ್ರದ್ದಾಂಜಲಿ ಕಾರ್ಯಕ್ರಮ ಜ.6 ರಂದು ಮೃತರ ನಿವಾಸ ಬೆದ್ರಾಳ ನೆಲ್ಲಿಕೇರಿಯಲ್ಲಿ ನಡೆಯಿತು. ನಿವೃತ್ತ ತಹಶೀಲ್ದಾರ್ ಚಂದ್ರಶೇಖರ ನಾಕ್ ಮಾತನಾಡಿ ಸಂಜೀವ ನಾಕ್ ನೇರ ವ್ಯಕ್ತಿತ್ವ, ಮೃದು ಸ್ವಭಾವದ ವ್ಯಕ್ತಿ ಎಲ್ಲರೊಡನೆ ಸ್ನೇಹಜೀವಿಯಾಗಿ, ಸಹಾಯ ಮಾಡುವಂತ ಬಹು ದೊಡ್ಡ ಗುಣ ಅವರಲ್ಲಿತ್ತು. ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ಪೂರ್ತಿ ತೊಡಗಿಸಿ ಕೊಂಡವರೆಂದರೆ ಸಂಜೀವ ನಾಕ್ ಎಂದು ಹೇಳಿ ಮೃತರ ಗುಣಗಾನ ಮಾಡಿದರು.
ಮೃತರ ಗೌರವಾರ್ಥ ಮೌನ ಪ್ರಾರ್ಥನೆ ಮಾಡಿ,ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮಾಜಿ ನಗರಸಭಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ರತ್ನಾಕರ್ ನಾಕ್ ಮುಂಬಯಿ, ಆಶೋಕ್ ನಾಕ್ ಪಾಂಡಿ , ರಾಮಯ್ಯ ನಾಕ್ ಮಂಟಮೆ, ಪ್ರಭಾಕರ್ ನಾಕ್ ತುಪ್ಪೆ, ಪತ್ನಿ ಸುಗುಣ ನಾಕ್, ಪುತ್ರರಾದ ನಗರಸಭಾ ಮಾಜಿ ಸದಸ್ಯ ನವೀನ್ ಚಂದ್ರ ನಾಕ್, ಕೃಷಿಕ ಶರತ್ ಚಂದ್ರ ನಾಕ್, ಪುತ್ರಿಯರಾದ ಅನುಪಮಾ ಪ್ರತಾಪ್ ನಾಕ್, ಕಾಪ್ರಿ ಮಂಜೇಶ್ವರ, ಜಯಾ ಅಶೋಕ್ ನಾಕ್ ಪಾಂಡಿ ಅಡೂರು, ಸೊಸೆಯಂದಿರಾದ ಶಕೀಲಾ ನವೀನ್, ರೂಪಾ ಶರತ್ ಚಂದ್ರ, ಸಹೋದರ ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.