HomePage_Banner
HomePage_Banner
HomePage_Banner
HomePage_Banner

ನಿರ್ಮಾಣ ಹಂತದ ಕಟ್ಟಡದಲ್ಲಿನ ಕೂಲಿ ಕಾರ್ಮಿಕೆ ಹೃದಯಾಘಾತಗೊಂಡು ಮೃತ್ಯು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಪಶ್ಚಿಮ ಬಂಗಾಳದ ಕಾರ್ಮಿಕೆಯೊಬ್ಬರು ಹೃದಯಾಘಾತಗೊಂಡು ಮೃತಪಟ್ಟ ಘಟನೆ ಜ.5ರ ರಾತ್ರಿ ನಡೆದಿದೆ. ಪಶ್ಚಿಮಬಂಗಾಳದ ಕೋರಲ್ ಮನಿಮಾಂಡ ಜಿಲ್ಲೆಯ ಬಾಬುಲಾಲ್ ಮುರ್ಮು ಅವರ ಪತ್ನಿ ಭಾರಕಿ ಸೊರೈನ್(೪೫ವ)ರವರು ಮೃತಪಟ್ಟವರು. ಅವರು ಹಲವಾರು ವರ್ಷಗಳಿಂದ ಬೆಂಗಳೂರು ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕೆಲ ಸಮಯಗಳಿಂದ ಪುತ್ತೂರಿನ ಮಯೂರ ಇನ್‌ಲ್ಯಾಂಡ್ ಕಟ್ಟಡದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಜ.5ರಂದು ರಾತ್ರಿ ಭಾರಕಿ ಸೊರೈನ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಪುತ್ತೂರು ನಗರ ಠಾಣಾ ಪೊಲೀಸರು ಮೃತರ ಗಂಡ ಬಾಬುಲಾಲ್ ಮುರ್ಮು ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಅವರ ಸಂಬಂದಿಕರಿಗೆ ಬಿಟ್ಟು ಕೊಡಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.