ಪುತ್ತೂರು : ಏಳ್ ಮಲೆತ್ತ ಶ್ರೀಶಬರಿ ಮಲೆಟ್ ಬೊಳ್ಳಿ ಮೂಡುಂಡ್ ಕಾಂತ ಮಲೆಟ್ ಎಂಬ ಭಕ್ತಿ ಸಂಗೀತವನ್ನು ಇತಿಹಾಸ ಪ್ರಸಿದ್ಧವಾದ ಉದ್ಯಾವರ ಅಣ್ಣದೈವಪಾತ್ರಿ ಶ್ರೀರಾಜ ಬೆಳ್ಚಾಪ್ಪಾಡರು ಶ್ರೀಅರಸು ಮಂಜಿಷ್ಣಾರು ದೈವಗಳ ಭಂಡಾರ ಮನೆಯಲ್ಲಿ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಗೊಳಿಸಲಾಯಿತು. ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಪುತ್ತೂರುರವರು ಸಂಗೀತ ನಿರ್ದೇಶಿಸಿ ಹಾಡಿರುವ, ಗುರುಸ್ವಾಮಿ ಹಾಗೂ ತುಳುನಾಡ ಹಿರಿಯ ಸಾಹಿತಿ ಸಂಜೀವ ಶೆಟ್ಟಿ ಮಾಡರವರ ಸಾಹಿತ್ಯ ರಚನೆ ಮತ್ತು ನಿರ್ಮಾಣದಲ್ಲಿ, ಜೆ.ಪಿ. ಬಂದ್ಯೋಡು ಸಂಕಲನದಲ್ಲಿ, ಶಿಶಿರ್ ರೈ ಸಹಕಾರದಲ್ಲಿ ಭಕ್ತಿಸಂಗೀತ ಮೂಡಿಬರಲಿದೆ.
ಶಬರಿಮಲೆ ಯಾತ್ರೆಯ ಈ ಸಂಕ್ರಮಣ ಕಾಲಘಟ್ಟದಲ್ಲಿ ಭಕ್ತ ಜನತೆಗಾಗಿ ಸಮರ್ಪಿಸಿದ ಭಕ್ತಿಗೀತೆ ಇದಾಗಿದ್ದು ಲಿಂಕ್ ಮೂಲಕ ಭಕ್ತಿಗೀತೆ ವೀಕ್ಷಿಸಬಹುದಾಗಿದೆ.