ಪುತ್ತೂರು: ತಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವಿಶೇಷವಾಗಿ 48 ದಿನಗಳ ಕಾಲ ನಿರಂತರವಾಗಿ ರಂಗಪೂಜೆ ಸೇವೆ ಕಾರ್ಯವನ್ನು ದೇವಸ್ಥಾನದ ಆಡಳಿತ ಮಂಡಳಿ ಆಯೋಜಿಸಿದ್ದು ಭಕ್ತಾದಿಗಳಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ. ಕ್ಷೇತ್ರ ಅಭಿವೃಧ್ಧಿ, ಸಾನಿಧ್ಯ ವೃದ್ಧಿ, ಸರ್ವ ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಸುಬ್ರಹ್ಮಣ್ಯನ ಆಲಯದಲ್ಲಿ ಒಂದು ಮಂಡಲ ಅವಧಿಯ ರಂಗ ಪೂಜೆಯು ನಡೆಯುತ್ತಿದ್ದು ಡಿ.2ರಿಂದ ಪ್ರಾರಂಭಗೊಂಡು ಜನವರಿ.18ರ ತನಕ ನಡೆಯಲಿದೆ. ಪ್ರತಿದಿನ 12 ಮಂದಿಗೆ ಪೂಜೆ ನಡೆಸಲು ಅವಕಾಶವಿದೆ. ೪೮ ದಿನಗಳ ಕಾಲ ನಿರಂತರವಾಗಿ ರಂಗಪೂಜೆ ವಿಶೇಷವಾಗಿ ನಡೆಯುತ್ತಿದ್ದು ಜ.೧೮ರಂದು ದೊಡ್ಡ ರಂಗಪೂಜೆಯಂದು ಕೊನೆಗೊಳ್ಳಲಿದೆ. ರಂಗಪೂಜೆಗೆ ರೂ.1000 ಹಾಗೂ ಅನ್ನದಾನದ ಬಾಬ್ತು ರೂ.೨೫೦೦ನ್ನು ನಿಗದಿಪಡಿಸಲಾಗಿದೆ. ಸೇವೆಗೆ ಹೆಸರು ಕೊಡಲು, ಹೆಚ್ಚಿನ ಮಾಹಿತಿಗಾಗಿ ಮೊ. 7019216390 ನ್ನು ಸಂಪರ್ಕಿಸಬಹುದೆಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.