HomePage_Banner
HomePage_Banner
HomePage_Banner
HomePage_Banner
Breaking News

ಆರ್ಲಪದವು ಕಮ್ಮ್ಯುನಿಕೇಶನ್ ಸೆಂಟರ್ ನಲ್ಲಿ ಆಧಾರ್ ಕಾರ್ಡ್ ಮೇಳ ಮತ್ತು ಆಯುಷ್ಮಾನ್ ಕಾರ್ಡ್ ಮೇಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪಾಣಾಜೆ ಗ್ರಾಮ ಪಂಚಾಯತ್ ನೂತನ ಸದಸ್ಯರಿಗೆ  ಗೌರವಾರ್ಪಣೆ
 
ನಿಡ್ಪಳ್ಳಿ:  ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ , ಆರ್ಲಪದವು ಕಮ್ಮ್ಯುನಿಕೇಶನ್ ಸೆಂಟರ್ ,ಡಿಜಿಟಲ್ ಸೇವಾ ಕೇಂದ್ರ ಆರ್ಲಪದವು, ಕೆಎಂಜೆ ಕಮ್ಮ್ಯುನಿಕೇಶನ್ ಸೆಂಟರ್,ಡಿಜಿಟಲ್ ಇಂಡಿಯಾ ಜನ ಸಂಪರ್ಕ ಕೇಂದ್ರ ಪುತ್ತೂರು ಇದರ ಆಶ್ರಯದಲ್ಲಿ ಆರ್ಲಪದವು ಕಮ್ಯುನಿಕೇಶನ್ ಸೆಂಟರ್  ಡಿಜಿಟಲ್ ಸೇವಾಕೇಂದ್ರದಲ್ಲಿ 4 ದಿನಗಳ ನಡೆದ ಆಧಾರ್ ಕಾರ್ಡ್ ಮೇಳ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಮೇಳದ ಉದ್ಘಾಟನಾ ಸಮಾರಂಭ ಜ.4 ರಂದು ನಡೆಯಿತು. ಅತಿಥಿಗಳೆಲ್ಲರೂ ತನ್ನ ಆಧಾರ್ ಕಾರ್ಡನ್ನು ತೋರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಭಾಗವಹಿಸಿದ ಪಿ.ಜಿ ಶಂಕರನಾರಾಯಣ ಭಟ್  ಪಾಣಾಜೆ ಇವರು ಮಾತನಾಡಿ ಇದೊಂದು ವಿಶಿಷ್ಟವಾದ ಕಾರ್ಯಕ್ರಮ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸಂಸ್ಥೆಯ ಸಂಸ್ಥಾಪಕ ಡಾ.ಹಾಜಿ ಯಸ್  ಅಬೂಬಕ್ಕರ್ ಆರ್ಲಪದವುರವರು ಉನ್ನತ ಸ್ಥಾನಕ್ಕೆ ಏರುವಂತಾಗಿದೆ ಎಂದರು. ಇಂತಹ ಜನೋಪಯೋಗಿ  ಕಾರ್ಯಕ್ರಮ ಆರ್ಲಪದವಿನಲ್ಲಿ ಆಗುತ್ತಿರುವುದು ಶ್ಲಾಘನೀಯ ಎಂದರು.  

ಪಂಚಾಯತ್  ನೂತನ ಸದಸ್ಯರಿಗೆ ಗೌರವಾರ್ಪಣೆ:
ಪಾಣಾಜೆ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಬಿ.ಜೆ.ಪಿ.ಬೆಂಬಲಿತ ಸದಸ್ಯರಾದ ಸುಭಾಷ್ ರೈ ಚಂಬರಕಟ್ಟ, ಭಾರತಿ ವೆಂಕಟರಮಣ ಭಟ್ ದೇವಸ್ಯ  ಜಯಶ್ರೀ ದೇವಸ್ಯ ,ಸುಲೋಚನಾ ಕೀಲಂಪಾಡಿ,ಮೋಹನ ನಾಯ್ಕ ತೂಂಬಡ್ಕ, ಕಾಂಗ್ರೆಸ್ಸ್ ಬೆಂಬಲಿತ ಸದಸ್ಯರಾದ ನಾರಾಯಣ ನಾಯ್ಕ ಅಪಿನಿಮೂಲೆ,ಕ್ರಷ್ಣಪ್ಪ ಪೂಜಾರಿ ಬೊಳ್ಳಿಂಬಳ ,ವಿಮಲ ಕೊಂದಲ್ಕಾನ ಪಕ್ಷೇತರ ಸದಸ್ಯರಾದ ಮೈಮೂನತುಲ್ ಮೆಹ್ರಾ, ಅಬೂಬಕ್ಕರ್ ಬೋಂಬೇ ಸ್ಟೋರ್,ಬೆಟ್ಟಂಪಾಡಿ ಗ್ರಾ.ಪಂ.ಸದಸ್ಯರಾದ ಮೊಯಿದೀನ್ ಕುಂಞ ಇವರನ್ನು ಗೌರವಿಸಲಾಯಿತು.ಅಲ್ಲದೆ ಈ ಕಾರ್ಯಕ್ರಮ ಆಯೋಜನೆಗೆ ಸಹಕಾರ ನೀಡಿದ ನೋಣಯ್ಯ ಆಲಂಕಾರು ಇವರನ್ನು ಗೌರವಿಸಿದರು.

ಸಮಾರಂಭದ  ವೇದಿಕೆಯಲ್ಲಿ ಲಕ್ಷ್ಮಿನಾರಾಯಣ ರೈ ಕೆದಂಬಾಡಿ ,ಸದಾಶಿವ ರೈ ಸೂರಂಬೈಲು  ನಾಗರಾಜ ಭಟ್ ಘಾಟೆ  ,ಜೆ.ಪಿ.ಅಬ್ದುಲ್ಲ ಹಾಜಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕರೂ ಸಂಸ್ಥೆಯ ಸಂಸ್ಥಾಪಕರೂ ಆದ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಸ್ವಾಗತಿಸಿ ಸಂಸ್ಥೆಯ ಮುಖ್ಯಸ್ಥೆ ರವಿಶೋಭಾ ವಂದಿಸಿದರು.  ಗಿರೀಶ್ ಗೋಲ್ವಾಲ್ಕರ್, ಯಸ್.ಉಮ್ಮರ್ ಶಾಪಿ, ಪ್ರೇಮರಾಜ್ ಆರ್ಲಪದವು ,ಸೀತಾ ಚಂಬರಕಟ್ಟ, ನಿರಂಜನ್ ಕಡಂದೇಲು,   ಯಸ್ .ಅಬ್ದುಲ್ ಅಜೀಜ್,ಶುಭಲಕ್ಷ್ಮಿ ಆರ್ಲಪದವು, ಚಿನ್ಮಯ ಕೃಷ್ಣ ಕಡಂದೇಲು , ಗೀತಾ ಭರಣ್ಯ, ಮತ್ತಿತರರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.