HomePage_Banner
HomePage_Banner
HomePage_Banner
HomePage_Banner

ಕೆಟಗರಿ ಬಳಿಕ ಆಪರೇಷನ್ ಭಯ | ಅಧಿಕಾರಕ್ಕಾಗಿ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು..!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಒಳಗಿಂದೊಳಗೆ ನಡೆಯುತ್ತಿದೆ ಗುಸುಗುಸು

ಸಿದ್ದಿಕ್ ಕುಂಬ್ರ

ಗ್ರಾಪಂ ಚುನಾವಣೆ ಮುಗಿದಿದೆ. ಇನ್ನು ಎಲ್ಲರ ಚಿತ್ತ ಕೆಟಗರಿಯತ್ತ. ಯಾವ ಗ್ರಾಪಂಗೆ ಯಾವ ರೀತಿಯ ಮೀಸಲಾತಿ ಬರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲದೇ ಇದ್ದರೂ ಕೆಲವು ಕಡೆಗಳಲ್ಲಿ ಹಾಗಾಗಬಹುದು, ಹೀಗಾಗಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಯಾವುದಕ್ಕೂ ಜನವರಿ ತಿಂಗಳ ಅಂತ್ಯದೊಳಗೆ ಪ್ರತೀ ಗ್ರಾಪಂಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಬಂದೇ ಬರುತ್ತದೆ.

ಆಪರೇಷನ್ ಭೀತಿ!
ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಮೀಸಲಾತಿ ಪ್ರಕಟವಾದ ಬಳಿಕ ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಪಂಗಳ ಚಿತ್ರಣ ಬದಲಾಗುವ ಸಾಧ್ಯತೆಯೂ ಇದೆ. ಅಧಿಕಾರದ ಆಸೆ ಎಲ್ಲರಿಗೂ ಇರುತ್ತದೆ. ತಾನು ಗ್ರಾಪಂ ಅಧ್ಯಕ್ಷನಾಗಬೇಕು ಎಂಬ ಹುಮ್ಮಸ್ಸಿನಲ್ಲಿರುವ ಪ್ರಭಾವಿ ವ್ಯಕ್ತಿಗಳು ಅಥವಾ ಪ್ರಭಾವಿ ಗ್ರಾಪಂ ಸದಸ್ಯರು ಆಪರೇಷನ್ ಮಾಡುವ ಸಾಧ್ಯತೆಯನ್ನು ತಳ್ಳುವಂತಿಲ್ಲ. ಪುತ್ತೂರು ಮತ್ತು ಕಬಡ ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಯ್ಕೆಯಾಗಿದ್ದಾರೆ. ಕೆಲವು ಗ್ರಾಪಂಗಳಲ್ಲಿ ಒಂದೇ ಪಕ್ಷದ ಬೆಂಬಲಿಗರು ಮಾತ್ರ ಆಯ್ಕೆಯಾಗಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ ಒಂದೆರಡು ಸದಸ್ಯರ ಅಂತರದಲ್ಲಿ ಅಧಿಕಾರಕ್ಕೆ ಬಂದಿದೆ.  ಸಾಮಾನ್ಯ ಅಭ್ಯರ್ಥಿಗಳಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆ ಮೀಸಲಾತಿ ಬಂದಿರುವ ಗ್ರಾಪಂಗಳಲ್ಲಿ ಆಪರೇಷನ್ ಭೀತಿ ಈಗಲೇ ಶುರುವಾಗಿದೆ.  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಾಗಿ ಪೈಪೋಟಿ ನಡೆಯುವ ಸಾಧ್ಯತೆಯೂ ಇದ್ದು ಈ ವೇಳೆ ಆಪರೇಷನ್ ಕಮಲ ಅಥವಾ ಆಪರೇಷನ್ ಹಸ್ತ ನಡೆಯುವ ಸಾಧ್ಯತೆಯೂ ದಟ್ಟವಾಗಿದೆ. ಈ ಎರಡೂ ಆಪರೇಷನ್‌ಗಳು ಎಷ್ಟರ ಮಟ್ಟಿಗೆ ಪರಿಣಾಮವನ್ನು ಬೀರಲಿದೆ ಎಂಬುದಕ್ಕೆ ಹೆಚ್ಚು ದಿನ ಕಾಯಬೇಕಾದ ಅವಶ್ಯಕತೆಯೂ ಇಲ್ಲ.

ಸಾಮಾನ್ಯ ಸ್ಥಾನ ಬಂದರೆ ಹೀಗೂ ನಡೆಯಬಹುದು
ಅಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗಳಿಗೆ ಬಂದಲ್ಲಿ ಸಹಕಾರ ನೀಡುವ ಕುರಿತು ಈಗಾಗಲೇ ಒಳಗಿಂದೊಳಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಯುವ ಸಾಧ್ಯತೆ ಇದೆ, ಒಂದು ವೇಳೆ ಲಾಬಿಯಲ್ಲಿ ಪ್ರಯೋಜನವಾಗದೇ ಇದ್ದಲ್ಲಿ ಇತರೆ ಸದಸ್ಯರ ಸಹಾಯವನ್ನು ಪಡೆದು ಅಧ್ಯಕ್ಷರಾಗುವ ತವಕದಲ್ಲಿ ಹಲವು ಮಂದಿ ಇದ್ದಾರೆ ಎಂಬ ಮಾಹಿತಿಯೂ ಬಹಿರಂಗವಾಗಿದೆ.

ಪಕ್ಷದ ಮುಖಂಡರಿಗೂ ಕಸಿವಿಸಿ
ಒಂದು ವೇಳೆ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ತನ್ನದೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ವಿರುದ್ದವಾಗಿ ಮತ ಚಲಾಯಿಸಿದರೂ ಪಕ್ಷದ ಮುಖಂಡರಿಗೆ ಅಥವಾ ಉಸ್ತುವಾರಿಗಳಿಗೆ ಏನೂ ಮಾಡುವಂತಿಲ್ಲ. ಗ್ರಾಪಂ ಚುನಾವಣಭೆ ಪಕ್ಷ ರಹಿತವಾಗಿ ನಡೆದಿರುವ ಕಾರಣ ಸದಸ್ಯರೊಳಗೆ ಒಪ್ಪಂದ ಏರ್ಪಟ್ಟು ಅಧ್ಯಕ್ಷೀಯ ಚುನಾವಣೆಯ ವೇಳೆ ಏನೂ ಬೇಕಾದರೂ ನಡೆಯಬಹುದು. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂದು ಸದಸ್ಯನ ಸದಸ್ಯತನದ ವಿರುದ್ದ ಯಾವ ಪಕ್ಷಗಳಿಗೂ ಮಾತನಾಡುವ ಹಕ್ಕಿಲ್ಲ. ಶಿಸ್ತುಕ್ರಮ ಕೈಗೊಳ್ಳುವ ಹಾಗೂ ಇಲ್ಲ. ಪಕ್ಷದ ತೀರ್ಮಾನಕ್ಕೆ ವಿರುದ್ದವಾಗಿ ನಡೆದರೆ ಮುಂದಿನ ಗ್ರಾಪಂ ಚುನಾವಣೆಯಲ್ಲಿ ಅತನಿಗೆ ಪಕ್ಷದ ಬೆಂಬಲಿಗ ಅಭ್ಯರ್ಥಿಯಗಿ ಸ್ಪರ್ದಿಸಲು ಅವಕಾಶ ನೀಡದೇ ಆತನ ವಿರುದ್ದ ಕ್ರಮ ಕೈಗೊಳ್ಳಬಹುದೇ ವಿನ ಮತ್ತೇನೂ ಮಾಡಲು ಯಾವ ಪಕ್ಷಗಳಿಗೂ ಸಾಧ್ಯವಾಗುವುದಿಲ್ಲ. ಕಳೆದ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಈ ರೀತಿಯ ಅನೇಕ ಘಟನೆಗಳು ನಡೆದು ಬಂಡಾಯ ಅಭ್ಯರ್ಥಿಗಳೇ ಇತರ ಸದಸ್ಯರ ಸಹಕಾರದಿಂದ ಅಧ್ಯಕ್ಷ ಹುದ್ದೆಗೇರಿದ್ದನ್ನು ಸ್ಮರಿಸಬಹುದಾಗಿದೆ. ಒಟ್ಟಿನಲ್ಲಿ ಗ್ರಾಪಂ ಚುನಾವಣೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಕೆಟಗರಿಯ ಬಳಿಕ ರಾಜಕೀಯದಲ್ಲಿ ಅಥವಾ ಗ್ರಾಪಂಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾದರೂ ಅದು ಅಚ್ಚರಿಯಲ್ಲ.

ಜಾತ್ಯಾತೀತ ಮತಗಳ ಒಗ್ಗೂಡುವಿಕೆಯಿಂದ 8 ಸೀಟು ಗೆಲುವು: ಅಶೋಕ್ ಸಂಪ್ಯ
ಪುತ್ತೂರು: ಆರ್ಯಾಪು ಗ್ರಾಮದಲ್ಲಿ ಕಳೆದ ಬಾರಿ ಆಡಳಿತ ನಡೆಸಿದವರ ಆಡಳಿತ ವೈಫಲ್ಯ ಮತ್ತು ಗ್ರಾಮದಲ್ಲಿ ಜಾತ್ಯಾತೀತ ಶಕ್ತಿಗಳ ಒಗ್ಗೂಡಿವಿಕೆಯಿಂದ ನಾವು ಈ ಬಾರಿ ಸೊನ್ನೆಯಿಂದ ೮ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಕಳೆದ ಗ್ರಾಪಂ ಚುನಾವಣೆಯಲ್ಲಿ ನಾವು ಒಂದು ಸೀಟು ಕೂಡಾ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ನಾವು ವ್ಯವಸ್ಥೆಯನ್ನು ಮಾಡಿದ್ದೆವು ಮತ್ತು ಗ್ರಾಪಂ ನಲ್ಲಿ ಕಳೆದ ಬಾರಿ ಆಡಳಿತ ನಡೆಸಿದವರ ಬಗ್ಗೆ ಇದ್ದ ಆಡಳಿತ ವಿರೋಧಿ ಅಲೆ ನಮಗೆ ಈ ಬಾರಿ ಎಂಟು ಸ್ಥಾನವನ್ನು ತಂದುಕೊಟ್ಟಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯವನ್ನು ಮಾಡುತ್ತೇವೆ.
ಅಶೋಕ್ ಸಂಪ್ಯ, ವಲಯ ಕಾಂಗ್ರೆಸ್ ಅಧ್ಯಕ್ಷರು ಆರ್ಯಾಪು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.