HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಳ: ಐದು ವರ್ಷದ ಮಗುವಿಗೆ ವಿಷಜಂತು ಕಡಿತ , ಆಸ್ಪತ್ರೆಗೆ ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಐದು ವರ್ಷದ ಮಗುವಿಗೆ ವಿಷಜಂತು ಕಡಿದು ಆಸ್ಪತ್ರೆಗೆ ದಾಖಲಾದ ಘಟನೆ ಜ.5ರ ರಾತ್ರಿ ನಡೆದಿದೆ.

ಕೋಡಿಂಬಾಳ ಗ್ರಾಮದ ಪಾದರೆ ನಿವಾಸಿ ಮಾಧವ ಎಂಬವರ ಮಗ ಕೀರ್ತನ್ ಆಸ್ಪತ್ರೆಗೆ ದಾಖಲಾದ ಬಾಲಕ. ಜ.5 ರಂದು ಪುತ್ತೂರಿಗೆ ತೆರಳಿ ತಾಯಿ ಕೋಮಲಾಕ್ಷಿ ಜೊತೆ ಮರಳಿ ಮನಗೆ ಬರುವ ವೇಳೆ ಸುಮಾರು 7:30 ರ ಸುಮಾರಿಗೆ ಪಾದರೆಗೆ ಹೋಗುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಗುವಿಗೆ ಮುಳ್ಳು ಚುಚ್ಚಿದ ಅನುಭವವಾಗಿದೆ.

ಮಗು ತಾಯಿ ಬಳಿ ತನಗಾದ ಅನುಭವನ್ನು ಹೇಳಿಕೊಂಡರೂ ಗುಡುಗು ಮಿಂಚಿನೊಂದಿಗೆ ಮಳೆಯೂ ಬರುತ್ತಿದ್ದ ಕಾರಣ ಮನೆ ತಲುಪುವ ಧಾವಂತದಲ್ಲಿದ್ದರು. ಬಳಿಕ ಮನೆ ಸೇರಿದ ಬಳಿಕ ಮಗುವನ್ನು ಸ್ನಾನ ಮಾಡಿಸಲು ಮುಂದಾದಾಗ ಮಗು ಸ್ಮೃತಿ ತಪ್ಪಿ ಬಿದ್ದಿದೆ. ಗಾಬರಿಗೊಂಡ ತಾಯಿ ಪಕ್ಕದ ಮನೆಯವರಿಗೂ ತಿಳಿಸಿದ್ದು ಆರಂಭದಲ್ಲಿ ದೋಷದಿಂದ ಈ ರೀತಿಯಾಗಿದೆ ಎಂದು ಭಾವಿಸಿದ್ದರು. ಬಳಿಕ ಬಾಯಿಯಿಂದ ನೊರೆ ಬರುವುದನ್ನು ಗಮನಿಸಿದಲ್ಲದೆ ಕಾಲಿಗೆ ಗಾಯವಾಗಿ ರಕ್ತ ಸೋರುವುದನ್ನು ಗಮನಿಸಿ ಕೂಡಲೇ ಕಡಬದ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆನೀಡಿ ವೈದ್ಯರ ಸಲಹೆಯಂತೆ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆತ್ತವರ ಸಮಯಪ್ರಜ್ಞೆಯಿಂದ ಮಗು ಈಗ ಚೇತರಿಸಿಕೊಂಡಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.