HomePage_Banner
HomePage_Banner
HomePage_Banner
HomePage_Banner

ಭರದಿಂದ ಜೀರ್ಣೋದ್ಧಾರಗೊಳ್ಳುತ್ತಿದೆ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಶಕ್ತಿದೇವತೆಯಾಗಿ ಪೂಜಿಸಲ್ಪಡುತ್ತಿರುವ ಮಾರಿಯಮ್ಮ ದೇವಿಯು ತನ್ನ ಹಲವು ರೂಪಗಳಲ್ಲಿ ಭಕ್ತರ ಕಷ್ಟಗಳನ್ನು ನಿವಾರಿಸಲು ತುಳುನಾಡಿನಲ್ಲಿ ಕಾರಣಿಕತೆಯನ್ನು ಮೆರೆಯುತ್ತಿದ್ದಾಳೆ. ನಾಡಿನ ಹಲವು ಕಡೆಗಳಲ್ಲಿ ಮಾರಿಯಮ್ಮ ದೇವಸ್ಥಾನಗಳನ್ನು ನಾವು ಕಾಣಬಹುದಾಗಿದೆ. ಇಂತಹ ಕಾರಣಿಕ ದೇವಸ್ಥಾನಗಳಲ್ಲಿ ಪುತ್ತೂರು ತಾಲೂಕಿನ ಬಪ್ಪಳಿಗೆ ರಾಗಿಕುಮೇರು ಶ್ರೀ ಮಾರಿಯಮ್ಮ ದೇವಸ್ಥಾನ ಕೂಡ ಒಂದಾಗಿದೆ. ಈ ದೇವಸ್ಥಾನವು ಇದೀಗ ಭರದಿಂದ ಜೀರ್ಣೋದ್ಧಾರಗೊಳ್ಳುತ್ತಿದೆ. ಇತ್ತೀಚೆಗೆ ದೈವಜ್ಞರಾದ ಶಶಿ ಪಂಡಿತ್ ಮಂಗಳೂರುರವರ ನೇತೃತ್ವದಲ್ಲಿ ನಡೆದ ಸ್ಥಳ ಪ್ರಶ್ನೆ ಚಿಂತನೆಯಲ್ಲಿ ಈ ಕ್ಷೇತ್ರದ ಮಾರಿಯಮ್ಮ ದೇವಿಯನ್ನು ಸಾಧಾರಣ ೧೫೦ ವರ್ಷಗಳ ಹಿಂದೆ ಹಿರಿಯರಾದ ದಿ.ಅಡ್ರೂರವರು ಸ್ಥಾಪಿಸಲ್ಪಟ್ಟು ನಿತ್ಯ ನೈಮಿತ್ಯಗಳನ್ನು ಹಾಗೂ ಪೂಜಾ ಉತ್ಸವಗಳು ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಚಿಂತನೆಯ ಪ್ರಕಾರ ಅತೀ ಪುರಾತನದಿಂದಲೂ ಆದಿದ್ರಾವಿಡ ಸಮಾಜ ಬಾಂಧವರಿಂಧ ಆರಾಧಿಸಿಕೊಂಡು ಬರುತ್ತಿರುವ ಕ್ಷೇತ್ರ ಇದಾಗಿದೆ ಎಂದು ಕಂಡು ಬಂದಿದೆ. ಸ್ಥಳ ಚಿಂತನೆಯಲ್ಲಿ ಕಂಡು ಬಂದಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ನಟ್ಟೋಜಿ ಮನೆತನ ಮತ್ತು ಇದಕ್ಕೆ ಸೇರಿದ ನೈರುತ್ಯ ದಿಕ್ಕಿನ ತೊಟ್ಟಿಲಕಯ ಶ್ರೀ ರಾಜರಾಜೇಶ್ವರಿ ಅಮ್ಮ ಹಾಗೂ ಬಲ್ನಾಡು ಶ್ರೀ ಉಳ್ಳಾಲ್ತಿ ದೇವಸ್ಥಾನಕ್ಕೂ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಿಗೂ ಅವಿನಾಭಾವ ಸಂಬಂಧ ಇದೆ ಎಂದು ತಿಳಿದು ಬಂದಿದೆ.
ಇದೀಗ ದೇವಸ್ಥಾನವು ಸುಮಾರು ೫೦ ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ. ಶ್ರೀ ಮಾರಿಯಮ್ಮ ದೇವಸ್ಥಾನ, ಪರಿವಾರ ದೈವಗಳಾದ ಶ್ರೀ ಕಲ್ಲುರ್ಟಿ, ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ಸತ್ಯಸಾರಾಮಣಿ, ಶ್ರೀ ಚಾಮುಂಡೇಶ್ವರಿ, ಶ್ರೀ ಗುಳಿಗ ಮುಂತಾದ ದೈವಗಳ ಗುಡಿಯನ್ನು ನಿರ್ಮಾಣ ಮಾಡುವ ಸತ್ಕಾರ್ಯವನ್ನು ಕೈಗೊಳ್ಳಲಾಗಿದೆ.

ದಾನಿಗಳ, ಭಕ್ತಾಧಿಗಳ ಸಹಕಾರ ಬೇಕಾಗಿದೆ
ಕಾರಣಿಕ ದೇವಿ ದೇವಸ್ಥಾನವಾಗಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಮಿತಿಯನ್ನು ರಚನೆ ಮಾಡಲಾಗಿದೆ. ಈಗಾಗಲೇ ದೇವಸ್ಥಾನ ಜೀರ್ಣೋದ್ಧಾರದ ಕೆಲಸ ನಡೆಯುತ್ತಿದೆ. ದೇವಸ್ಥಾನ ಹಾಗೂ ಗುಡಿಗಳು ಗೋಡೆಯ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಸಹಾಯ ಬೇಕಾಗಿರುವುದರಿಂದ ದಾನಿಗಳಿಂದ, ಭಕ್ತಾಧಿಗಳಿಂದ ಆರ್ಥಿಕ ನೆರವಿನ ಸಹಾಯವನ್ನು ಯಾಚಿಸಲಾಗಿದೆ. ಧನ ಸಹಾಯ ಮಾಡುವವರು ಕೆನರಾ ಬ್ಯಾಂಕ್ ಶಾಖೆ ನಂ.06151010193061 ಐಎಫ್‌ಸಿ ಕೋಡ್ ಸಿಎನ್‌ಆರ್‌ಬಿ0000615 ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.9945042973 ಗೆ ಸಂಪರ್ಕಿಬಹುದಾಗಿದೆ.


ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕೆಲಸವು ನಡೆಯುತ್ತಿದ್ದು ಗೋಡೆಯ ಹಂತದಲ್ಲಿದೆ. ದೇವಸ್ಥಾನದ, ಗುಡಿಗಳ ಗೋಡೆಯ ಕೆಲಸಗಳು ಮುಗಿದಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಸಹಾಯ ಬೇಕಾಗಿರುವುದರಿಂದ ದಾನಿಗಳ ಸಹಕಾರವನ್ನು ಬಯಸುತ್ತಿದ್ದೇವೆ.
ಮೋಹನ್,ಬಿ. ಕಾರ್ಯದರ್ಶಿ ಜೀರ್ಣೋದ್ಧಾರ ಸಮಿತಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.