HomePage_Banner
HomePage_Banner
HomePage_Banner
HomePage_Banner
Breaking News

ಪುತ್ತೂರಿನಲ್ಲಿ ಸ್ನೇಹೋತ್ಸವ-ಡಾ.ಹರಿಕೃಷ್ಣ ರೈಯವರಿಗೆ ಸನ್ಮಾನ | ಹರಿಕೃಷ್ಣ ರೈರ ಸಂಶೋಧನಾ ಕ್ಷೇತ್ರದ ಸಾಧನೆ ಮಾನವಕುಲಕ್ಕೆ ದೊಡ್ಡ ಕೊಡುಗೆ-ಕೆ.ಆರ್.ಗಂಗಾಧರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಪುತ್ತೂರು ಮತ್ತು ಸಮಾನ ಮನಸ್ಕ ಆಪ್ತೇಷ್ಟರ ಸೇರಿಗೆಯಲ್ಲಿ ಸ್ನೇಹೋತ್ಸವ ಕಾರ್‍ಯಕ್ರಮ ಪುತ್ತೂರಿನ ದರ್ಬೆ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ಜರಗಿತು. ಈ ಸಂದರ್ಭದಲ್ಲಿ ಸವಣೂರಿನ ಉದ್ಯಮಿ ಎನ್.ಸುಂದರ ರೈಯವರ ಅಳಿಯ ಸಂಶೋಧಕ ಕ್ಷೇತ್ರದ ಅಪ್ರತಿಮ ಸಾಧಕ ಡಾ.ಹರಿಕೃಷ್ಣ ರೈಯವರಿಗೆ ಸನ್ಮಾನ ಜರಗಿತು.

ನಿವೃತ್ತ ಪ್ರಾಂಶುಪಾಲ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಆರ್.ಗಂಗಾಧರ್‌ರವರು ಮಾತನಾಡಿ ಡಾ.ಹರಿಕೃಷ್ಣ ರೈರವರು ಸಂಶೋಧನಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡುವ ಮೂಲಕ ಮಾನವ ಕುಲಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮೇರಿಕಾದಿಂದ ೮ ಪೇಟೆಂಟ್‌ಗಳನ್ನು ಪಡೆದು ಕೊಂಡು ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಪ್ರಬಂಧಗಳನ್ನು ಮಂಡಿಸುವ ಮೂಲಕ ಸಾಧನೆಯ ಹಾದಿಯಲ್ಲಿ ಯಶಸ್ಸು ಮತ್ತು ಸಮಾಜದಿಂದ ಗೌರವವನ್ನು ಹರಿಕೃಷ್ಣ ರೈ ಪಡೆದುಕೊಂಡಿದ್ದಾರೆ ಎಂದು ಹೇಳಿ ಅಭಿನಂದಿಸಿದರು. ಡಾ.ಹರಿಕೃಷ್ಣ ರೈರವರನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್‌ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹರಿಕೃಷ್ಣ ರೈಯವರ ಪತ್ನಿ ಕಿರಣ್ ಹರಿಕೃಷ್ಣ ರೈ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸುಳ್ಯ ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉದ್ಯಮಿ ಚಿಕ್ಕಪ್ಪ ನಾಕ್ ಅರಿಯಡ್ಕರವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಹರಿಕೃಷ್ಣ ರೈಯವರ ತಂದೆ ನಾರಾಯಣ ರೈ ಸುಳ್ಯ, ಮಾವ ಸವಣೂರು ಎನ್ .ಸುಂದರ ರೈ ಉಪಸ್ಥಿತರಿದ್ದರು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಬೆಂಗಳೂರಿನ ಹರ್ಮನ್ ಇಂಟರ್‌ನ್ಯಾಶನಲ್‌ನ ನಿರ್ದೇಶಕ ಲೋಕೇಶ್ ರೈ ಕೊಲ್ಯ ವಂದಿಸಿದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಕಾರ್‍ಯಕ್ರಮ ನಿರೂಪಿಸಿದರು. ಸವಣೂರು ಸಿ.ಎ.ಬ್ಯಾಂಕ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಹಾಗೂ ಆದರ್ಶ ವಿವಿಧೋzಶ ಸಹಕಾರ ಸಂಘದ ಮುಖ್ಯ ಪ್ರಬಂಧಕ ವಸಂತ ಜಾಲಾಡಿರವರು ಸಹಕರಿಸಿದರು.

ಹರಿಕೃಷ್ಣ ರೈಯವರ ಸಾಧನೆಯು ಇತರರಿಗೆ ಪ್ರೇರಣೆಯಾಗಬೇಕು
ಸರಳ ವ್ಯಕ್ತಿತ್ವದ ಡಾ.ಹರಿಕೃಷ್ಣ ರೈರವರು ಸಂಶೋಧನಾ ಕ್ಷೇತ್ರದಲ್ಲಿ ಮಾಡಿರುವ ಅಪ್ರತಿಮ ಸಾಧನೆಗಾಗಿ ನಾವು ಅವರಿಗೆ ಸನ್ಮಾನಿಸಿ, ಗೌರವಿಸಿzವೆ. ಈ ಕಾರ್‍ಯಕ್ರಮ ಮುಂದಿನ ಯುವ ಪೀಳಿಗೆಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂಬುದೇ ನಮ್ಮ ಉzಶ. ಡಾ.ಹರಿಕೃಷ್ಣ ರೈರವರು ಮುಂದೆಯೂ ಸಂಶೋಧನಾ ಕ್ಷೇತ್ರದಲ್ಲಿ ಹೆಸರನ್ನು ಪಡೆಯಲಿ ಎಂಬುದೇ ನಮ್ಮ ಹಾರೈಕೆ.
– ಕೆ.ಸೀತಾರಾಮ ರೈ ಸವಣೂರು.
ಸಂಚಾಲಕರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.