HomePage_Banner
HomePage_Banner
HomePage_Banner
HomePage_Banner

ಸೇವೆ, ಯೋಜನೆಯಲ್ಲಿ ಪುತ್ತೂರು ಇನ್ನರ್ ವೀಲ್ ಕ್ಲಬ್ ಯಶಸ್ಸು ಸಾಧಿಸಿದೆ ಜಿಲ್ಲಾ ಅಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ವಾರಿಜಾ ಜಗದೀಶ್ ಘೋಷಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹೊಸ ಸದಸ್ಯರ ಸೇರ್ಪಡೆ, ಸಾಧಕರಿಗೆ ಸನ್ಮಾನ, ಬುಲೆಟಿನ್ ಬಿಡುಗಡೆ


ಪುತ್ತೂರು: ಕೋವಿಡ್-19 ಋಣಾತ್ಮಕವನ್ನು ಬದಿಗೊತ್ತಿ ಧನಾತ್ಮಕ ಚಿಂತನೆ ಬೆಳೆಸುವುದನ್ನು ಕಲಿಸಿಕೊಟ್ಟಿದೆ. ತಂತ್ರಜ್ಞಾನ ಬಳಕೆ ಮಾಡಲು ಕೊರೋನಾ ಪಾಠ ಹೇಳಿಕೊಟ್ಡಿದೆ. ಇಂತಹ ಸಂದರ್ಭದಲ್ಲಿ ಪುತ್ತೂರು ಇನ್ನರ್ ವೀಲ್ ಕ್ಲಬ್ ಸೇವೆ ಮತ್ತು ಹೊಸ ಯೋಜನೆ ಮೂಲಕ ಯಶಸ್ಸು ಸಾಧಿಸಿದೆ ಎಂದು ಕ್ಲಬ್‌ನ ಜಿಲ್ಲಾ ಅಧ್ಯಕ್ಷೆ ವಾರಿಜ ಜಗದೀಶ್ ಅವರು ಹೇಳಿದರು.

ಇನ್ನರ್‌ವೀಲ್ ಜಿಲ್ಲಾ ಚಯರ್‌ಮೆನ್ ಅವರ ಭೇಟಿ ಕಾರ್ಯಕ್ರಮಕ್ಕೆ ಸಂಬಂಧಿಸಿ ಕೋರ್ಟು ರಸ್ತೆಯಲ್ಲಿನ ಜೆಸಿಐ ಮುಳಿಯ ಟ್ರೈನಿಂಗ್ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾವಾಗಲು ಋಣಾತ್ಮಕವನ್ನೇ ನೋಡಿದರೆ ನಮ್ಮ ದಾರಿ ಕತ್ತಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೋವಿಡ್‌ನಿಂದಾಗಿ ಆನ್‌ಲೈನ್ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ಇಂಟರ್ ನ್ಯಾಷನಲ್ ಜೊತೆಗೂ ಮೀಟಿಂಗ್ ಮಾಡಿಕೊಡಲು ತಂತ್ರಜ್ಞಾನ ಹೇಳಿಕೊಟ್ಟಿದೆ ಇದಕ್ಕೆ ಕೊರೋನಾ ಅವಕಾಶ ಮಾಡಿಕೊಟ್ಟಿದೆ. ಕೊರೋನಾವನ್ನು ಮೆಟ್ಟಿ ನಿಂತು ಏನು ಬೇಕಾದರೂ ಸಾಧಿಸಬಹುದೆಂದು ಇನ್ನರ್‌ವೀಲ್ ಕ್ಲಬ್ ತೋರಿಸಿಕೊಟ್ಟಿದೆ. ಪುತ್ತೂರು ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಸೀಮಾ ನಾಗಾರಾಜ್ ಅವರು ಒಂದಲ್ಲಾ ಒಂದು ಹೊಸ ಹೊಸ ಯೋಜನೆಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಸರ್ವಿಸ್ ಪ್ರಾಜೆಕ್ಟ್ ತುಂಬಾ ಮಾಡಿದ್ದಾರೆ. ಜೊತೆಗೆ ಕ್ಲಬ್‌ಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿದ್ದಾರೆ. ಇಂತಹ ಸೇವೆ ಮಾಡುವ ಮನಸ್ಸನ್ನು ಇನ್ನರ್‌ವೀಲ್ಹ್ ಕ್ಲಬ್ ತಂದು ಕೊಟ್ಟಿದೆ ಎಂದ ಅವರು ಮುಂದಿನ ಇ ವೇಸ್ಟ್ ತಂತ್ರಜ್ಞಾನ ಬಳಕೆ ಮತ್ತು ಜಲಸಂಪನ್ಮೂಲ ಉಳಿಕೆಗೆ ಸಂಬಂಧಿಸಿ ಬಟ್ಟೆ ಖರೀದಿಯಲ್ಲೂ ಜಾಗೃತೆ ವಹಿಸಬೇಕೆಂದು ಅವರು ಹೇಳಿದರು.


ವರ್ಚುವಲ್ ಮೀಟ್ ಮೂಲಕ ಕಾರ್ಯಕ್ರಮ:

ಇನ್ನರ್‌ವೀಲ್ಹ್ ಕ್ಲಬ್ ಅಧ್ಯಕ್ಷೆ ಸೀಮಾ ನಾಗರಾಜ್ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ನಾವು ಹಿಂದೆ ಉಳಿದಿಲ್ಲ. ವರ್ಚುವಲ್ ಮೀಟ್ ಮೂಲಕ ಕಾರ್ಯಕ್ರಮ ಏರ್ಪಡಿಸಿದ್ದೇವೆ. ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಸಾಮೆತ್ತಡ್ಕದಲ್ಲಿ ಕುಡಿಯುವ ನೀರಿನ ಬಾವಿಗೆ ಕಾಯಕಲ್ಪ ಮಾಡಿದ್ದೇವೆ. ಅಲ್ಲಿನ ಪಾರ್ಕ್‌ಗೆ ೧೦೦ ಗೀಡಗಳ ಪೂರೈಕೆ ಮಾಡಲಿದ್ದೇವೆ. ಶಾಲೆಗೆ ನೀರಿನ ಟ್ಯಾಂಕ್, ಅಂಗನವಾಡಿಗೆ ಗೋಡೆಗಡಿಯಾರ, ಕುರ್ಚಿ, ಫ್ಯಾನ್ ಕೊಡುಗೆ ನೀಡುವ ಮೂಲಕ ಇನ್ನೂ ಹೊಸದಾದ ಯೋಜನೆ ಸಿದ್ದತೆ ಮಾಡಿದ್ದೇವೆ. ಈ ಯೋಜನೆಗಳೆಲ್ಲಾ ನಮ್ಮ ಕ್ಲಬ್‌ನ ಸದಸ್ಯರ ಸಹಕಾರದಿಂದ ಆಗಿದೆ ಎಂದರು.

ನಿರಂತರ ಸೇವಾ ಕಾರ್ಯಕ್ರಮ:
ಇನ್ನರ್‌ವೀಲ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ಅವರು ವಾರ್ಷಿಕ ವರದಿ ಮಂಡಿಸಿದರು. ಕ್ಲಬ್ ಮೂಲಕ ನಿರಂತರ ಸೇವಾ ಚಟುವಟಿಕೆ ಮಾಡುತ್ತಾ ಬಂದಿದ್ದೇವೆ. ಎಲ್ಲಾ ಕಾರ್ಯಕ್ರವು ಸದಸ್ಯರ ಸಹಕಾರದೊಂದಿಗೆ ನಡೆದಿದೆ ಎಂದರು.

ಸನ್ಮಾನ, ಸದಸ್ಯರ ಸೇರ್ಪಡೆ, ಬುಲೆಟಿನ್ ಬಿಡುಗಡೆ:
ಕ್ಲಬ್‌ನ ಸದಸ್ಯರಾಗಿದ್ದು ಇದೀಗ ನಗರಸಭಾ ಉಪಾಧ್ಯಕ್ಷೆ ಆಗಿರುವ ವಿದ್ಯಾ ಆರ್ ಗೌರಿ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಪ್ರಮಿಳಾ ರಾವ್ ಸನ್ಮಾನಿತರನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಇನ್ನರ್‌ವೀಲ್ ಕ್ಲಬ್‌ನ ಯೋಜನಾ ಬುಲೆಟಿನ್ ಬಿಡುಗಡೆಗೊಳಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಕ್ಸೇವಿಯರ್ ಡಿಸೋಜ ಅವರು ಬುಲೆಟಿನ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಹೊಸ ಸದಸ್ಯರ ಸೇರ್ಪಡೆಯನ್ನು ಜಿಲ್ಲಾ ಅಧಕ್ಷರು ನೆರವೆರಿಸಿದರು. ಅನಿತಾ ಕೆ, ಸೌಮ್ಯ ಕೆ.ಎಸ್ ಸಂದ್ಯಾ ಶಶಿಧರ್, ಜ್ಯೋತಿ ರಾಕೇಶ್ ಅವರನ್ನು ಕ್ಲಬ್‌ಗೆ ಬರಮಾಡಿಕೊಂಡು ಅವರಿಗೆ ಇನ್ನರ್‌ವೀಲ್ ಕ್ಲಬ್‌ನ ಬ್ಯಾಡ್ಜ್ ತೊಡಿಸುವ ಮೂಲಕ ಹೊಸದಾಗಿ ಸೇರ್ಪಡೆಗೊಳಿಸಿ ಗೌರವಿಸಲಾಯಿತು. ಸುಧಾಕಾರ್ಯಪ್ಪ, ರಾಜೇಶ್ವರಿ ನೂತನ ಸದಸ್ಯರನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ವಿವಾಹ ವಾರ್ಷಿಕೋತ್ಸವ, ಹುಟ್ಡು ಹಬ್ಬ ಆಚರಿಸುತ್ತಿರುವ ಸದಸ್ಯರನ್ನು ಗುರುತಿಸಿ ಅಭಿನಂದಿಸಲಾಯಿತು.

ಬಹುಮುಖ ಪ್ರತಿಭೆಗೆ ಆರ್ಥಿಕ ನೆರವು:
ಬಹುಮುಖ ಪ್ರತಿಭೆಯಾಗಿರುವ ವಿದ್ಯಾರ್ಥಿನಿ ಕೊಡಂಕಿರಿ ನಿವಾಸಿ ಅನನ್ಯ ಅವರಿಗೆ ಇನ್ನರ್ ವೀಲ್ಹ್ ಕ್ಲಬ್‌ನ ಮಾಜಿ ಅಧ್ಯಕ್ಷೆ ರಾಜಿ ಬಲರಾಮ ಆಚಾರ್ಯರವರು ಆರ್ಥಿಕ ನೆರವು ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ಅನನ್ಯ ಅವರು ತಾಳಮದ್ದಳೆಯ ಅರ್ಥವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ರೋಟರಿ ಕ್ಲಬ್‌ನ ಹಿರಿಯರಾದ ರಾಮಕೃಷ್ಣ, ರೋಟರಿಕ್ಲಬ್ ಅಧ್ಯಕ್ಷ ಕ್ಷೇವಿಯರ್ ಡಿಸೋಜ, ಉಪಾಧ್ಯಕ್ಷ ಮಧುನರಿಯೂರು, ರೋಟರಿ ಸ್ವರ್ಣದ ಅಧ್ಯಕ್ಷೆ ಸೆನೋರಿಟಾ ಆನಂದ್, ರೊಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ, ರೋಟರಿ ಸದಸ್ಯ ದೀಪಕ್, ನ್ಯಾಯವಾದಿ ನಾಗರಾಜ್, ಬಾಲಕೃಷ್ಣ ಕೊಳತ್ತಾಯರವರನ್ನು ಇನ್ನರ್‌ವೀಲ್ಹ್ ಕ್ಲಬ್ ನ ಸದಸ್ಯೆ ಪ್ರಮೀಳಾ ರಾವ್ ಅಭಿನಂದಿಸಿದರು. ನಿರ್ದೇಶಕಿ ಮಂಜುಳಾ ಅತಿಥಿಗಳನ್ನು ಬರಮಾಡಿಕೊಂಡರು. ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಸಹನಾ ಭವಿನ್ ಅವರು ಕ್ಲಬ್‌ನ ಜಿಲ್ಲಾ ಅಧ್ಯಕ್ಷೆ ವಾರಿಜ ಜಗದೀಶ್ ಅವರನ್ನು ಪರಿಚಯಿಸಿದರು. ಅಶ್ವಿನಿಕೃಷ್ಣ ಮುಳಿಯ, ಲೌಲಿ ಸೂರಜ್, ಸೆನೋರಿಟ ಆನಂದ್, ಸಂದ್ಯಾ ಪ್ರಾರ್ಥಿಸಿದರು. ರಾಜಿ ಬಲರಾಮ್ ಆಚಾರ್ಯ ಅವರು ಇನ್ನರ್ ವೀಲ್ ಕ್ಲಬ್ ಸಂದೇಶ ನೀಡಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸೀಮಾ ನಾಗರಾಜ್ ಸ್ವಾಗತಿಸಿದರು. ಉಪಾಧ್ಯಕ್ಷೆ ವೀಣಾ ವಂದಿಸಿದರು. ಕೃಷ್ಣವೇಣಿ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕ್ಲಬ್‌ನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿವಿಧ ಯೋಜನೆಗಳು ಲೋಕಾರ್ಪಣೆ
ಇನ್ನರ್‌ವೀಲ್ಹ್ ಜಿಲ್ಲಾ ಚಯರ್‌ಮೆನ್ ವಾರಿಜಾ ಜಗದೀಶ್ ಅವರ ಭೇಟಿ ಸಂದರ್ಭ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಬೆಳಿಗ್ಗೆ ನಿಷ್ಕ್ರೀಯವಾಗಿದ್ದ ಬಾವಿ ಮತ್ತು ಅದಕೆಕ ಹೋಗುವ ದಾರಿಯನ್ನು ಸ್ವಚ್ಛಗೊಳಿಸಲಾಯಿತು. ಸಾಮೆತ್ತಡ್ಕ ಪಾರ್ಕ್‌ನಲ್ಲಿ ಸಾಂಕೇತಿಕ ಗಿಡ ವಿತರಣೆ ನಡೆಯಿತು. ಸಾಮೆತ್ತಡ್ಕ ಶಾಲೆಗೆ ನೀರಿನ ಟ್ಯಾಂಕ್, ಅಂಗನವಾಡಿಗೆ ಗೋಡೆ ಗಡಿಯಾರ, ೫ ಕುರ್ಚಿ, ೧ ಫ್ಯಾನ್‌ನ್ನು ವಿತರಣೆ ಮಾಡಲಾಯಿತು. ಇನ್ನರ್‌ವೀಲ್ಹ್ ಕ್ಲಬ್ ಜಿಲ್ಲಾಧ್ಯಕ್ಷೆ ವಾರಿಜಾ ಜಗದೀಶ್, ಪುತ್ತೂರು ಅಧ್ಯಕ್ಷೆ ಸೀಮಾನಾಗಾರಾಜ್, ಪ್ರಧಾನ ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ಸೇರಿದಂತೆ ಸದಸ್ಯರು ಹಾಗೂ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯರಾದ ಬಾಲಚಂದ್ರ, ಮನೋಹರ್ ಕಲ್ಲಾರೆ, ಸಾಮೆತ್ತಡ್ಕ ಶಾಲೆಯ ಗೌರವ ಅಧ್ಯಕ್ಷ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಅಶ್ವಿನಿ ಚಂದ್ರ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.