HomePage_Banner
HomePage_Banner
HomePage_Banner
HomePage_Banner

ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  

ಪುತ್ತೂರು: ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ಇದರ ಮಹಾಸಭೆಯು ಜ.೩ರಂದು ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ನಡೆಯಿತು. ಸೆಕ್ಟರ್ ಅಧ್ಯಕ್ಷ ಅಬೂಬಕರ್ ಲತೀಫಿ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಡಿವಿಷನ್ ಸಮಿತಿಯ ಹುಸೈನ್ ಜೌಹರಿರವರು ದುಆ ನೆರವೇರಿಸಿ ಚಾಲನೆ ನೀಡಿದರು. ಎಸ್‌ವೈಎಸ್ ಈಶ್ವರಮಂಗಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಯಿಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷರಾಗಿ ಸ್ವಾದಿಕ್ ಇಂದಾದಿ ಹಾಗೂ ಅಬ್ದುಲ್ ರಹಿಮಾನ್ ಅನಿಳೆ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಝುಹ್ರಿ, ಕಾರ್ಯದರ್ಶಿಗಳಾಗಿ ಸಲ್ಮಾನ್ ಅಹ್ಮದ್ ಹಾಗೂ ಬಶೀರ್ ಮೀನಾವು, ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ಮೇನಾಲ, ಕ್ಯಾಂಪಸ್ ಕಾರ್ಯದರ್ಶಿಯಾಗಿ ನೌಫಾನ್ ಕಾವು ಆಯ್ಕೆಯಾದರು.

ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಹುಸೈನ್ ಜೌಹರಿ, ಶಫೀಕ್ ಸಅದಿ, ಅಬೂಬಕ್ಕರ್ ಲತೀಫಿ, ಇರ್ಫಾನ್ ಮಾಡನ್ನೂರು, ನಾಸಿರ್ ಕುಕ್ಕಾಜೆ, ರಫೀಕ್ ಹುಮೈದಿ, ರಮೀಝ್ ಕೊಯಿಲ, ಇರ್ಷಾದ್ ಕುಕ್ಕಾಜೆ, ಸಲೀತ್ ಮಾಡನ್ನೂರು, ಶಫೀಕ್ ಮೇನಾಲ, ಮುಸ್ತಫಾ ಮೀನಾವು, ಶಫೀಕ್ ಮುಂಡ್ಯ, ಜೌಹರ್ ಬಡಗನ್ನೂರ್, ಫೈಝಲ್ ಮೈಂದನಡ್ಕ, ಶರ್ವಾನ್ ಕಾವು ರವರನ್ನು ಆಯ್ಕೆ ಮಾಡಲಾಯಿತು.

ಸೆಕ್ಟರ್ ನಲ್ಲಿ ಹಲವಾರು ವರ್ಷಗಳ ಕಾಲ ಸಂಘಟನೆಗಾಗಿ ದುಡಿದು ಎಸ್‌ವೈಎಸ್ ಗೆ ಪಾದಾರ್ಪಣೆ ಗೊಂಡ ಶಂಶುದ್ದೀನ್ ಹನೀಫಿ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ತ್ವೈಬ ಎಜುಕೇಶನಲ್ ಸೆಂಟರ್ ಮುದರ್ರಿಸರಾದ ದಾವೂದುಲ್ ಹಕೀಂ ಹಿಮಮಿ ಸಖಾಫಿ ನೂತನ ಸಮಿತಿಗೆ ಶುಭಹಾರೈಸಿದರು. ಡಿವಿಷನ್ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಪಾಣಾಜೆ, ಕಾರ್ಯದರ್ಶಿ ಹಾರಿಸ್ ಅಡ್ಕ ಹಾಗೂ ರಫೀಕ್ ಮನ್ನಾಪು ರವರು ವೀಕ್ಷಕರಾಗಿ ಆಗಮಿಸಿದರು. ಕಾರ್ಯದರ್ಶಿ ಸ್ವಾದಿಕ್ ಇಂದಾದಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸಲೀಂ ಝುಹ್ರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.