- ಜ.10ರ ಮೊದಲು ಬುಕ್ ಮಾಡಿ, ಬೆಲೆಯೇರಿಕೆಯಿಂದ ತಪ್ಪಿಸಿಕೊಳ್ಳಿ..
ಮಂಗಳೂರು : ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿಯ ಅಧಿಕೃತ ವಿತಕರಾಗಿರುವ ಭಾರತ್ ಆಟೋಕಾರ್ಸ್ ಮಾರುತಿ ಕಾರು ಖರೀದಿದಾರರಿಗೊಂದು ಸುವರ್ಣಾವಕಾಶ ಕಲ್ಪಿಸಿದೆ. ಜನವರಿ 2021ರಿಂದ ಎಲ್ಲಾ ಕಾರುಗಳ ಬೆಲೆ ಏರಲಿದೆ ಎಂದು ಕಳೆದ ತಿಂಗಳಿನಿಂದಲೇ ಮಾಹಿತಿ ನೀಡಿದ್ದರೂ, ಗ್ರಾಹಕರು 2021 ಮೋಡೆಲ್ನ ಮೋಹದಿಂದ ಬೆಲೆ ಏರಿಕೆಯಾದರೂ ಚಿಂತೆಯಿಲ್ಲ ಹೊಸ ಮೋಡೆಲ್ ಖರೀದಿಸಬೇಕೆಂಬ ಮಹದಾಸೆಯಿಂದ ಕಾದು ಹೊಸ ವಾಹನಕ್ಕೆ ಬುಕ್ಕಿಂಗ್ ಮಾಡಿದ್ದರು. ಇದನ್ನೆಲ್ಲವನ್ನು ಮನಗಂಡು ಮಾರುತಿ ಅರೆನಾ ಸಂಸ್ಥೆಯು ಗ್ರಾಹಕರ ಅನುಕೂಲಕ್ಕೋಸ್ಕರ ‘ಪ್ರೈಸ್ ಪ್ರೊಟೆಕ್ಷನ್ ಸ್ಕೀಮ್’ ಮುಖಾಂತರ ಜನವರಿ 10ನೇ ತಾರೀಕಿನೊಳಗೆ ಬುಕ್ಕಿಂಗ್ ಮಾಡಿ, ಇದೇ ತಿಂಗಳ ೩೧ರೊಳಗೆ ಡೆಲಿವರಿ ತೆಗೆದುಕೊಂಡಲ್ಲಿ ಹಿಂದಿನ ದರದಲ್ಲೇ ಹೊಸ ಕಾರನ್ನು (ಎರ್ಟಿಗಾ ಹೊರತುಪಡಿಸಿ) ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಿದೆ. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಪುತ್ತೂರು ಶಾಖೆಯ ಸೇಲ್ಸ್ಟೀಮ್ ಲೀಡರ್ಗಳಾದ ಸಂತೋಷ್(9483542030) ಹಾಗೂ ಜಯರಾಜ್( 9538925330)ರವರನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಮಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಭಾರತ್ ಆಟೋಕಾರ್ಸ್ ಪುತ್ತೂರು, ಬೆಳ್ತಂಗಡಿ, ಮೂಡಬಿದ್ರಿ, ಮೂಲ್ಕಿ, ತೊಕ್ಕೊಟ್ಟು, ಕುಮಟಾ, ಆಂಕೋಲಾ, ಭಟ್ಕಳ, ಉಜಿರೆಯಲ್ಲಿ ಶಾಖೆಗಳನ್ನು ಹೊಂದಿದ್ದು, ಮಡಂತ್ಯಾರು, ನೆಲ್ಯಾಡಿ, ಸಿದ್ದಾಪುರದಲ್ಲಿ ಗ್ರಾಮೀಣ ಔಟ್ಲೆಟ್ಗಳನ್ನು ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಏನಿದು ಪ್ರೈಸ್ ಪ್ರೊಟೆಕ್ಷನ್ ಸ್ಕೀಮ್..?
ಜನವರಿ ೨೦೨೧ರಿಂದ ಎಲ್ಲಾ ಮಾರುತಿ ಕಾರುಗಳ ಬೆಲೆ ಏರಿಕೆಯಾಗಿದ್ದು, ಆದರೂ ಜನವರಿ ೧೦ರೊಳಗೆ ಬುಕ್ಕಿಂಗ್ ಮಾಡಿ ೩೧ರೊಳಗೆ ಡೆಲಿವರಿ ತೆಗೆದುಕೊಳ್ಳುವ ಗ್ರಾಹಕರಿಗೆ ಬೆಲೆ ಏರಿಕೆಯ ಭಯವಿಲ್ಲ, ಈ ಹಿಂದಿನ ದರದಲ್ಲೇ ಹೊಸ ಕಾರನ್ನುಖರೀದಿಸಬಹುದು. ಇನ್ನು ಕೇವಲ ಮೂರು ದಿನಗಳು ಮಾತ್ರ ಲಭ್ಯವಿದ್ದು, ಗ್ರಾಹಕರು ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದು.
ಇದೊಂದು ಉತ್ತಮ ಕೊಡುಗೆಯಾಗಿದ್ದು, ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಬೇರೆ ಯಾವುದೇ ಕಾರು ಉತ್ಪಾದನಾ ಸಂಸ್ಥೆಯು ಈ ರೀತಿಯ ಕೊಡುಗೆಯನ್ನು ನೀಡಿಲ್ಲ, ಆದರೆ ಮಾರುತಿ ಸುಝುಕಿ ಅರೆನಾ ಮಾತ್ರ ನೀಡಿದ್ದು ನಮ್ಮ ಸಂಸ್ಥೆಗೆ ಹೆಮ್ಮೆಯೆನಿಸುತ್ತಿದೆ.
ಡೆನಿಸ್ ಗೋನ್ಸಾಲ್ವಿಸ್ ಮಾರ್ಕೆಟಿಂಗ್ ಸೇಲ್ಸ್ ಹೆಡ್, ಭಾರತ್ ಅಟೋಕಾರ್ಸ್ ಮಂಗಳೂರು