ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೇಪುಳು ಸರ್ಕಲ್ ಬಳಿ ಆಟೋ ರಿಕ್ಷಾ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಮಡಿಕೇರಿ ಕಡೆಯಿಂದ ಉಪ್ಪಿನಂಗಡಿ ಕಡೆ ಹೋಗುತ್ತಿದ್ದ ಕಾರು ಕೇಪುಳು ಸಮೀಪ ಏಕಾಏಕಿ ನಿಧಾನವಾಗಿ ಚಲಿಸಿದಾಗ ಕಾರಿನ ಹಿಂದಿದ್ದ ರಿಕ್ಷಾ ಮುಂದಿದ್ದ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾದ ಎದುರು ಭಾಗ ಮತ್ತು ಕಾರಿನ ಹಿಂಬದಿಯ ಗಾಜಿಗೆ ಹಾನಿಯಾಗಿದ್ದು, ರಿಕ್ಷಾ ಚಾಲಕ ಬನ್ನೂರು ರಿಕ್ಷಾ ಪಾರ್ಕ್ ನ ಅನ್ವರ್ ಎಂಬವರಿಗೆ ಗಾಯವಾಗಿದೆ.ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.