ಪುತ್ತೂರು: ಪುತ್ತೂರು ಮುಖ್ಯರಸ್ತೆಯ ರೂಬಿ ಟವರ್ನ ಮೇಲಂತಸ್ತಿನ ಮೇಲ್ಛಾವಣಿಯ ಕಾಂಕ್ರೀಟ್ ಸ್ಲೇಬ್ ಕುಸಿತಗೊಂಡ ಘಟನೆ ಜ.7ರ ಮುಸ್ಸಂಜೆ ಸುಮಾರಿಗೆ ನಡೆದಿದೆ. ಹಗಲು ಪೂರ್ತಿ ಜನಸಂಧಣಿ ಇರುವ ಸ್ಥಳದಲ್ಲಿ ಮುಸ್ಸಂಜೆ ಯಾರು ಇಲ್ಲದ ವೇಳೆ ಘಟನೆ ನಡೆದಿದ್ದರಿಂದ ಭಾರಿ ದುರುಂತವೊಂದು ತಪ್ಪಿದೆ.
ಶ್ರೀ ಧರ್ಮಸ್ಥಳ ಕಟ್ಟಡದ ಪಕ್ಕದಲ್ಲಿರುವ ರೂಬಿ ಟವರ್ನ ಮೇಲಂತಸ್ತಿನ ಛಾವಣಿಯ ಕಾಂಕ್ರೀಟ್ ಸ್ಲೇಬ್ ಸಂಜೆ ವೇಳೆ ಏಕಾಏಕಿ ಕುಸಿದು ಪಕ್ಕದ ಶ್ರೀ ಧರ್ಮಸ್ಥಳ ಕಟ್ಟಡದ ಕಂಪೌಂಡ್ ಮತ್ತು ಸುಹಾಸಿನಿ ಪುಟಾಣಿ ಪ್ರಪಂಚದ ಬೋರ್ಡ್ನ ಮೇಲೆ ಬಿದಿದ್ದು, ಛಾವಣಿಯ ಸಿಮೆಂಟ್ ತುಂಡುಗಳೊಂದಿಗೆ ಕಬ್ಬಿಣದ ಸರಳುಗಳು ಕೂಡಾ ಬಿದ್ದು ಹೋಗಿದೆ. ದಿನ ನಿತ್ಯ ಹಗಲು ಈ ಭಾಗದಲ್ಲಿ ಜನಸಂಧಣಿ ಓಡಾಟ ನಡೆಸುತ್ತಿದ್ದು, ಮುಸ್ಸಂಜೆ ಹೊತ್ತಿಗೆ ಜನಸಂಧಣಿ ಇಲ್ಲದ ವೇಳೆ ಈ ಘಟನೆ ನಡೆದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ನಗರಸಭೆ ಇಂಜಿನಿಯರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.