ಪುತ್ತೂರು: ಕಥಾಬಿಂದು ಪ್ರಕಾಶನ 13ನೇ ವಾರ್ಷಿಕೋತ್ಸವ ಹಾಗೂ ಕಥಾಬಿಂದು ಸಾಹಿತ್ಯ ಸಾಂಸ್ಕ್ರತಿಕ ವೇದಿಕೆ ಹಾಗೂ ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂದೇಶ ಸಂಸ್ಕೃತಿ ಪ್ರತಿಷ್ಠಾನ ಇದರ ಸಹಯೋಗದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಯೋಗ, ಸಾಹಿತ್ಯ, ಗೈಡ್ಸ್ ಹೀಗೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಪ್ರಸ್ತುತ ಕಬಕ ಸರಕಾರಿ ಪ್ರೌಢಶಾಲೆ ಕನ್ನಡಭಾಷಾ ಶಿಕ್ಷಕಿ ಶಾಂತ ರವರಿಗೆ ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮುಂಬೈ ತೀಯ ಸಮಾಜ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ , ಶ್ರೀಪತಿ ಭಟ್, ಕ.ಸಾ.ಪ ಜಿಲ್ಲಾಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ, ರೇಮಂಡ್ ಡಿಕುನ್ಹಾ, ದ.ಕ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಸುರೇಶ ನೆಗಳಗುಳಿ, ವಂ.ಫಾ.ಪ್ರಾನ್ಸಿಸ್ ಅಸ್ಸೀಸಿ ಅಲ್ಮೇಡಾ, ಬೆಟ್ಟಂಪಾಡಿ ಸುಂದರಶೆಟ್ಟಿ, ಡಾ.ಶೇಖರ್ ಅಜೆಕಾರ್, ಬಿ.ಕೆ.ಮಾಧವರಾವ್, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಪಿ.ವಿ.ಪ್ರದೀಪ್ ಕುಮಾರ್, ಹರಿಶ್ಚಂದ್ರ ಸಾಲ್ಯಾನ್, ರಜನಿ ಅಶೋಕ ಜೀರಗ್ಯಾಳ ಸಹಿತ ಗಣ್ಯರು ಉಪಸ್ಥಿತರಿದ್ದರು.
ಶಾಂತರವರು ಕೇಂದ್ರಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿಯ ತಾಲೂಕು ಅಧ್ಯಕ್ಷೆಯಾಗಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.