ಪುತ್ತೂರು: ಕೆಳೆದ ಹಲವು ದಿನಗಳಿಂದ ಅಲ್ಲಲ್ಲಿ ಚಿರತೆಯದ್ದೆ ಸುದ್ದಿ ಇದೀಗ ಸಾಲ್ಮರ ಮುದ್ದೋಡಿಯಲ್ಲೂ ಜ.7ರಂದು ಚಿರತೆಯೊಂದರ ಹೆಜ್ಜೆ ಗುರುತು ಪತ್ತೆಯಾಗಿದೆ.
ಸಾಲ್ಮರ ಮುದ್ಡೋಡಿ ಸಮೀಪ ನೌಫಲ್ ಎಂಬವರ ಮನೆಯ ಹಿಂಬದಿಯ ಅಂಗಳದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ಹೆಜ್ಜೆ ಗುರುತುಗಳ ಪೊಟೋ ತೆಗೆದು ಹೋಗಿದ್ದಾರೆ. ಜ.7ರಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಮುದ್ದೋಡಿಯಲ್ಲಿ ನಾಯಿಗಳು ಜೋರಾಗಿ ಬೊಗಳುತ್ತಿರುವುದನ್ನು ಗಮನಿಸಿದ ನೌಪಲ್ ಮನೆ ಮಂದಿ ಬೆಳಿಗ್ಗೆ ಎದ್ದು ಹೊರ ನೋಡಿದಾಗ ಏನು ಕಾಣಲಿಲ್ಲ. ಬಳಿಕ ಸೂರ್ಯನ ಬೆಳಕು ಸರಿಯಾಗಿ ಬಿದ್ದಾಗ ಮನೆಯ ಹಿಂಬದಿಯ ಅಂಗಳದಲ್ಲಿ ಚರತೆಯ ಹೆಜ್ಜೆಗುರುತು ಪತ್ತೆಯಾಗಿದೆ. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಹೆಜ್ಜೆ ಗುರುತಿನ ಪೊಟೋ ತೆಗೆದು ಹೋಗಿದ್ದಾರೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ ಮತ್ತಿತರರು ಆಗಮಿಸಿದರು.