- ಕ್ರೀಡೆ ಸಾಮರಸ್ಯದ ಪ್ರತೀಕ : ಜಾಬಿರ್ ಅರಿಯಡ್ಕ
ಪುತ್ತೂರು: ಅರಿಯಡ್ಕ ಎಎಫ್ಸಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ದಶ ವಾರ್ಷಿಕ ಹಾಗೂ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಅರಿಯಡ್ಕ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಎಸ್ಡಿಪಿಐ ಜಿಲ್ಲಾ ಮುಖಂಡ ಜಾಬೀರ್ ಅರಿಯಡ್ಕ ಮಾತನಾಡಿ, ಕ್ರೀಡೆ ಸಾಮರಸ್ಯದ ಪ್ರತೀಕವಾಗಿದೆ. ಜಾತಿ,ಮತ,ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಒಟ್ಟಾಗಿ ಸೇರುವ ಮೂಲಕ ಸಮಾಜದಲ್ಲಿ ಸಾಮರಸ್ಯ, ಸಹೋದರತೆಯನ್ನು ಕ್ರೀಡೆ ಹುಟ್ಟು ಹಾಕಿದೆ ಎಂದು ಹೇಳಿ ಶುಭ ಹಾರೈಸಿದರು. ಎ ಎಫ್ ಸಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಹಮೀದ್ ಎಸ್.ಎ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕುಂಬ್ರ ಎಂ.ಕೆ ಗ್ರೂಪ್ನ ರಿಯಾಝ್ ಜಾರತ್ತಾರು, ಅರಿಯಡ್ಕ ಗ್ರಾಪಂ ಸದಸ್ಯ ಹರೀಶ್ ರೈ ಜಾರತ್ತಾರು ,ಅಶ್ರಫ್ ಸನ್ ಶೈನ್ ,ದಾಮೋದರ ರೈ,ಗಣೇಶ್ ರೈ ಪಾಲ್ಗುಣಿ, ನಿತಿನ್ ಪೂಜಾರಿ ಮಡ್ಯಂಗಳ ,ಎ ಎಫ್ ಸಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ನ ಗೌರವಾಧ್ಯಕ್ಷ ಮಹಮ್ಮದ್ ಪುತ್ತು, ಕುಂಬ್ರ ಎಂ.ಕೆ ಗ್ರೂಪ್ನ ಮಾನು ಅರಿಯಡ್ಕ ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿ ಪತ್ರಕರ್ತರಾದ ಸಿಶೇ ಕಜೆಮಾರ್ ಮತ್ತು ಯೂಸುಫ್ ರೆಂಜಲಾಡಿ ಆಗಮಿಸಿ ಶುಭ ಹಾರೈಸಿದರು. ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಚಾಂಪಿಯನ್ ಸುಲ್ತಾನ್ ಅಟೆಕರ್ಸ್ ಚಾಂಪಿಯನ್ ಪಡೆದುಕೊಂಡರೆ, ಡಿಎಬಿ ಸ್ಟ್ರೈಕರ್ಸ್ ಗಟ್ಟಮನೆ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.