HomePage_Banner
HomePage_Banner
HomePage_Banner
HomePage_Banner

ಶ್ರೀ. ರಾಮಕೃಷ್ಣಸೊಸೈಟಿ ಮೂರನೇ ತ್ರೈಮಾಸಿಕ ಅವಧಿಯಲ್ಲಿ ರೂ. 101 ಕೋಟಿ ವ್ಯವಹಾರ ಹೆಚ್ಚಳ, 25% ವೃದ್ಧಿಯೊಂದಿಗೆ ಸಾರ್ವಕಾಲಿಕ ಪ್ರಗತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು : 1994ರಲ್ಲಿ ಸ್ಥಾಪನೆಯಾದ ಶ್ರೀ ರಾಮಕೃಷ್ಣಕ್ರೆಡಿಟ್‌ಕೋ-ಓಪರೇಟಿವ್ ಸೊಸೈಟಿ ಲಿ., ಮಂಗಳೂರು ಸದಸ್ಯರ ಸೇವೆಯಲ್ಲಿ ಯಶಸ್ವಿ ೨೬ ವರ್ಷಗಳನ್ನು ಪೂರೈಸಿದೆ. ೨೦೨೦-೨೧ನೇ ಸಾಲಿನ ಮೂರನೇ ತ್ರೈಮಾಸಿಕ ಅವಧಿ ಅಂತ್ಯ ದಿನಾಂಕ೩೧.೧೨.೨೦೨೦ಕ್ಕೆ,ರೂ. ೨೮೧ಕೋಟಿಠೇವಣಿ ಹಾಗೂ ರೂ. ೨೩೦ ಕೋಟಿ ಹೊರಬಾಕಿ ಸಾಲದೊಂದಿಗೆ ಸಂಘವು ಒಟ್ಟುರೂ. ೫೧೧ಕೋಟಿಮೀರಿದ ವ್ಯವಹಾರವನ್ನು ದಾಖಲಿಸಿದೆ. ಸಂಘವು ಸ್ಥಾಪನೆಯ೨೬ ವರ್ಷದಲ್ಲಿರೂ. ೫೦೦ಕೋಟಿ ಮೀರಿದಒಟ್ಟು ವ್ಯವಹಾರದ ಮೈಲಿಗಲ್ಲನ್ನು ದಾಖಲಿಸಿದ ಅವಿಭಜಿತದಕ್ಷಿಣಕನ್ನಡ ಮತ್ತುಉಡುಪಿ ಜಿಲ್ಲೆಯ ಪ್ರಥಮಕ್ರೆಡಿಟ್ ಸಹಕಾರಿ ಸಂಘವಾಗಿ ಮೂಡಿ ಬಂದಿದೆ.

೩೧.೧೨.೨೦೧೯ಕ್ಕೆಇದ್ದ ವ್ಯವಹಾರವನ್ನು ೩೧.೧೨.೨೦೨೦ರ ವ್ಯವಹಾರಕ್ಕೆ ಹೋಲಿಸಿದಾಗ, ಠೇವಣಾತಿಯಲ್ಲಿ ರೂ.೫೫ಕೋಟಿಹೆಚ್ಚಳದೊಂದಿಗೆ ಶೇ.೨೪ ವೃದ್ಧಿ, ಸಾಲ ಮತ್ತು ಮುಂಗಡದಲ್ಲಿ ರೂ.೪೬ಕೋಟಿ ಹೆಚ್ಚಳದೊಂದಿಗೆ ಶೇ.೨೫ ವೃದ್ಧಿ, ಒಟ್ಟು ವ್ಯವಹಾರದಲ್ಲಿ ರೂ.೧೦೧ಕೋಟಿಹೆಚ್ಚಳ, ಶೇ.೨೫ ವೃದ್ಧಿಯೊಂದಿಗೆ ಸಾರ್ವಕಾಲಿಕ ಪ್ರಗತಿಯನ್ನುದಾಖಲಿಸಿದೆ. . Gross NPA ರೂ.೨೨ ಲಕ್ಷಮಾತ್ರಇದ್ದು, ಹೊರಬಾಕಿ ಸಾಲದ ಶೇ. ೦.೧೦%ಕ್ಕೆ ಸೀಮಿತವಾಗಿದೆ. ನಿವ್ವಳ ಅನುತ್ಪಾದಕ ಆಸ್ತಿ (Net NPA) ೦% ಪ್ರಮಾಣವನ್ನುಕಾಯ್ದುಕೊಂಡಿದ್ದು, ನಿವ್ವಳ ಲಾಭದಲ್ಲಿ ರೂ.೮೨ ಲಕ್ಷ ಹೆಚ್ಚಳದೊಂದಿಗೆ ಶೇ.೨೩ ವೃದ್ಧಿಯನ್ನುಕಂಡಿದೆ.

ಸಂಘವು ತನ್ನಕಾರ್ಯವ್ಯಾಪ್ತಿ ಅವಿಭಜಿತದ.ಕ. ಜಿಲ್ಲೆಯಲ್ಲಿ ಪ್ರಸ್ತುತ೨೦ ಶಾಖೆಗಳನ್ನು ಹೊಂದಿದ್ದು, ಮುಂದಿನ ವರ್ಷದಲ್ಲಿ೫ ಹೊಸ ಶಾಖೆಗಳನ್ನು ಆರಂಭಿಸಲು ಹಾಗೂ ಸಂಘಕ್ಕೆ ಹೊಸ ಸುಸಜ್ಜಿತಕೇಂದ್ರಕಛೇರಿಕಟ್ಟಡ ನಿರ್ಮಾಣದಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆಎಂದು ಸಂಘದಅಧ್ಯಕ್ಷರಾದ ಶ್ರೀ ಕೆ ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.