ಪುತ್ತೂರು: ನವೋದಯ ಸ್ವಸಹಾಯ ಸಂಘ `ಜಗಲಿಕಟ್ಟೆ’ ಕುಂಬ್ರದಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು. ಕುಂಬ್ರ ಎಸ್ಸಿಡಿಸಿಸಿ ಬ್ಯಾಂಕ್ ಮೆನೇಜರ್ ಹರೀಶ್ ಕುಮಾರ್ರವರು ಪುಸ್ತಕ ನೀಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಲೂಕು ಸೂಪರ್ವೈಸರ್ ಚಂದ್ರಶೇಖರ್ರವರು ನವೋದಯ ಗುಂಪಿನ ಬಗ್ಗೆ ಮಾಹಿತಿ ನೀಡಿದರು.
ವಲಯ ಪ್ರೇರಕಿ ಹರಿಣಾಕ್ಷಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ, ಕಾರ್ಯದರ್ಶಿಯಾಗಿ ಭವ್ಯ ರೈ, ಸದಸ್ಯರಾಗಿ ಶ್ಯಾಮ್ಸುಂದರ್ ರೈ ಕೊಪ್ಪಳ, ಮೆಲ್ವಿನ್ ಮೊಂತೆರೋ, ನಾರಾಯಣ ಪೂಜಾರಿ ಕುರಿಕ್ಕಾರ, ಉದಯ ಆಚಾರ್ಯ, ಮಾಧವ ಎಸ್.ರೈ ಕುಂಬ್ರ, ಗೋವಿಂದ ಸಫಲ್ಯ, ಬಾಬು, ಸಂಶುದ್ದೀನ್ ಎ.ಆರ್ರವರುಗಳನ್ನು ಆಯ್ಕೆ ಮಾಡಲಾಯಿತು.